ಚಿನ್ನದಂತಹ ಸೂರತ್‌ ಆಭರಣ ಉದ್ಯಮದ ಮೇಲೆ ಕೊರೊನಾ ಕಾರ್ಮೋಡ

ಸೂರತ್: ಕೊರೊನಾ ವೈರಸ್ ಅಪ್ಪಳಿಸಿದ್ದೇ ಬಂತು, ಜಗತ್ತಿನ ದೈನಂದಿನ ಚಟುವಟಿಕೆಯೇ ಅಲ್ಲೋಲ ಕಲ್ಲೋಲವಾಗಿದೆ. ದಿನಗೂಲಿಗಳಿಂದ ಹಿಡಿದು ದೊಡ್ಡ ವ್ಯಾಪಾರಿಗಳು, ಖಾಸಗಿಯಿಂದ ಹಿಡಿದು ಸರ್ಕಾರಿ ನೌಕರರ ಜೀವನವೇ ಏರುಪೇರಾಗಿದೆ. ಹೌದು ಕೊರೊನಾ ಮಹಾಮಾರಿ ಯಾವಾಗ ಪೂರ್ವದಿಂದ ದಾಳಿ ಮಾಡಿತೋ, ಜಗತ್ತಿನ ಚಿತ್ರಣವೇ ಬದಲಾಗಿದೆ. ಇದರ ಘೋರ ಪರಿಣಾಮ ದೇಶದ ಚಿನ್ನ ಮತ್ತು ವಜ್ರಗಳ ವ್ಯಾಪಾರ ರಾಜಧಾನಿಯಂದೇ ಖ್ಯಾತಿಯಾಗಿರುವ ಸೂರತ್ ಮೇಲೂ ಬೀರಿದೆ. ಯಾವಾಗ ದೇಶಾದ್ಯಂತ ಕೊರೊನಾ ವೈರಸ್ ಹಬ್ಬದಂತೆ ತಪ್ಪಿಸಲು ಲಾಕ್ಡೌನ್ ಘೋಷಿಸಲಾಯಿತೋ, ಇಡಿ ಜನಜೀವನವೇ ಅಸ್ತವ್ಯಸ್ತವಾಗಿದೆ. ವ್ಯಾಪಾರ […]

ಚಿನ್ನದಂತಹ ಸೂರತ್‌ ಆಭರಣ ಉದ್ಯಮದ ಮೇಲೆ ಕೊರೊನಾ ಕಾರ್ಮೋಡ
Guru

| Edited By:

Jul 11, 2020 | 2:25 PM

ಸೂರತ್: ಕೊರೊನಾ ವೈರಸ್ ಅಪ್ಪಳಿಸಿದ್ದೇ ಬಂತು, ಜಗತ್ತಿನ ದೈನಂದಿನ ಚಟುವಟಿಕೆಯೇ ಅಲ್ಲೋಲ ಕಲ್ಲೋಲವಾಗಿದೆ. ದಿನಗೂಲಿಗಳಿಂದ ಹಿಡಿದು ದೊಡ್ಡ ವ್ಯಾಪಾರಿಗಳು, ಖಾಸಗಿಯಿಂದ ಹಿಡಿದು ಸರ್ಕಾರಿ ನೌಕರರ ಜೀವನವೇ ಏರುಪೇರಾಗಿದೆ.

ಹೌದು ಕೊರೊನಾ ಮಹಾಮಾರಿ ಯಾವಾಗ ಪೂರ್ವದಿಂದ ದಾಳಿ ಮಾಡಿತೋ, ಜಗತ್ತಿನ ಚಿತ್ರಣವೇ ಬದಲಾಗಿದೆ. ಇದರ ಘೋರ ಪರಿಣಾಮ ದೇಶದ ಚಿನ್ನ ಮತ್ತು ವಜ್ರಗಳ ವ್ಯಾಪಾರ ರಾಜಧಾನಿಯಂದೇ ಖ್ಯಾತಿಯಾಗಿರುವ ಸೂರತ್ ಮೇಲೂ ಬೀರಿದೆ. ಯಾವಾಗ ದೇಶಾದ್ಯಂತ ಕೊರೊನಾ ವೈರಸ್ ಹಬ್ಬದಂತೆ ತಪ್ಪಿಸಲು ಲಾಕ್ಡೌನ್ ಘೋಷಿಸಲಾಯಿತೋ, ಇಡಿ ಜನಜೀವನವೇ ಅಸ್ತವ್ಯಸ್ತವಾಗಿದೆ. ವ್ಯಾಪಾರ ವಹಿವಾಟು ಬಂದ್ ಆಗಿದೆ. ಬೇರೆ ದಾರಿ ಕಾಣದೇ ಬಂಗಾರ ಮತ್ತು ವಜ್ರಗಳ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಪರಿಣತ ಕಾರ್ಮಿಕರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಪರಿಣಾಮ ಅವರು ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ.

ಇದರ ಪರಿಣಾಮ ಈಗ ಸೂರತ್​ನ ಇಡೀ ಚಿನ್ನ ಮತ್ತು ವಜ್ರಗಳ ವಹಿವಾಟಿನ ಮೇಲೆ ಆಗಿದೆ. ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡಲು ಕಾರ್ಮಿಕರಿಲ್ಲದೇ ಸಾಕಷ್ಟು ಕೆಲಸ ಹಾಗೇ ಉಳಿದಿದೆ. ಆಭರಣಗಳ ಕೆತ್ತನೆ ಕೆಲಸ ಮಾಡುವವರೇ ಇಲ್ಲದಂತಾಗಿದೆ. ಲಾಕ್ಡೌನ್ ಓಪನ್ ಮಾಡಿದ್ದರೂ, ವ್ಯಾಪಾರ ಮೊದಲಿನಂತೆ ನಡೆಯುತ್ತಿಲ್ಲ. ಹಾಗೇನೇ ಚಿನ್ನ ಕೊಳ್ಳುವವರ ಸಂಖ್ಯೆಯೂ ಮೊದಲಿನಂತಿಲ್ಲ.

ಈ ಬಗ್ಗೆ ಮಾತನಾಡಿರುವ ಸೂರತ್​ನ ಚಿನ್ನದ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವಿಜಯ್ ಮಂಗೂಖಿಯಾ, ಲಾಕ್ಡೌನ್ ನಂತರ ಸುಮಾರು ಶೇ.70 ರಷ್ಟು ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ಇದುವರೆಗೂ ವಾಪಸ್ ಬಂದಿಲ್ಲ. ಹೀಗಾಗಿ ಕಾರ್ಮಿಕರ ಕೊರತೆಯಿಂದಾಗಿ ಅವಶ್ಯವಿದ್ದಷ್ಟು ಆಭರಣಗಳ ಉತ್ಪಾದನೆ ಹೊರಬರುತ್ತಿಲ್ಲ. ಜೊತೆಗೆ ಆಭರಣಗಳಿಗೆ ಬೇಡಿಕೆಯೂ ಕಡಿಮೆಯಾಗಿದೆ. ಪರಿಣಾಮ ಉದ್ಯಮ ನಷ್ಟ ಎದುರಿಸುತ್ತಿದೆ ಎಂದು ಅವಲತ್ತು ಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada