ನಾವು ಲಸಿಕೆ ಹಾಕಿಸಿಕೊಳ್ಳೋದಿಲ್ಲ; ಇಲ್ಲಿ ಬಂದು ಕೊರೊನಾ ಹಬ್ಬಿಸಬೇಡಿ ಎಂದು ವಿಶ್ವನಾಥ್‌ ವಿರುದ್ಧ ಗರಂ ಆದ ಹಾಡಿ ಜನ

ಕೊವಿಡ್ ಲಸಿಕೆ ಪಡೆಯಲು ಹಾಡಿ ಜನ ಹಿಂದೇಟು ಹಾಕಿದ್ದಾರೆ. ಶಾಸಕ ಮಂಜುನಾಥ್, MLC ವಿಶ್ವನಾಥ್‌ ಲಸಿಕೆ ಪಡೆಯುವಂತೆ ಮನವೊಲಿಸಲು ಹಾಡಿ ಜನರನ್ನು ಭೇಟಿಯಾದರು. ಈ ವೇಳೆ ತಾವು ಲಸಿಕೆ ಪಡೆಯಲ್ಲ....

ನಾವು ಲಸಿಕೆ ಹಾಕಿಸಿಕೊಳ್ಳೋದಿಲ್ಲ; ಇಲ್ಲಿ ಬಂದು ಕೊರೊನಾ ಹಬ್ಬಿಸಬೇಡಿ ಎಂದು ವಿಶ್ವನಾಥ್‌ ವಿರುದ್ಧ ಗರಂ ಆದ ಹಾಡಿ ಜನ
ಹಾಡಿ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ ವಿಶ್ವನಾಥ್
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Apr 22, 2021 | 9:21 AM

ಮೈಸೂರು: ಮಹಾಮಾರಿ ಕೊರೊನಾದ 2ನೇ ಅಲೆಯ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಶಾಸಕ ಮಂಜುನಾಥ್, MLC ವಿಶ್ವನಾಥ್‌ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಲ್ಲೇನಹೊಸಹಳ್ಳಿ ಹಾಡಿ ಜನರನ್ನು ಭೇಟಿ ಮಾಡಿ ಲಸಿಕೆ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಮನವಿಯನ್ನು ತಿರಸ್ಕರಿಸಿದ ಹಾಡಿ ಜನ ಮಂಜುನಾಥ್ ಹಾಗೂ ವಿಶ್ವನಾಥ್‌ ವಿರುದ್ಧ ಗರಂ ಆಗಿದ್ದಾರೆ.

ಕೊವಿಡ್ ಲಸಿಕೆ ಪಡೆಯಲು ಹಾಡಿ ಜನ ಹಿಂದೇಟು ಹಾಕಿದ್ದಾರೆ. ಶಾಸಕ ಮಂಜುನಾಥ್, MLC ವಿಶ್ವನಾಥ್‌ ಲಸಿಕೆ ಪಡೆಯುವಂತೆ ಮನವೊಲಿಸಲು ಹಾಡಿ ಜನರನ್ನು ಭೇಟಿಯಾದರು. ಈ ವೇಳೆ ತಾವು ಲಸಿಕೆ ಪಡೆಯಲ್ಲ. ನಮಗೆ ಯಾವ ಕಾಯಿಲೆ ಬರಲ್ಲ, ಅದು ಸಿಟಿ ಕಡೆಯವರಿಗೆ ಬರುವುದು. ನಾವಂತೂ ಇಂಜೆಕ್ಷನ್ ತಕೊಳ್ಳಲ್ಲಾ. ನಿಮ್ಮಂಥವರು ಬಂದು ಕೊರೊನಾ ಹಬ್ಬಿಸ್ತೀರಾ ಎಂದು H.P.ಮಂಜುನಾಥ್, ವಿಶ್ವನಾಥ್‌ ವಿರುದ್ಧ ಗರಂ ಆಗಿದ್ದಾರೆ.

ಹಾಡಿಯವರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಇದರಿಂದ ಕೊರೊನಾ ಬರಲ್ಲವೆಂದು ಎಷ್ಟೇ ಮನವೊಲಿಸಲು ಯತ್ನಿಸಿದ್ರೂ ಹಾಡಿ ಜನ ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಲ್ಲ. ನಾವೆಲ್ಲಾ ಲಸಿಕೆ ಹಾಕಿಸಿಕೊಂಡಿದೀವಿ. ನೀವು ಪಡೆಯದಿದ್ದರೆ ಪೊಲೀಸರು ಅರೆಸ್ಟ್ ಮಾಡ್ತಾರೆ ಎಂದು ವಿಶ್ವನಾಥ್ ಹಾಡಿ ಜನರನ್ನು ಒಪ್ಪಿಸಲು ಖಡಕ್ ಎಚ್ಚರಿಕೆ ನೀಡಿದ್ರು.ಈ ವೇಳೆ ನಿಧಾನವಾಗಿ ಹಾಕಿಸ್ಕೊತೀವಿ ಎಂದು ಹಾಡಿ ಜನ ಸಬೂಬು ನೀಡಿದ್ರು. H.P.ಮಂಜುನಾಥ್, ವಿಶ್ವನಾಥ್ ತೆರಳುತ್ತಿದ್ದಂತೆ ನಾವ್ಯಾರು ಲಸಿಕೆ ತಕೊಳ್ಳಲ್ಲ, ನಿಮ್ಮಂತೋರ್ ನಮ್ ಹಾಡಿಗೆ ಬಂದು ಕೊರೊನಾ ಹಬ್ಬಿಸ್ತೀರಾ. ನೀವ್ ಬರೋದು ಬೇಡ ನಮ್ ಪಾಡಿಗೆ ಬಿಟ್ಟು ಬಿಡಿ ಅಂತಾ ಅಲ್ಲಿಂದ ಹಾಡಿವಾಸಿಗಳು ಹೊರಟು ಹೋಗಿದ್ದಾರೆ.

H Vishwanath

ವಿಶ್ವನಾಥ್ ಮನವಿ ತಿರಸ್ಕರಿಸಿದ ಹಾಡಿ ಜನ

ಇದನ್ನೂ ಓದಿ: ನನ್ನ ಪ್ಲೇಸ್‌ನಲ್ಲಿ ಆ ವ್ಯಕ್ತಿ ಎಲಿಮಿನೇಟ್ ಆಗ್ಬೇಕಿತ್ತು: ಬಿಗ್ ಬಾಸ್ ಕಂಟೆಸ್ಟೆಂಟ್ ವಿಶ್ವನಾಥ್ ಹಾವೇರಿ

Published On - 8:48 am, Thu, 22 April 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