ಈಗ ತಾನೆ ಹುಟ್ಟಿದ್ದ ಮಗು ಸಾವನ್ನಪ್ಪಿರುವ ದುಃಖದಲ್ಲಿದ್ದರೂ ಅಧ್ಯಯನಕ್ಕಾಗಿ ಮಗಳ ದೇಹವನ್ನು ವೈದ್ಯಕೀಯ ಕಾಲೇಜಿಗೆ ಪೋಷಕರು ದಾನ ಮಾಡಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ. ಇದರಿಂದಾಗಿ ಮಗು ಭಾರತದ ಅತ್ಯಂತ ಕಿರಿಯ ದೇಹದಾನಿ ಎನಿಸಿಕೊಂಡಿದೆ.ಡಿಸೆಂಬರ್ 8 ರಂದು ಜನಿಸಿದ ಮಗು ಜನಿಸಿದ ಸ್ವಲ್ಪ ಸಮಯದ ನಂತರ ತೀವ್ರ ಉಸಿರಾಟದ ತೊಂದರೆಯನ್ನು ಅನುಭವಿಸಿತು ಮತ್ತು ಇನ್ಕ್ಯುಬೇಟರ್ನಲ್ಲಿ ಇರಿಸಲಾಯಿತು.
ಹೈಪೋಕ್ಸಿಕ್-ಇಸ್ಕೆಮಿಕ್ ಎನ್ಸೆಫಲೋಪತಿ (HIE) ಯಿಂದ ಬಳಲುತ್ತಿದ್ದಳು. ಒಂದು ರೀತಿಯ ಮೆದುಳಿನ ಹಾನಿ ಇದಾಗಿದ್ದರಿಂದ ಮತ್ತು ವೈದ್ಯರು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಆಕೆಯ ಮರಣದ ನಂತರ, ಪೋಷಕರು, ಹರಿದ್ವಾರದ ನಿವಾಸಿಗಳಾದ ರಾಮ್ ಮೆಹರ್ ಕಶ್ಯಪ್ ಮತ್ತು ಅವರ ಪತ್ನಿ ನ್ಯಾನ್ಸಿ, ತಮ್ಮ ಮಗಳ ದೇಹವನ್ನು ಡೆಹ್ರಾಡೂನ್‌ನ ಡೂನ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲು ನಿರ್ಧರಿಸಿದರು.
ಇಂತಹ ಚಿಕ್ಕ ಮಗುವಿನ ದೇಹದಾನ ಮಾಡಿದ ಮೊದಲ ಘಟನೆ ಇದು ಎಂದು ಡೂನ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಗೀತಾ ಜೈನ್ ತಿಳಿಸಿದ್ದಾರೆ. ಅವರ ಕುಟುಂಬ ವೈದ್ಯರಾದ ಜಿತೇಂದ್ರ ಸೈನಿ ಅವರ ಮಾರ್ಗದರ್ಶನದಿಂದ ಪೋಷಕರು ಈ ನಿರ್ಧಾರಕ್ಕೆ ಬಂದಿದ್ದರು.
ಮತ್ತಷ್ಟು ಓದಿ: ದೇಶದಲ್ಲಿ ಪ್ರಸ್ತುತ 144 ಕೋಟಿ ಜನಸಂಖ್ಯೆ ಇದ್ದರೂ ಭಾರತ ಏಕೆ ಇನ್ನೂ ಹೆಚ್ಚು ಮಕ್ಕಳು ಬೇಕೆಂದು ಬಯಸುತ್ತಿದೆ?
ನೀವು ಅಂತಿಮ ವಿಧಿಗಳನ್ನು ಮಾಡಿದರೆ, ನಿಮ್ಮ ಮಗುವಿನ ಸ್ಮರಣೆಯು ಕಾಲಾನಂತರದಲ್ಲಿ ಮಸುಕಾಗಬಹುದು. ಆದರೆ ಆಕೆಯ ದೇಹವನ್ನು ದಾನ ಮಾಡುವುದರಿಂದ, ನೀವು ಅವಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೀರಿ ಎಂದು ಹೇಳಿದ್ದರು.
ಈ ಮಾತುಗಳಿಂದ ಪ್ರೇರಿತರಾದ ರಾಮ್ ಮೆಹರ್ ಅವರು ತಮ್ಮ ಪತ್ನಿ ಮತ್ತು ಕುಟುಂಬದೊಂದಿಗೆ ವಿಚಾರವನ್ನು ಚರ್ಚಿಸಿದರು. ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ, ಅವರು ದೇಹವನ್ನು ನೀಡಲು ನಿರ್ಧರಿಸಿದರು.
ರಾಮ್ ಮೆಹರ್ ಮತ್ತು ನ್ಯಾನ್ಸಿಗೆ ಈಗಾಗಲೇ ಎರಡೂವರೆ ವರ್ಷದ ರುದ್ರಾಕ್ಷಿ ಎಂಬ ಮಗಳಿದ್ದಾಳೆ. ಈ ಮಗುವಿಗೆ ಸರಸ್ವತಿ ಎಂದು ಹೆಸರಿಟ್ಟರು. 45 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಮಾತ್ರ ತಮ್ಮ ದೇಹವನ್ನು ಡೂನ್ ವೈದ್ಯಕೀಯ ಕಾಲೇಜಿಗೆ ದಾನ ಮಾಡುತ್ತಿದ್ದರು. ಈ 2.5 ದಿನದ ಹೆಣ್ಣು ಮಗುವಿನ ದೇಹವನ್ನು ದಾನ ಮಾಡಿರುವುದು ಇತಿಹಾಸವನ್ನು ಸೃಷ್ಟಿಸಿದೆ ಎಂದು ಡಾ ಪಂತ್ ಹೇಳಿದ್ದಾರೆ.ಶಿಶುವಿನ ದೇಹವನ್ನು ಕಾಲೇಜಿನ ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನಕ್ಕೆ ಬಳಸುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