ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕು ಪತ್ತೆಯಾದ ಗಣ್ಯರ ಸಾಲಿಗೆ ಈಗ ಸಚಿನ್ ತೆಂಡೂಲ್ಕರ್ ಸಹ ಸೇರ್ಪಡೆಯಾಗಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಕ್ರಿಕೆಟ್ ಸವ್ಯಸಾಚಿ ತೆಂಡೂಲ್ಕರ್, ‘ ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ನನಗೆ ಕೊರೊನಾ ಸೋಂಕಿನ ಅಲ್ಪಸ್ವಲ್ಪ ಲಕ್ಷಣಗಳಿದ್ದು, ಮನೆಯ ಮಿಕ್ಕೆಲ್ಲರಿಗೂ ಕೊರೊನಾ ನೆಗೆಟಿವ್ ಬಂದಿದೆ. ಮುಂಜಾಗೃತಾ ಕ್ರಮವಾಗಿ ಹೋಂ ಕ್ವಾರಂಟೈನ್ ಆಗಿ ವೈದ್ಯರು ಸೂಚಿಸಿದ ಎಲ್ಲ ಸೂಚನೆಗಳನ್ನು ಅನುಸರಿಸುತ್ತಿದ್ದೇನೆ. ಕೊರೊನೊ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಎಲ್ಲ ವೈದ್ಯ ಸಮುದಾಯಕ್ಕೂ, ದೇಶದ ನನ್ನೆಲ್ಲ ಅಭಿಮಾನಿಗಳಿಗೂ ನಾವು ಕೃತಜ್ಞನಾಗಿದ್ದೇನೆ’ ಎಂದು ಟ್ವೀಟ್ ಮಾಡಿ ವಿಷಯ ಬಹಿರಂಗಪಡಿಸಿದ್ದಾರೆ.
— Sachin Tendulkar (@sachin_rt) March 27, 2021
ಸಚಿನ್ ತೆಂಡೂಲ್ಕರ್ಗೂ ಕೊರೊನಾ ಸೋಂಕು ತಗುಲುವ ಮೂಲದ ದೇಶದ ಇನ್ನೋರ್ವ ತಾರೆ ಈ ಸೋಂಕಿಗೆ ತುತ್ತಾದಂತಾಗಿದೆ. ಈಗಾಗಲೇ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ನಟ ಮಾಧವನ್, ಪರೇಶ್ ರಾವಲ್, ನಟಿ ತಮನ್ನಾ ಭಾಟಿಯಾ, ನಟ ಅರ್ಜುನ್ ಕಪೂರ್, ಬಾಲಿವುಡ್ ನಟರಾದ ರಣಬೀರ್ ಕಪೂರ್, ಮನೋಜ್ ಬಾಜಪೇಯಿ, ಸಿದ್ಧಾಂತ್ ಚತುರ್ವೇದಿ, ತಾರಾ ಸುತಾರಿಯಾ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮುಂತಾದವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.
ಇದನ್ನೂ ಓದಿ: ಕೊರೊನಾ ಲಸಿಕೆ ವಿತರಣೆಯಲ್ಲಿ ಸ್ಲಂ ನಿವಾಸಿಗಳಿಗೆ ಆದ್ಯತೆ ಸಿಗಲಿ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
Published On - 10:38 am, Sat, 27 March 21