ದೇಶದಲ್ಲಿ ಪ್ರಸ್ತುತ 144 ಕೋಟಿ ಜನಸಂಖ್ಯೆ ಇದ್ದರೂ ಭಾರತ ಏಕೆ ಇನ್ನೂ ಹೆಚ್ಚು ಮಕ್ಕಳು ಬೇಕೆಂದು ಬಯಸುತ್ತಿದೆ?

ಕೆಲ ದಿನಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹೆಚ್ಚು ಮಕ್ಕಳನ್ನು ಹೊಂದುವಂತೆ ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಸ್ಥಳೀಯ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. ದೇಶದಲ್ಲಿ 144 ಕೋಟಿ ಜನಸಂಖ್ಯೆ ಇದ್ದರೂ ಆ ಜನಸಂಖ್ಯೆಯನ್ನು ನಿಯಂತ್ರಿಸುವ ಬದಲು ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದಿರಿ ಎಂದು ಹೇಳುವ ಅವಶ್ಯಕತೆ ಇತ್ತಾ ಎಂದು ನೀವು ಯೋಚನೆ ನಿಮಗೂ ಬಂದಿದೆಯೇ ಹಾಗಿದ್ದರೆ ಇದರ ಹಿಂದಿನ ಕಾರಣ ಏನು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ ಬನ್ನಿ.

ದೇಶದಲ್ಲಿ ಪ್ರಸ್ತುತ 144 ಕೋಟಿ ಜನಸಂಖ್ಯೆ ಇದ್ದರೂ ಭಾರತ ಏಕೆ ಇನ್ನೂ ಹೆಚ್ಚು ಮಕ್ಕಳು ಬೇಕೆಂದು ಬಯಸುತ್ತಿದೆ?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 16, 2024 | 2:15 PM

ಒಂದು ಕಾಲದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದ ಚೀನಾ ದೇಶವನ್ನು ಹಿಂದಿಕ್ಕಿ ಭಾರತ ಇದೀಗ ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. 2024 ರ ಹೊತ್ತಿಗೆ ಭಾರತದ ಜನಸಂಖ್ಯೆ 144 ಕೋಟಿಗೆ (1.45 ಬಿಲಿಯನ್)‌ ಮುಟ್ಟಿದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ತಿಳಿಸಿತ್ತು. ಇದು 2054 ರ ವೇಳೆಗೆ 1.69 ಬಿಲಿಯನ್‌ಗೆ ಏರುವ ಸಾಧ್ಯತೆ ಇದೆ ಎಂಬುದನ್ನು ಕೂಡಾ ಅಂದಾಜಿಸಲಾಗಿದೆ. ದೇಶದಲ್ಲಿ ಇಷ್ಟೆಲ್ಲಾ ಜನಸಂಖ್ಯೆ ಇದ್ದರೂ ಹೆಚ್ಚು ಮಕ್ಕಳನ್ನು ಹೊಂದಿದಿ, ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂಬ ಕೂಗು ಕೇಳಿ ಬರುತ್ತಿದೆ. ಅಷ್ಟಕ್ಕೂ ನಮ್ಮ ದೇಶದಲ್ಲಿ ಜನಸಂಖ್ಯೆ ತೀರಾ ಹೆಚ್ಚಿದ್ದರೂ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂಬ ಕೂಗು ಏಕೆ ಕೇಳಿ ಬರುತ್ತಿದೆ ಎಂಬುದನ್ನು ನೋಡೋಣ ಬನ್ನಿ.

ದೇಶದಲ್ಲಿ 1.45 ಬಿಲಿಯನ್‌ ಜನಸಂಖ್ಯೆ ಇದ್ರೂ ಕೇಳಿ ಬರುತ್ತಿದೆ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂಬ ಕೂಗು:

ಇತ್ತೀಚಿಗಷ್ಟೇ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹೆಚ್ಚು ಮಕ್ಕಳನ್ನು ಹೊಂದುವಂತೆ ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಸ್ಥಳೀಯ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. ದೇಶದಲ್ಲಿ 1.45 ಬಿಲಿಯನ್‌ ಜನಸಂಖ್ಯೆ ಇದ್ರೂ ಈ ಕೂಗು ಏಕೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿವೆ.

ದೇಶದಲ್ಲಿ 144 ಕೋಟಿ ಜನಸಂಖ್ಯೆ ಇದ್ದರೂ ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದಲ್ಲಿ ವಯಸ್ಸಾಗುತ್ತಿರುವವರ ಜನಸಂಖ್ಯೆ ಹೆಚ್ಚುತ್ತಿದೆ. ಮಕ್ಕಳು ಹಾಗೂ ಯುವಕರ ಜನಸಂಖ್ಯೆ ಕುಸಿಯುತ್ತಿದೆ. ಯುವ ಜನತೆಯ ಸಂಖ್ಯೆ ಕುಸಿದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ಇದು ದೇಶಕ್ಕೆ ಋಣಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆ ಇದೆ. ಇದೇ ದೃಷ್ಟಿಯಿಂದ ಚಂದ್ರಬಾಬು ನಾಯ್ಡು ದಕ್ಷಿಣ ಭಾರತೀಯ ರಾಜ್ಯಗಳ ಜನರು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದರು.

