ದಿಂಪುರ್: ನಾಗಾಲ್ಯಾಂಡ್ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ.
ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು ಸಿಗುತ್ತಿದ್ದಂತೆ ಆಕ್ರಮಣಕಾರಿ ದಾಳಿ ನಡೆಸಿದ ಯೋಧರು ಆರು ಜನರನ್ನ ಹೊಡೆದುರುಳಿಸಿದ್ದಾರೆ. ಒಬ್ಬನನ್ನ ಬಂಧಿಸಿದ್ದಾರೆ.
ಇದಕ್ಕೂ ಆತಂಕಕಾರಿಯಂದ್ರೆ ಈ ಚಿಕ್ಕ ಗುಡಿಸಿಲಿನಲ್ಲಿ ಆಘಾತಕಾರಿ ಮದ್ದು ಗುಂಡುಗಳು ಸಿಕ್ಕಿವೆ. ನಾಲ್ಕು ಏಕೆ-47, ಎರಡು ಚೀನಾ ನಿರ್ಮಿತ ಎಮ್ಕ್ಯೂ ಪಿಸ್ತೂಲ್ಗಳು, ಒಂದು .22 ಎಂ ಎಂ ಪಿಸ್ತೂಲ್ ಮತ್ತು ಐದು ಸುತ್ತಿನ ಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ಅಂದ ಹಾಗೆ ಈ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಒಬ್ಬ ಯೋಧ ಗಾಯಗೊಂಡಿದ್ದಾನೆ.
Jt team of Assam Rifles & Arunachal Pradesh Police conducted an early morning action today in Longding dist near Nginu village. 6 NSCN -IM armed cadre killed, 1 Assam Rifle personnel injured. 4 AK-47, 2 Chinese MQ recovered so far. Operation on: RP Upadhyaya,DGP Arunachal Pradesh pic.twitter.com/K1bW8zuTvO
— ANI (@ANI) July 11, 2020
Published On - 12:50 pm, Sat, 11 July 20