ಬರ್ತ್​ ಡೇ ಮರುದಿನವೇ ಸೋಷಿಯಲ್ ಮೀಡಿಯಾಗಳಿಗೆ ಗುಡ್​ ಬೈ ಹೇಳಿದ ಆಮೀರ್ ಖಾನ್​; ನೆಪ ಹೇಳುವುದನ್ನು ಬಿಡಲು ನಿರ್ಧರಿಸಿದ್ದಾರಂತೆ ಮಿ.ಪರ್ಫೆಕ್ಷನಿಸ್ಟ್‌ ​

ಕಳೆದ ವರ್ಷ ಫೆಬ್ರವರಿಯಲ್ಲಿ ಆಮೀರ್​ ಖಾನ್​ ಇಂಥದ್ದೇ ಒಂದು ನಿರ್ಧಾರ ಮಾಡಿದ್ದರು. ತಮ್ಮ ಮುಂದಿನ ಚಿತ್ರ ಲಾಲ್​ ಸಿಂಗ್​ ಚಡ್ಡಾ ಬಿಡುಗಡೆಯಾಗುವವರೆಗೂ ನನ್ನ ಮೊಬೈಲ್​ ಸ್ವಿಚ್​ ಆನ್​​ ಮಾಡೋದಿಲ್ಲ ಎಂದು ಹೇಳಿದ್ದರು.

ಬರ್ತ್​ ಡೇ ಮರುದಿನವೇ ಸೋಷಿಯಲ್ ಮೀಡಿಯಾಗಳಿಗೆ ಗುಡ್​ ಬೈ ಹೇಳಿದ ಆಮೀರ್ ಖಾನ್​; ನೆಪ ಹೇಳುವುದನ್ನು ಬಿಡಲು ನಿರ್ಧರಿಸಿದ್ದಾರಂತೆ ಮಿ.ಪರ್ಫೆಕ್ಷನಿಸ್ಟ್‌ ​
ಆಮೀರ್​ ಖಾನ್​
Follow us
Lakshmi Hegde
|

Updated on:Mar 15, 2021 | 8:03 PM

ನಿನ್ನೆ ಭಾನುವಾರ (ಮಾರ್ಚ್​ 14)ವಷ್ಟೇ 56ನೇ ಜನ್ಮದಿನ ಆಚರಿಸಿಕೊಂಡಿದ್ದ ಬಾಲಿವುಡ್ ನಟ ಆಮೀರ್ ಖಾನ್ (Aamir Khan)​ ಇಂದು ಏಕಾಏಕಿ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿಸಿದ್ದಾರೆ. ನಾನಿನ್ನು ವೈಯಕ್ತಿಕವಾಗಿ ಯಾವುದೇ ಸಾಮಾಜಿಕ ಜಾಲತಾಣಗಳನ್ನೂ ಉಪಯೋಗಿಸುವುದಿಲ್ಲ. ನಿನ್ನೆ ನನ್ನ ಜನ್ಮದಿನಕ್ಕೆ ಪ್ರೀತಿಯಿಂದ ಹಾರೈಸಿದ ಎಲ್ಲರಿಗೂ ಕೃತಜ್ಞತೆಗಳು. ನಿಮ್ಮ ಹಾರೈಕೆ, ಪ್ರೀತಿ-ವಿಶ್ವಾಸ ನೋಡಿ ನನ್ನ ಹೃದಯ ತುಂಬಿಬಂತು. ಇದೇ ನನ್ನ ಕೊನೆಯ ಪೋಸ್ಟ್ ಎಂದು ಹೇಳಿದ್ದಾರೆ.