ಪ್ರಸ್ತುತ ಜನಸಂಖ್ಯೆ ಹೆಚ್ಚಿದೆ ನಿಜ. ಈ ಜನಸಂಖ್ಯೆಯ ಶೇಕಡಾ 68% ರಷ್ಟು ಭಾಗ 15 ರಿಂದ 64 ವರ್ಷದವರು. ಇನ್ನೂ 0-14 ವಯೋಮಾನದವರ ಸಂಖ್ಯೆ ಕೇವಲ 24% ಇದೆ. ಭಾರತದಲ್ಲಿ ಜನನ ದರ ಇಳಿಕೆಯಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಅಂತ ಹೇಳಬಹುದು. 1950 ರಲ್ಲಿ ಪ್ರತಿ ಮಹಿಳೆ 5 ರಿಂದ 7 ಮಕ್ಕಳಿಗೆ ಜನ್ಮ ನೀಡುತ್ತಿದ್ದಳು. ಆದರೆ ಈಗ ಅದು ಎರಡಕ್ಕೆ ಇಳಿದಿದೆ. ಈ ಜನನ ದರದ ತ್ವರಿತ ಕುಸಿತದಿಂದಾಗಿ, ನಮ್ಮ ದೇಶದಲ್ಲಿ ವಯಸ್ಸಾದವರ ಜನಸಂಖ್ಯೆಯೂ ನಿರೀಕ್ಷೆಗಿಂತ ವೇಗವಾಗಿ ಏರಿಕೆಯನ್ನು ಕಾಣುತ್ತಿದೆ. ಪ್ರಸ್ತುತ ದುಡಿಯುವ ಕೈಗಳು ಹೆಚ್ಚಿದ್ದರೂ, ಭವಿಷ್ಯದಲ್ಲಿ ಯುವ ಜನತೆಯ ಸಂಖ್ಯೆ ಕಡಿಮೆಯಾಗಿ, ವಯಸ್ಸಾದವರೇ ಹೆಚ್ಚಾಗಿದ್ದಾಗ ದೇಶದಲ್ಲಿ ಹಲವಾರು ಸವಾಲುಗಳು ಎದುರಾಗಬಹುದು, ದೇಶದ ಅಭಿವೃದ್ಧಿಗೂ ಇದು ಅಡ್ಡಿ ಉಂಟುಮಾಡಬಹುದು.

ಅರ್ಥಶಾಸ್ತ್ರಜ್ಞ ಮತ್ತು ತಮಿಳುನಾಡು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಜೆ. ಜಯರಂಜನ್‌ “ಹೆಚ್ಚಿರುವ ವಯಸ್ಸಾದವರ ಜನಸಂಖ್ಯೆಯು ಭಾರತಕ್ಕೆ ಅನೇಕ ಸವಾಲುಗಳನ್ನು ತರಬಹುದು, ಇದು ದೇಶದ ಮೇಲೆ ಗಮನಾರ್ಹ ಆರ್ಥಿಕ ಒತ್ತಡವನ್ನು ಉಂಟು ಮಾಡಬಹುದು. ಅಷ್ಟೇ ಅಲ್ಲದೆ ಈ ವಯಸ್ಸಾದ ಜನಸಂಖ್ಯೆಯನ್ನು ನೋಡಿಕೊಳ್ಳುವುದು ಭವಿಷ್ಯದಲ್ಲಿ ಕುಟುಂಬಗಳಿಗೆ ಮಾತ್ರವಲ್ಲದೆ ಸರ್ಕಾರಗಳಿಗೂ ಸವಾಲಾಗಿ ಪರಿಣಾಮಿಸಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಭಾರತದಲ್ಲಿ ಜನನ ಪ್ರಮಾಣವು ತೀರಾ ಕುಸಿಯುತ್ತಿದೆ:

ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ದಕ್ಷಿಣದ ಈ ಎಲ್ಲಾ ಐದು ರಾಜ್ಯಗಳಲ್ಲೂ ಜನನ ಪ್ರಮಾಣ ಕುಸಿದಿದೆ. ಯುರೋಪಿಯನ್‌ ರಾಷ್ಟ್ರಗಳಿಗಿಂತೂ ಇಲ್ಲಿಯೇ ಹೆಚ್ಚು ಜನನ ಪ್ರಮಾಣ ಕುಸಿಯುತ್ತಿದೆ ಎಂದು ಅಂದಾಜಿಸಲಾಗಿದೆ.

