ಗೋವಾಗೆ ಅಷ್ಟಾಗಿ ಬಾಧಿಸದ ಕೊರೊನಾ ಕ್ರಿಮಿ, ಇಂದಿನಿಂದ ಎಲ್ಲವೂ ಮುಕ್ತ ಮುಕ್ತ!

|

Updated on: May 04, 2020 | 11:08 AM

ಪಣಜಿ: ಕೊರೊನಾ ಕ್ರಿಮಿ ಇಡೀ ಜಗತ್ತಿನಲ್ಲಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಭಾರತಕ್ಕೂ ಕಾಲಿಟ್ಟಿತು. ಆದ್ರೆ ನೆರೆಯ ಪುಟ್ಟ ರಾಜ್ಯವಾದ ಗೋವಾಗೆ ಕೊರೊನಾ ಅಷ್ಟಾಗಿ ಬಾಧಿಸಲಿಲ್ಲ ಎಂಬುದು ಆಶ್ಚರ್ಯ ಮತ್ತು ಸಮಾಧಾನಕರ ಸಂಗತಿಯಾಗಿದೆ. ಪವಾಡವೆಂಬಂತೆ, ಅಲ್ಲಿ ಕೊರೊನಾ ಸೋಂಕಿತರ ಕೇಸುಗಳು ಡಬಲ್ ಡಿಜಿಟ್ ಸಹ ದಾಟಲಿಲ್ಲ. ಯಾವುದೇ ಸಾವುಗಳೂ ಸಹ ಸಂಭವಿಸಲಿಲ್ಲ. ಒಂದು ತಿಂಗಳ ಹಿಂದೆ ಎಲ್ಲೋ ಯಾವುದೋ ಒಂದು ಕೇಸು ಕಾಣಿಸಿಕೊಂಡಿತ್ತು ಎಂಬಂತಾಗಿದೆ ಗೋವಾದ ಸ್ಥಿತಿ. ಹೀಗಿರುವ ಗೋವಾದಲ್ಲಿ ಲಾಕ್​ ಡೌನ್​ 2.0 ಮುಗಿಯುತ್ತಿದ್ದಂತೆ ಇಂದಿನಿಂದ ಎಲ್ಲವೂ ಮುಕ್ತ ಮುಕ್ತವಾಗಿದೆ. […]

ಗೋವಾಗೆ ಅಷ್ಟಾಗಿ ಬಾಧಿಸದ ಕೊರೊನಾ ಕ್ರಿಮಿ, ಇಂದಿನಿಂದ ಎಲ್ಲವೂ ಮುಕ್ತ ಮುಕ್ತ!
Follow us on

ಪಣಜಿ: ಕೊರೊನಾ ಕ್ರಿಮಿ ಇಡೀ ಜಗತ್ತಿನಲ್ಲಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಭಾರತಕ್ಕೂ ಕಾಲಿಟ್ಟಿತು. ಆದ್ರೆ ನೆರೆಯ ಪುಟ್ಟ ರಾಜ್ಯವಾದ ಗೋವಾಗೆ ಕೊರೊನಾ ಅಷ್ಟಾಗಿ ಬಾಧಿಸಲಿಲ್ಲ ಎಂಬುದು ಆಶ್ಚರ್ಯ ಮತ್ತು ಸಮಾಧಾನಕರ ಸಂಗತಿಯಾಗಿದೆ. ಪವಾಡವೆಂಬಂತೆ, ಅಲ್ಲಿ ಕೊರೊನಾ ಸೋಂಕಿತರ ಕೇಸುಗಳು ಡಬಲ್ ಡಿಜಿಟ್ ಸಹ ದಾಟಲಿಲ್ಲ. ಯಾವುದೇ ಸಾವುಗಳೂ ಸಹ ಸಂಭವಿಸಲಿಲ್ಲ.

ಒಂದು ತಿಂಗಳ ಹಿಂದೆ ಎಲ್ಲೋ ಯಾವುದೋ ಒಂದು ಕೇಸು ಕಾಣಿಸಿಕೊಂಡಿತ್ತು ಎಂಬಂತಾಗಿದೆ ಗೋವಾದ ಸ್ಥಿತಿ. ಹೀಗಿರುವ ಗೋವಾದಲ್ಲಿ ಲಾಕ್​ ಡೌನ್​ 2.0 ಮುಗಿಯುತ್ತಿದ್ದಂತೆ ಇಂದಿನಿಂದ ಎಲ್ಲವೂ ಮುಕ್ತ ಮುಕ್ತವಾಗಿದೆ. ಸೆಲೂನ್ ಅಂಗಡಿಗಳು ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳು ತೆರೆದುಕೊಂಡಿವೆ.

Published On - 11:05 am, Mon, 4 May 20