ದೆಹಲಿ: ಭಾರತದಲ್ಲಿ ಕೋವಿಡ್ (covid) ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ವಕೀಲರು ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ, ಆನ್‌ಲೈನ್ ಮೂಲಕ ಪ್ರಕರಣಗಳ ಬಗ್ಗೆ ವಾದ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ತಿಳಿಸಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಅನೇಕ ಮಾಧ್ಯಮಗಳ ವರದಿ ಮಾಡಿದೆ. ಈ ಕಾರಣದಿಂದ ವಕೀಲರು ಯಾರು ಕೋರ್ಟ್ಗೆ ಬರುವ ಅವಶ್ಯಕತೆ ಇಲ್ಲ ನೀವು ಎಲ್ಲಿದ್ದೀರಾ ಅಲ್ಲಿಂದಲೇ ಕಾರ್ಯನಿರ್ವಹಿಸಿ ಎಂದು ಹೇಳಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ವರದಿಯನ್ನು ನಾವು ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ ಆ ಕಾರಣಕ್ಕೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವಕೀಲರು ಆನ್‌ಲೈನ್ ಮೂಲಕವೇ ಕೆಲಸ ಮಾಡಲಿ ಎಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆನ್‌ಲೈನ್ ಮೂಲಕವೇ ನಿಮ್ಮ ವಾದಗಳನ್ನು ನಾವು ಕೇಳುತ್ತೇವೆ ಎಂದು ಹೇಳಿದ್ದಾರೆ. ದೆಹಲಿ ಮತ್ತು ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿದಾಗ, ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದೆ.
ಇದನ್ನೂ ಓದಿ: Salary Of Supreme Court CJI: ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ವೇತನ, ಸರ್ಕಾರಿ ಸೌಲಭ್ಯಗಳೇನು?
ಈಗಾಗಲೇ ಅನೇಕ ನ್ಯಾಯಾಲಯಗಳು ಆನ್‌ಲೈನ್ ಮೂಲಕವೇ ವಿಚಾರಣೆಯನ್ನು ಮಾಡುತ್ತಿದೆ. ಹಾಗಾಗಿ ಇನ್ನೂ ಮುಂದಕ್ಕೆ ವರ್ಚುವಲ್ ವಿಚಾರಣೆಗಳನ್ನು ಮಾಡಬಹುದು ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆ್ಯಪ್ ಮತ್ತು ಯೂಟ್ಯೂಬ್ ಮೂಲಕ ಸಂವಿಧಾನ ಪೀಠದ ಪ್ರಕ್ರಿಯೆಗಳನ್ನು ಲೈವ್-ಸ್ಟ್ರೀಮ್ ಮಾಡಲು ಪ್ರಾರಂಭಿಸಿದೆ.
Chief Justice of India DY Chandrachud says lawyers are free to appear virtually in the court in wake of the rising number of Covid cases.
CJI says newspaper reports show that Covid cases are on the rise and if lawyers want to appear virtually before the court they can and can… pic.twitter.com/lLWHwr1tgI
— ANI (@ANI) April 5, 2023
ಭಾರತದಲ್ಲಿ ಬುಧವಾರ 4435 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು 23,091 ಪತ್ತೆಯಾಗಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳು ಕಳೆದ ಕೆಲವು ದಿನಗಳಲ್ಲಿ ಏರಿಕೆಯ ಕಂಡಿವೆ, ಏಪ್ರಿಲ್ 1ರಂದು 2,994 ರಿಂದ ಏಪ್ರಿಲ್ 2 ರಂದು 3,824 ಮತ್ತು ಏಪ್ರಿಲ್ 3 ರಂದು 3,641 ಇದರ ನಡುವೆ ಮಂಗಳವಾರ 3038 ಕ್ಕೆ ಕಡಿಮೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 2,069 ಚೇತರಿಕೆ ಕಂಡಿದೆ, ಮಂಗಳವಾರ ಒಟ್ಟು ಚೇತರಿಕೆ 4,41,77,204 ಕ್ಕೆ ಏರಿದೆ. ಒಟ್ಟಾರೆ ಚೇತರಿಕೆ ದರವನ್ನು 98.76 ಪ್ರತಿಶತದಷ್ಟು ಹೆಚ್ಚಾಗಿದೆ.
Published On - 12:14 pm, Wed, 5 April 23