“ಪ್ರಸ್ತುತ ಇರುವಂತಹ ಜನಸಂಖ್ಯೆ ನಿಯಂತ್ರಣ ಉತ್ತಮ ವಿಷಯವಾಗಿ ಕಂಡರೂ ಮುಂದೊಂದು ದಿನ ಈ ಜನಸಂಖ್ಯಾ ನಿಯಂತ್ರಣ ನೀತಿ ಋಣಾತ್ಮಕವಾಗಿ ಪರಿಣಾಮಿಸುತ್ತದೆ. ಇದು ದೇಶದ ಆದಾಯ ಮೇಲೂ ಗಮನಾರ್ಹವಾಗಿ ಪರಿಣಾಮವನ್ನು ಬೀರುತ್ತದೆ” ಎಂದು ಇಂಟರ್‌ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಫಾರ್‌ ಪಾಪ್ಯುಲೇಷನ್‌ ಸೈನ್ಸ್‌ ವಿಶ್ವವಿದ್ಯಾನಿಲಯದ ಜನಸಂಖ್ಯಾಶಾಸ್ತ್ರದ ಪ್ರಾದ್ಯಾಪಕ ಶ್ರೀನಿವಾನ್‌ ಗೋಲಿ ಅವರು ತಿಳಿಸಿದ್ದಾರೆ.

“ಜನಸಂಖ್ಯಾಶಾಸ್ತ್ರಜ್ಞರ ಪ್ರಕಾರ ಫಲವತ್ತತೆಯ ದರಗಳು ಕಡಿಮೆಯಾಗಿರುವುದರಿಂದ ಭಾರತದಲ್ಲಿ ವಯಸ್ಸಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಫ್ರಾನ್ಸ್‌ ಮತ್ತು ಸ್ವೀಡನ್‌ ದೇಶಗಳಲ್ಲಿ ವಯಸ್ಸಾದವರ ಜನಸಂಖ್ಯೆ ಏರಿಕೆಯಾಗಲು 120, 80 ವರ್ಷ ತೆಗೆದುಕೊಂಡರೆ, ಭಾರತದಲ್ಲಿ ಕೇವಲ ಇನ್ನು 28 ವರ್ಷಗಳಲ್ಲಿ ವಯಸ್ಸಾದವರ ಜನಸಂಖ್ಯೆ ಏರಿಕೆಯಾಗಲಿದೆʼ ಎಂದು ಶ್ರೀನಿವಾಸ್‌ ಗೋಲಿ ಹೇಳಿದ್ದಾರೆ. ಜೊತೆಗೆ ಪ್ರಸ್ತುತ ಭಾರತದಲ್ಲಿ ಅತೀ ಹೆಚ್ಚು ಜನಸಂಖ್ಯೆಯಿದ್ದು, ಈ ಜನಸಂಖ್ಯಾ ಲಾಭಾಂಶವನ್ನು ಕೂಡಲೇ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಅವಶ್ಯಕತೆಯಿದೆ. ಇದು ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಜೀವನ ಮಟ್ಟದ ಸುಧಾರಣೆ, ಶಿಕ್ಷಣ, ನಗರೀಕರಣ ಈ ಎಲ್ಲಾ ಅಂಶಗಳು ಸ್ವಾಭಾವಿಕವಾಗಿ ಜನನ ದರದ ಕುಸಿತಕ್ಕೆ ಕಾರಣವಾಗಿದೆ. ಮತ್ತು ವಯಸ್ಸಾದವರ ಸಂಖ್ಯೆ ಹೆಚ್ಚಾಗಿದೆ. ಹೀಗಿರುವಾಗ ಸರ್ಕಾರಗಳು ಜನರ ಆರೋಗ್ಯದ ಕಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಮತ್ತು ಭಾರತವು ನಿವೃತ್ತಿಯ ವಯಸ್ಸನ್ನು ಹೆಚ್ಚುಗೊಳಿಸಬೇಕು ಆಗ ಉತ್ಪಾದಕತೆಯೂ ಹೆಚ್ಚುತ್ತದೆ ಜೊತೆಗೆ ಆರ್ಥಿಕತೆಯೂ ಹೆಚ್ಚುತ್ತದೆ ಎಂದು ಜನಸಂಖ್ಯಾಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಹರಿಸಿ ನಡೆಯಿತು ಬಲವಂತದ ಮದುವೆ; ವಿಡಿಯೋ ವೈರಲ್‌

ಇತ್ತೀಚಿಗಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಾದ ಮೋಹನ್‌ ಭಾಗವತ್‌ ಅವರು “ದಂಪತಿಗಳು ಕನಿಷ್ಠ ಮೂರು ಮಕ್ಕಳನ್ನಾದರೂ ಹೊಂದಬೇಕು. 2 ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದಾಗ ಭವಿಷ್ಯದಲ್ಲಿ ಸಮಾಜವು ತಾನಾಗಿಯೇ ನಾಶವಾಗುತ್ತದೆ” ಎಂದು ಎಚ್ಚರಿಕೆಯನ್ನು ನೀಡಿದ್ದರು. ಹೀಗೆ ಹೆಚ್ಚಿನ ಜನರು ದೇಶದ ಭವಿಷ್ಯದ ದೃಷ್ಟಿಯಿಂದ ಭಾರತೀಯರು ಮೂರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ ಎಂದು ಕರೆ ನೀಡುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:07 pm, Mon, 16 December 24

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್