AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google ನಿಂದ ಭಾರತದಲ್ಲಿ ಮತ್ತೂ ಒಂದು ಬೃಹತ್​ ಹೂಡಿಕೆ, ಎಲ್ಲಿ?

ಭಾರತದಲ್ಲಿ ಬರೋಬ್ಬರಿ 75,000 ಸಾವಿರ ಕೋಟಿ ಹೂಡಲು ಮುಂದಾಗಿರುವ ಡಿಜಿಟಲ್​ ಲೋಕದ ದಿಗ್ಗಜ ಗೂಗಲ್ ಇದೀಗ ಮತ್ತೂ ಒಂದು ಬೃಹತ್​ ಹೂಡಿಕೆಗೆ ಮುಂದಾಗಿದೆ. ಹೌದು, ಉನ್ನತ ಮೂಲಗಳ ಪ್ರಕಾರ ಗೂಗಲ್ ಇದೀಗ ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಡಿಜಿಟಲ್​ ಕಂಪನಿಯಲ್ಲಿ ಬರೋಬ್ಬರಿ 4 ಬಿಲಿಯನ್​ ಡಾಲರ್ ( 30,000 ಕೋ.ಟಿ ರೂ)​ ಹೂಡಿಕೆ ಮಾಡಲು ಮುಂದಾಗಿದೆ. ಆದರೆ, ಈ ಬಗ್ಗೆ ಗೂಗಲ್​ ಹಾಗೂ ರಿಲಯನ್ಸ್ ಸಂಸ್ಥೆ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ಆದ್ರೆ ಮೂಲಗಳ ಪ್ರಕಾರ ಉಭಯ ಕಂಪನಿಗಳೂ […]

Google ನಿಂದ ಭಾರತದಲ್ಲಿ ಮತ್ತೂ ಒಂದು ಬೃಹತ್​ ಹೂಡಿಕೆ, ಎಲ್ಲಿ?
ಪ್ರಾತಿನಿಧಿಕ ಚಿತ್ರ
KUSHAL V
|

Updated on:Jul 14, 2020 | 5:48 PM

Share

ಭಾರತದಲ್ಲಿ ಬರೋಬ್ಬರಿ 75,000 ಸಾವಿರ ಕೋಟಿ ಹೂಡಲು ಮುಂದಾಗಿರುವ ಡಿಜಿಟಲ್​ ಲೋಕದ ದಿಗ್ಗಜ ಗೂಗಲ್ ಇದೀಗ ಮತ್ತೂ ಒಂದು ಬೃಹತ್​ ಹೂಡಿಕೆಗೆ ಮುಂದಾಗಿದೆ.

ಹೌದು, ಉನ್ನತ ಮೂಲಗಳ ಪ್ರಕಾರ ಗೂಗಲ್ ಇದೀಗ ಮುಕೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಡಿಜಿಟಲ್​ ಕಂಪನಿಯಲ್ಲಿ ಬರೋಬ್ಬರಿ 4 ಬಿಲಿಯನ್​ ಡಾಲರ್ ( 30,000 ಕೋ.ಟಿ ರೂ)​ ಹೂಡಿಕೆ ಮಾಡಲು ಮುಂದಾಗಿದೆ. ಆದರೆ, ಈ ಬಗ್ಗೆ ಗೂಗಲ್​ ಹಾಗೂ ರಿಲಯನ್ಸ್ ಸಂಸ್ಥೆ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ. ಆದ್ರೆ ಮೂಲಗಳ ಪ್ರಕಾರ ಉಭಯ ಕಂಪನಿಗಳೂ ಈ ಹೂಡಿಕೆ ವಿಚಾರವಾಗಿ ಬಹುತೇಕ ಕೊನೆಯ ಘಟ್ಟದಲ್ಲಿವೆ ಎಂದು ತಿಳಿಸಿದ್ದಾರೆ.

ಈಗಾಗಲೇ ಫೇಸ್​ಬುಕ್​ ಸೇರಿದಂತೆ ಇನ್ನೂ ಕೆಲ ವಿದೇಶಿ ಕಂಪನಿಗಳು ರಿಲಯನ್ಸ್ ಸಂಸ್ಥೆಯಲ್ಲಿ ಸರಿಸುಮಾರು 15.64 ಬಿಲಿಯನ್​ ಡಾಲರ್​ನಷ್ಟು ಹೂಡಿಕೆ ಮಾಡಿ ಪಾಲು ಪಡೆದಿವೆ. ಇದೀಗ ಡಿಜಿಟಲ್​ ದಿಗ್ಗಜ ಗೂಗಲ್​ ಸಹ ಹೂಡಿಕೆಗೆ ಮುಂದಾಗಿರೋದು ಎಲ್ಲರ ಕುತೂಹಲವನ್ನ ಮತ್ತಷ್ಟು ಕೆರಳಿಸಿದೆ. ಕೊರೊನಾ ಆರ್ಥಿಕ ಸಂಕಷ್ಟ ಕಾಲದಲ್ಲಿ ಇದು ಭಾರತ ಆರ್ಥಿಕತೆಗೆ ನೆರವಾಗಲಿದೆ ಎಂದು ಆಶಿಸಲಾಗಿದೆ.

ಭಾರತದಲ್ಲಿ ಒಟ್ಟು 1 ಲಕ್ಷ ಕೋಟಿ ರೂ ಹೂಡಿಕೆ, ಜೈ ಹೋ ಸುಂದರ್​ ಪಿಚೈ! ಅಂದ್ರೆ, ಕೊರೊನಾದಂತಹ ಸಂಕಷ್ಟ ಕಾಲದಲ್ಲಿ.. ನಿನ್ನೆಯ 75 ಸಾವಿರ ಕೋಟಿ ರೂ ಮತ್ತು ಈಗಿನ 30  ಸಾವಿರ ಕೋಟಿ ಅಂದ್ರೆ 1 ಲಕ್ಷ ಕೋಟಿ ರೂಪಾಯಿಯನ್ನು ಗೂಗಲ್ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಲಿದೆ. ತನ್ಮೂಲಕ ಗೂಗಲ್ ಸಿಇಒ, ಚೆನ್ನೈ ಮೂಲದ ಸುಂದರ್ ಪಿಚೈ ದೇಶ ಪ್ರೇಮ ತೋರಿರುವುದು ಭಾರೀ ಪ್ರಶಂಸೆಗೆ ಗುರಿಯಾಗಿದೆ.

Published On - 5:33 pm, Tue, 14 July 20

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