ಆನ್​ಲೈನ್ ಮೂಲಕವೂ ತಿಮ್ಮಪ್ಪನ ಭಕ್ತರಿಗೆ ನಾಮ ಎಳೆದರು!

| Updated By:

Updated on: Jul 10, 2020 | 5:29 PM

ತಿರುಪತಿ: ದೇವರನ್ನ ನಂಬಿ ಬರುವ ಭಕ್ತರಿಗೆ ಸಹಾಯವಾಗಲೆಂದು ಇತ್ತೀಚಿನ ದಿನಗಳಲ್ಲಿ ದೇವಾಲಯದ ಆಡಳಿತ ಮಂಡಳಿಗಳು ದೇವರ ದರ್ಶನಕ್ಕೆಂದೆ ಆನ್​ಲೈನ್ ಟಿಕೆಟ್‌‌ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿತ್ತು. ಈ ವ್ಯವಸ್ಥೆಯಿಂದ ದೂರದಿಂದ ಬರುವ ಲಕ್ಷಾಂತರ ಭಕ್ತರು ದಿನಗಟ್ಟಲೆ ಕ್ಯೂನಲ್ಲಿ ನಿಂತು ಕಷ್ಟಪಡುವುದು ತಪ್ಪುತ್ತಿತ್ತು. ಆದರೆ ಕೆಲವು ಆನ್ ಲೈನ್ ಖದೀಮರು ದೇವಾಲಯದ ಅಧಿಕೃತ ವೆಬ್ ಸೈಟ್​ನ್ನು ನಕಲು ಮಾಡಿ ಭಕ್ತರಿಂದ ಸಾವಿರಾರು ರೂಪಾಯಿಗಳನ್ನ ದೋಚುತಿದ್ದಾರೆ. ಭಕ್ತರಿಗೆ ಉಪಯೋಗವಾಗಲೆಂದು, ಸಾಮಾಜಿಕ ಅಂತರ ಕಾಪಾಡಬೇಕೆಂದು ತಿರುಪತಿ ದೇವಾಲಯದ ಆಡಳಿತ ಮಂಡಳಿ ಸೃಷ್ಟಿಸಿದ್ದ ವೆಬ್ […]

ಆನ್​ಲೈನ್ ಮೂಲಕವೂ ತಿಮ್ಮಪ್ಪನ ಭಕ್ತರಿಗೆ ನಾಮ ಎಳೆದರು!
Follow us on

ತಿರುಪತಿ: ದೇವರನ್ನ ನಂಬಿ ಬರುವ ಭಕ್ತರಿಗೆ ಸಹಾಯವಾಗಲೆಂದು ಇತ್ತೀಚಿನ ದಿನಗಳಲ್ಲಿ ದೇವಾಲಯದ ಆಡಳಿತ ಮಂಡಳಿಗಳು ದೇವರ ದರ್ಶನಕ್ಕೆಂದೆ ಆನ್​ಲೈನ್ ಟಿಕೆಟ್‌‌ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿತ್ತು. ಈ ವ್ಯವಸ್ಥೆಯಿಂದ ದೂರದಿಂದ ಬರುವ ಲಕ್ಷಾಂತರ ಭಕ್ತರು ದಿನಗಟ್ಟಲೆ ಕ್ಯೂನಲ್ಲಿ ನಿಂತು ಕಷ್ಟಪಡುವುದು ತಪ್ಪುತ್ತಿತ್ತು.

ಆದರೆ ಕೆಲವು ಆನ್ ಲೈನ್ ಖದೀಮರು ದೇವಾಲಯದ ಅಧಿಕೃತ ವೆಬ್ ಸೈಟ್​ನ್ನು ನಕಲು ಮಾಡಿ ಭಕ್ತರಿಂದ ಸಾವಿರಾರು ರೂಪಾಯಿಗಳನ್ನ ದೋಚುತಿದ್ದಾರೆ. ಭಕ್ತರಿಗೆ ಉಪಯೋಗವಾಗಲೆಂದು, ಸಾಮಾಜಿಕ ಅಂತರ ಕಾಪಾಡಬೇಕೆಂದು ತಿರುಪತಿ ದೇವಾಲಯದ ಆಡಳಿತ ಮಂಡಳಿ ಸೃಷ್ಟಿಸಿದ್ದ ವೆಬ್ ಸೈಟ್​ನಂತೆಯೇ ನಕಲಿ‌ ವೆಬ್ ಸೈಟ್ ಸೃಷ್ಟಿಸಿ ಖದೀಮರು ಭಕ್ತರಿಂದ ಸಾವಿರಾರು ರೂಪಾಯಿಗಳನ್ನ ದೋಚಿದ್ದಾರೆ.

ಸದ್ಯಕ್ಕೆ ಟಿಟಿಡಿ ಆಡಳಿತ ಮಂಡಳಿ ನಕಲಿ ವೆಬ್‌ಸೈಟ್ ನಿರ್ಮಿಸಿದ್ದವರ‌ ವಿರುದ್ದ ಪ್ರಕರಣ ದಾಖಲಿಸಲು ಮುಂದಾಗಿದ್ದು ತಿರಚನೂರಿನ ರಘು ಎನ್ನೋ ವ್ಯಕ್ತಿಯ ವಿರುದ್ಧ ಟಿಟಿಡಿ‌ ವಿಜಿಲೆನ್ಸ್‌ ವಿಭಾಗದ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಭಕ್ತರಿಗೆ 300ರೂ.ಗಳ ದರ್ಶನ ‌ಟಿಕೆಟ್ ‌‌ಮಾರಾಟ ಸೇರಿ‌‌ ಹಲವಾರು ರೀತಿಯಲ್ಲಿ ಮೋಸ ಮಾಡಲಾಗಿದೆಯೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಟಿಟಿಡಿಯ ಅಧಿಕೃತ ವೆಬ್ ಸೈಟನ್ನೇ ಬಳಸಬೇಕೆಂದು ‌ಟಿಟಿಡಿ ಭಕ್ತರಿಗೆ ಸಲಹೆ ನೀಡಿದೆ.

Published On - 2:11 pm, Fri, 10 July 20