ಕಾಳಸಂತೆಯಲ್ಲಿ ಕೊರೊನಾ ಮದ್ದು ಮಾರಾಟ, ದುಪ್ಪಟ್ಟು ಹಣ ಕೊಡಲಾಗದೆ ಜನರ ಪರದಾಟ

| Updated By:

Updated on: Jul 11, 2020 | 2:12 PM

ಮುಂಬೈ: ವಿಶ್ವದಲ್ಲಿ ಕೊರೊನಾ ಸಂಪೂರ್ಣವಾಗಿ ವಾಸಿಯಾಗೋಕೆ ಪ್ರಬಲವಾದ ಔಷಧಿಯೇ ಇಲ್ಲ. ಈ ಮಧ್ಯೆ ಕೊಂಚ ಯಶಸ್ಸು ಕಂಡಿರುವ ಅಮೆರಿಕದ ಗೀಲೆಡ್ ಸೈನ್ಸಸ್ (Gilead Sciences) ಕಂಪನಿಯ ರೆಮ್​ಡೆಸಿವಿರ್ (Remdesivir) ಔಷಧಿಯನ್ನ ರೋಗಿಗಳಿಗೆ ನೀಡೋಕೆ ಐಸಿಎಂಆರ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ನಡುವೆ, ರೆಮ್​ಡೆಸಿವಿರ್ ಮತ್ತು ಟೋಸಿಲಿಜುಮಾಬ್​ (Tocilizumab) ಔಷಧಿಗಳ ಕಾಳಸಾಂತೆ ವ್ಯಾಪಾರ ಶುರುವಾಗಿದೆ. ಇದರಿಂದ ಔಷಧಿ ಖರೀದಿಗಾಗಿ ರೋಗಿಗಳ ಸಂಬಂಧಿಕರು ಪರದಾಡುವಂತಾಗಿದೆ. ಅಂದ ಹಾಗೆ, ಕಿಲ್ಲರ್ ಕೊರೊನಾಗೆ ಮೂಗುದಾರ ಹಾಕೋಕೆ ಇದುವರೆಗೆ ಯಾವುದೇ ಪ್ರಬಲವಾದ ಮದ್ದು ಸಿಕ್ಕಿಲ್ಲ. […]

ಕಾಳಸಂತೆಯಲ್ಲಿ ಕೊರೊನಾ ಮದ್ದು ಮಾರಾಟ, ದುಪ್ಪಟ್ಟು ಹಣ ಕೊಡಲಾಗದೆ ಜನರ ಪರದಾಟ
Follow us on

ಮುಂಬೈ: ವಿಶ್ವದಲ್ಲಿ ಕೊರೊನಾ ಸಂಪೂರ್ಣವಾಗಿ ವಾಸಿಯಾಗೋಕೆ ಪ್ರಬಲವಾದ ಔಷಧಿಯೇ ಇಲ್ಲ. ಈ ಮಧ್ಯೆ ಕೊಂಚ ಯಶಸ್ಸು ಕಂಡಿರುವ ಅಮೆರಿಕದ ಗೀಲೆಡ್ ಸೈನ್ಸಸ್ (Gilead Sciences) ಕಂಪನಿಯ ರೆಮ್​ಡೆಸಿವಿರ್ (Remdesivir) ಔಷಧಿಯನ್ನ ರೋಗಿಗಳಿಗೆ ನೀಡೋಕೆ ಐಸಿಎಂಆರ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ನಡುವೆ, ರೆಮ್​ಡೆಸಿವಿರ್ ಮತ್ತು ಟೋಸಿಲಿಜುಮಾಬ್​ (Tocilizumab) ಔಷಧಿಗಳ ಕಾಳಸಾಂತೆ ವ್ಯಾಪಾರ ಶುರುವಾಗಿದೆ. ಇದರಿಂದ ಔಷಧಿ ಖರೀದಿಗಾಗಿ ರೋಗಿಗಳ ಸಂಬಂಧಿಕರು ಪರದಾಡುವಂತಾಗಿದೆ.

