ಸಾವಿಗೇ ಸೆಡ್ಡು ಹೊಡೆದು 101ನೇ ಬರ್ತ್​ ಡೇ ಆಚರಿಸಿದ ಸೋಂಕಿತ ವೃದ್ಧ!

|

Updated on: Jul 14, 2020 | 8:16 PM

ಮುಂಬೈ: ದೇಶದಲ್ಲಿ ಕೊರೊನಾ ಮಹಾಮಾರಿಯ ಅಧಿಕೇಂದ್ರವಾಗಿ ವಾಣಿಜ್ಯ ನಗರಿ ಮುಂಬೈ ಮಾರ್ಪಾಡಾಗಿದೆ. ಪ್ರತಿ ದಿನ ಏರುತ್ತಿರುವ ಸೋಂಕಿತರ ಹಾಗೂ ಸಾವಿನ ಸಂಖ್ಯೆಯೇ ಇದೀಗ ಮುಂಬೈನಿಂದ ಹೊರಬರುವ ಕಹಿ ಸುದ್ದಿ. ಆದರೆ, ಇಷ್ಟೆಲ್ಲಾ ಸಾವು ನೋವಿನ ಮಧ್ಯೆ ಶತಾಯುಷಿ ವೃದ್ಧನೊಬ್ಬ ಕೊರೊನಾ ವಿರುದ್ಧದ ಸಮರದಲ್ಲಿ ಗೆದ್ದಿರುವುದಲ್ಲದೆ ತಮ್ಮ 101ನೇ ಬರ್ತ್​ ಡೇ ಕೂಡ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಹೌದು, ಮುಂಬೈನ ಹೃದಯ ಸಾಮ್ರಾಟ್​ ಬಾಳಾ ಸಾಹೇಬ್​ ಠಾಕ್ರೆ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಅರ್ಜುನ್​ ಗೋವಿಂದ್​ ನಾರಿಂಗ್ರೇಕರ್​ ಇದೀಗ ಸಂಪೂರ್ಣವಾಗಿ […]

ಸಾವಿಗೇ ಸೆಡ್ಡು ಹೊಡೆದು 101ನೇ ಬರ್ತ್​ ಡೇ ಆಚರಿಸಿದ ಸೋಂಕಿತ ವೃದ್ಧ!
Follow us on

ಮುಂಬೈ: ದೇಶದಲ್ಲಿ ಕೊರೊನಾ ಮಹಾಮಾರಿಯ ಅಧಿಕೇಂದ್ರವಾಗಿ ವಾಣಿಜ್ಯ ನಗರಿ ಮುಂಬೈ ಮಾರ್ಪಾಡಾಗಿದೆ. ಪ್ರತಿ ದಿನ ಏರುತ್ತಿರುವ ಸೋಂಕಿತರ ಹಾಗೂ ಸಾವಿನ ಸಂಖ್ಯೆಯೇ ಇದೀಗ ಮುಂಬೈನಿಂದ ಹೊರಬರುವ ಕಹಿ ಸುದ್ದಿ. ಆದರೆ, ಇಷ್ಟೆಲ್ಲಾ ಸಾವು ನೋವಿನ ಮಧ್ಯೆ ಶತಾಯುಷಿ ವೃದ್ಧನೊಬ್ಬ ಕೊರೊನಾ ವಿರುದ್ಧದ ಸಮರದಲ್ಲಿ ಗೆದ್ದಿರುವುದಲ್ಲದೆ ತಮ್ಮ 101ನೇ ಬರ್ತ್​ ಡೇ ಕೂಡ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ಹೌದು, ಮುಂಬೈನ ಹೃದಯ ಸಾಮ್ರಾಟ್​ ಬಾಳಾ ಸಾಹೇಬ್​ ಠಾಕ್ರೆ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಅರ್ಜುನ್​ ಗೋವಿಂದ್​ ನಾರಿಂಗ್ರೇಕರ್​ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಹೀಗಾಗಿ, ಇವರನ್ನು ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗ್ತಿದೆ. ಈ ಮಧ್ಯೆ ವೈದ್ಯರಿಗೆ ಅರ್ಜುನ್​ರ ಜನ್ಮ ದಿನ ನಾಳೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಸ್ಪೆಷಲ್​ ಬರ್ತ್​ ಡೇ ಕೇಕ್​ ತರಿಸಿ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.

ಒಟ್ನಲ್ಲಿ, ಕೊರೊನಾ ಮೃತ್ಯುಕೂಪದಲ್ಲಿ ಸಿಲುಕಿರುವ ಮುಂಬೈನಿಂದ ಹೊರಬಂದಿರುವ ಇಂಥ ಒಂದು ಸಂತಸದ ಸುದ್ದಿ ಎಲ್ಲರ ಮನಸ್ಸಿಗೆ ಖುಷಿ ತಂದುಕೊಟ್ಟಿದೆ.