ಮಿ.ಪರ್ಫೆಕ್ಷನಿಸ್ಟ್‌ ಎಂದೇ ಹೆಸರಾಗಿರುವ ಆಮೀರ್ ಖಾನ್ ಇಂದು ತಮ್ಮ ಕೊನೇ ಸೋಷಿಯಲ್ ಮೀಡಿಯಾ ಪೋಸ್ಟ್​​ನಲ್ಲಿ ಹೀಗೆಂದು ಬರೆದುಕೊಂಡಿದ್ದಾರೆ..ಇದೇ ನನ್ನ ಕೊನೇ ಪೋಸ್ಟ್ ಆಗಲಿದೆ. ಬೇರೆ ಹೇಗಾದರೂ ನಾನು ಸಕ್ರಿಯನಾಗಿ ಇರುತ್ತೇನೆ. ಯಾವುದೇ ನೆಪ, ಸೋಗು ಹಾಕುವುದನ್ನು ಬಿಡಬೇಕು ಎಂದು ನಿರ್ಧರಿಸಿದ್ದೇನೆ. ನನ್ನ ಸಿನಿಮಾ ಕೆಲಸಗಳ ಮೇಲೆ ಪೂರ್ತಿಯಾಗಿ ಗಮನ ಹರಿಸಬೇಕಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಲ್ಲಿಸುತ್ತಿದ್ದೇನೆ. ನಿಮ್ಮೊಂದಿಗೆ ಖಂಡಿತ ಬೇರೆ ದಾರಿಯಲ್ಲಿ ಸಂವಹನ ನಡೆಸುತ್ತೇನೆ. ಇನ್ನೊಂದು ಮುಖ್ಯವಿಷಯವೆಂದರೆ ಆಮೀರ್​ಖಾನ್ ಪ್ರೊಡಕ್ಷನ್ ತನ್ನ ಅಧಿಕೃತ ಚಾನಲ್​ ಪ್ರಾರಂಭ ಮಾಡುತ್ತಿದ್ದು, ನನ್ನ ಮುಂದಿನ ಸಿನಿಮಾಗಳ ಕುರಿತಾದ ಎಲ್ಲ ಮಾಹಿತಿಯೂ ಅದರಲ್ಲಿ ಶೇರ್ ಆಗಲಿದೆ ಎಂದು ಆಮೀರ್ ಖಾನ್​ ಹೇಳಿದ್ದಾರೆ.

ಇಂಥ ನಿರ್ಧಾರಗಳು ಮೊದಲಲ್ಲ ! ಕಳೆದ ವರ್ಷ ಫೆಬ್ರವರಿಯಲ್ಲಿ ಆಮೀರ್​ ಖಾನ್​ ಇಂಥದ್ದೇ ಒಂದು ನಿರ್ಧಾರ ಮಾಡಿದ್ದರು. ತಮ್ಮ ಮುಂದಿನ ಚಿತ್ರ ಲಾಲ್​ ಸಿಂಗ್​ ಚಡ್ಡಾ ಬಿಡುಗಡೆಯಾಗುವವರೆಗೂ ನನ್ನ ಮೊಬೈಲ್​ ಸ್ವಿಚ್​ ಆನ್​​ ಮಾಡೋದಿಲ್ಲ ಎಂದು ಹೇಳಿದ್ದರು. ಲಾಲ್​ ಸಿಂಗ್​ ಚಡ್ಡಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದರಿಂದ ಹೀಗೆ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದರು. ಲಾಲ್​ ಸಿಂಗ್​ ಚಡ್ಡಾ ಕೆಲಸಗಳು ಬಹುತೇಕ ಮುಗಿದಿದ್ದು, ಈ ವರ್ಷದ ಡಿಸೆಂಬರ್​ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ:  ಬಾಂಗ್ಲಾದೇಶದ ಮೊದಲ ಮಂಗಳಮುಖಿ ಸುದ್ದಿ ನಿರೂಪಕಿ ತಶ್ನುವಾ; ಮಹಿಳಾ ದಿನಾಚರಣೆಯಂದೇ ಕೆಲಸ ಪ್ರಾರಂಭ

‘ಕೊರೊನಾ ಹಬ್ಬಲು ಮುಖ್ಯ ಕಾರಣವೆಂದರೆ…’: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

Published On - 8:00 pm, Mon, 15 March 21

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್