ಆಸ್ಪತ್ರೆಯಲ್ಲಿ ಟಾಯ್ಲೆಟ್​ಗಾಗಿ ಕೊರೊನಾ ಸೋಂಕಿತ ವ್ಯಕ್ತಿ ಅಲೆದಾಟ!

|

Updated on: Mar 03, 2020 | 12:38 PM

ಹೈದರಾಬಾದ್: ತೆಲಂಗಾಣದ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯನ್ನ ಸೇನಾ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಸದ್ಯ ಸೋಂಕಿತ ವ್ಯಕ್ತಿಗೆ ಗಾಂಧಿ ಆಸ್ಪತ್ರೆಯ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದರೆ ಇನ್ನುಳಿದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸೇನಾ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳು ಚಿಂತಿಸಿದ್ದಾರೆ. ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಶೌಚಾಲಯ ಸಮಸ್ಯೆ ಎದುರಾಗಿದೆ. ಶೌಚಾಲಯ ರೂಮ್​ಗಾಗಿ ಅಸ್ಪತ್ರೆಯಲ್ಲೆಲ್ಲಾ ಸೋಂಕಿತ […]

ಆಸ್ಪತ್ರೆಯಲ್ಲಿ ಟಾಯ್ಲೆಟ್​ಗಾಗಿ ಕೊರೊನಾ ಸೋಂಕಿತ ವ್ಯಕ್ತಿ ಅಲೆದಾಟ!
Follow us on

ಹೈದರಾಬಾದ್: ತೆಲಂಗಾಣದ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯನ್ನ ಸೇನಾ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಸದ್ಯ ಸೋಂಕಿತ ವ್ಯಕ್ತಿಗೆ ಗಾಂಧಿ ಆಸ್ಪತ್ರೆಯ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದರೆ ಇನ್ನುಳಿದವರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸೇನಾ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳು ಚಿಂತಿಸಿದ್ದಾರೆ.

ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಶೌಚಾಲಯ ಸಮಸ್ಯೆ ಎದುರಾಗಿದೆ. ಶೌಚಾಲಯ ರೂಮ್​ಗಾಗಿ ಅಸ್ಪತ್ರೆಯಲ್ಲೆಲ್ಲಾ ಸೋಂಕಿತ ವ್ಯಕ್ತಿ ಅಲೆದಾಡುತ್ತಿದ್ದಾನೆ. ಆತನನ್ನು ನೋಡಿ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳು ತಪ್ಪಿಸಿಕೊಂಡು ಓಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಾರ್ವಜನಿಕ ಶೌಚಾಲಯವನ್ನು ಟೆಕ್ಕಿ ಬಳಸಿರುವ ಕಾರಣ ವೈರಸ್ ಸೋಂಕಿತ ಟೆಕ್ಕಿ ಬಳಸಿದ ಶೌಚಾಲಯ ಬಳಸುವುದಕ್ಕೆ ಆಸ್ಪತ್ರೆ ವೈದ್ಯರು, ರೋಗಿಗಳ ಹಾಗೂ ಸಂಬಂಧಿಕರು ಹಿಂದೇಟು ಹಾಕುತ್ತಿದ್ದಾರೆ.

Published On - 12:37 pm, Tue, 3 March 20