ಅಂದ ಹಾಗೆ, ಕಿಲ್ಲರ್ ಕೊರೊನಾಗೆ ಮೂಗುದಾರ ಹಾಕೋಕೆ ಇದುವರೆಗೆ ಯಾವುದೇ ಪ್ರಬಲವಾದ ಮದ್ದು ಸಿಕ್ಕಿಲ್ಲ. ಆದ್ರೆ ಸದ್ಯಕ್ಕೆ ಕೊರೊನಾ ರೋಗಿಗಳಿಗೆ ರೆಮ್​ಡೆಸಿವಿರ್ ಕೊಡೋಕೆ ಐಸಿಎಂಆರ್ ಒಪ್ಪಿಗೆ ನೀಡಿದೆ. ಭಾರತದಲ್ಲಿ ಸಿಪ್ಲಾ (Cipla) ಸೇರಿದಂತೆ ಮೂರು ಕಂಪನಿಗಳು ರೆಮ್​ಡೆಸಿವಿರ್ ಉತ್ಪಾದನೆ ಮತ್ತು ಮಾರಾಟಕ್ಕೆ ಗೀಲೆಡ್ ಸೈನ್ಸಸ್ ಕಂಪನಿಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿವೆ. ಒಂದು ವೇಳೆ ಭಾರತದ ಕಂಪನಿಯೇ ರೆಮ್​ಡೆಸಿವಿರ್ ಉತ್ಪಾದಿಸಿ ಮಾರಾಟ ಮಾಡಿದ್ರೆ 4,100ರೂಪಾಯಿಗೆ ಔಷಧಿ ಸಿಗಲಿದೆ. ಆದರೆ ಸದ್ಯ ಭಾರತದಲ್ಲಿ ರೆಮ್​ಡೆಸಿವಿರ್​ನ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿಲ್ಲ. ಹಾಗಾಗಿ, ವೈದ್ಯರ ಸೂಚನೆ ಮೇರೆಗೆ ರೆಮ್​ಡೆಸಿವಿರ್​ನ ನೆರೆಯ ರಾಷ್ಟ್ರ ಬಾಂಗ್ಲಾದೇಶದ ಕಂಪನಿಯಿಂದ ಆಮದು ಮಾಡಿಕೊಳ್ಳಲಾಗ್ತಿದೆ.

ಈ ಮಧ್ಯೆ, ಮುಂಬೈನಲ್ಲಿ ರೆಮ್​ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಔಷಧಿಯನ್ನ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗ್ತಿದೆ. 4,100 ರೂಪಾಯಿ ಮೌಲ್ಯದ ರೆಮ್​ಡೆಸಿವಿರ್​ನ ಮುಂಬೈನಲ್ಲಿ 40 ಸಾವಿರಕ್ಕೆ ಮಾರಾಟ ಮಾಡಲಾಗ್ತಿದೆ. ಇನ್ನು ಟೋಸಿಲಿಜುಮಾಬ್ ಔಷಧಿಗೂ ಬೇಡಿಕೆ ಹೆಚ್ಚಾಗಿದೆ. ರೋಗಿಗಳ ಸಂಬಂಧಿಕರು ಔಷಧಿಯ ಡೀಲರ್ ಹತ್ರ ಟೋಸಿಲಿಜುಮಾಬ್​ಗಾಗಿ ಇಡೀ ರಾತ್ರಿ ಕಾಯುತ್ತಿದ್ದಾರೆ.

ರೆಮ್​ಡೆಸಿವಿರ್ ಔಷಧಿಯನ್ನ ಸರ್ಕಾರಿ ಆಸ್ಪತ್ರೆಗೆ ಮಾರಾಟ ಮಾಡ್ಬೇಕು ಅಂತಾ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಆದೇಶಿಸಿದೆ. ಇತ್ತ ಮುಂಬೈ ಪಾಲಿಕೆ ಕೂಡ 15 ಸಾವಿರ ರೆಮ್​ಡಿಸಿವರ್ ಔಷಧಿಯ ಪೂರೈಕೆಗೆ ಆರ್ಡರ್ ಮಾಡಿದೆ. ಆದರೂ ಇವುಗಳ ಬೇಡಿಕೆ ಹೆಚ್ಚಿರುವುದರಿಂದ ಕಾಳಸಂತೆಯಲ್ಲಿ ಔಷಧಿಯ ಮಾರಾಟ ಜೋರಾಗಿದೆ. ​ಒಟ್ನಲ್ಲಿ, ಕೊರೊನಾ ಮರಣ ಮದೃಂಗದ ನಡುವೆ ರೆಮ್​ಡೆಸಿವಿರ್​ನ ಸಂಜೀವಿನಿಯಂತೆ ನೋಡಲಾಗ್ತಿದೆ. ಇದ್ರಿಂದ ಡಿಮ್ಯಾಂಡ್ ಹೆಚ್ಚಾಗಿ ಡಬಲ್ ರೇಟ್​ಗೆ ಮಾರಾಟ ಮಾಡ್ತಿದ್ದಾರೆ.

Published On - 11:04 am, Sat, 11 July 20