ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಹಿರಿಯ ಪುತ್ರ ಕೊವಿಡ್​ ಸೋಂಕಿನಿಂದ ಸಾವು

|

Updated on: Apr 22, 2021 | 9:12 AM

ಪುತ್ರನ ಸಾವಿನ ಬಗ್ಗೆ ಸೀತಾರಾಮ್​ ಯಚೂರಿ ಟ್ವೀಟ್ ಮಾಡಿದ್ದು, ನನ್ನ ಹಿರಿಯ ಪುತ್ರ ಆಶೀಶ್​ ಕೊವಿಡ್​ ಸೋಂಕಿನಿಂದ ಮೃತಪಟ್ಟಿದ್ದಾನೆಂದು ತಿಳಿಸಲು ತುಂಬ ದುಃಖವಾಗುತ್ತಿದೆ.

ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಹಿರಿಯ ಪುತ್ರ ಕೊವಿಡ್​ ಸೋಂಕಿನಿಂದ ಸಾವು
ಆಶಿಶ್ ಯಚೂರಿ
Follow us on

ದೆಹಲಿ: ಸಿಪಿಎಂ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್​) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್​ ಯಚೂರಿ ಅವರ ಹಿರಿಯ ಪುತ್ರ ಆಶೀಶ್​ ಯಚೂರಿ ಕೊರೊನಾ ಸೋಂಕಿನಿಂದ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಗುರ್​ಗಾಂವ್​ನ ಮೇದಾಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪುತ್ರನ ಸಾವಿನ ಬಗ್ಗೆ ಸೀತಾರಾಮ್​ ಯಚೂರಿ ಟ್ವೀಟ್ ಮಾಡಿದ್ದು, ನನ್ನ ಹಿರಿಯ ಪುತ್ರ ಆಶೀಶ್​ ಕೊವಿಡ್​ ಸೋಂಕಿನಿಂದ ಮೃತಪಟ್ಟಿದ್ದಾನೆಂದು ತಿಳಿಸಲು ತುಂಬ ದುಃಖವಾಗುತ್ತಿದೆ. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್​ಗಳು ಹಾಗೂ ಈ ಹೋರಾಟದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಆಶೀಶ್​ ಯಚೂರಿಗೆ ಇನ್ನೂ 34ವಯಸ್ಸಷ್ಟೇ. 15ದಿನಗಳ ಹಿಂದೆಯೇ ಸೋಂಕು ತಗುಲಿತ್ತು. ಮೊದಲು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗಷ್ಟೇ ಗುರ್​ಗಾಂವ್​ಗೆ ಸ್ಥಳಾಂತರ ಮಾಡಲಾಗಿತ್ತು. ಆಶೀಶ್​ ದೆಹಲಿಯ ಪ್ರತಿಷ್ಠಿತ ಸುದ್ದಿಪತ್ರಿಕೆಯೊಂದರಲ್ಲಿ ಕಾಪಿ ಎಡಿಟರ್ ಆಗಿದ್ದರು. ಆಶೀಶ್​​ನ್ನು ಕಳೆದುಕೊಂಡ ಕುಟುಂಬ ಶಾಕ್​ನಲ್ಲಿದೆ. ಸೀತಾರಾಮ್ ಯಚೂರಿಯವರು ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

ಇದನ್ನೂ ಓದಿ: ನಾವು ಲಸಿಕೆ ಹಾಕಿಸಿಕೊಳ್ಳೋದಿಲ್ಲ ಇಲ್ಲಿ ಬಂದು ಕೊರೊನ ಹಬ್ಬಿಸಬೇಡಿ ಎಂದು ವಿಶ್ವನಾಥ್‌ ವಿರುದ್ಧ ಗರಂ ಆದ ಹಾಡಿ ಜನ

CPM general secretary sitaram yechury son Ashish Yechuri died due to Covid 19 in gurgaon