ರಮೇಶ್ ಜಾರಕಿಹೊಳಿ CD ಪ್ರಕರಣ: ತುಮಕೂರು ಮೂಲದ ಪತ್ರಕರ್ತನ ಪತ್ನಿಗೆ SIT ನೋಟಿಸ್

ರಮೇಶ್ ಜಾರಕಿಹೊಳಿ CD ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಮೂಲದ ಪತ್ರಕರ್ತನ ಪತ್ನಿಗೆ ನೋಟಿಸ್ ಜಾರಿಯಾಗಿದೆ. ವಿಚಾರಣೆಗೆ ಹಾಜರಾಗುಂತೆ SIT ಯಿಂದ ನೋಟಿಸ್ ನೀಡಲಾಗಿದೆ. ಪತ್ರಕರ್ತನ ಪತ್ನಿಗೆ ಬಸವನಗುಡಿ ಮಹಿಳಾ ಠಾಣೆಗೆ ಹಾಜರಾಗಲು ಸೂಚನೆ​ ಕೊಡಲಾಗಿದೆ.

ರಮೇಶ್ ಜಾರಕಿಹೊಳಿ CD ಪ್ರಕರಣ: ತುಮಕೂರು ಮೂಲದ ಪತ್ರಕರ್ತನ ಪತ್ನಿಗೆ SIT ನೋಟಿಸ್
ಪ್ರಾತಿನಿಧಿಕ ಚಿತ್ರ
Follow us
KUSHAL V
|

Updated on:Mar 15, 2021 | 9:15 PM

ಬೆಂಗಳೂರು: ರಮೇಶ್ ಜಾರಕಿಹೊಳಿ CD ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಮೂಲದ ಪತ್ರಕರ್ತನ ಪತ್ನಿಗೆ ನೋಟಿಸ್ ಜಾರಿಯಾಗಿದೆ. ವಿಚಾರಣೆಗೆ ಹಾಜರಾಗುಂತೆ SIT ಯಿಂದ ನೋಟಿಸ್ ನೀಡಲಾಗಿದೆ. ಪತ್ರಕರ್ತನ ಪತ್ನಿಗೆ ಬಸವನಗುಡಿ ಮಹಿಳಾ ಠಾಣೆಗೆ ಹಾಜರಾಗಲು ಸೂಚನೆ​ ಕೊಡಲಾಗಿದೆ.

ನಾಳೆ ಬೆಳಗ್ಗೆ 10.30ಕ್ಕೆ ಹಾಜರಾಗುವಂತೆ SIT ನೋಟಿಸ್ ನೀಡಿದೆ. ತುಮಕೂರು ಮೂಲದ ಆರೋಪಿಯ ಪತ್ನಿಗೆ SIT ನೋಟಿಸ್ ನೀಡಿದ್ದು ದಾಳಿ ವೇಳೇ ಮಹಿಳೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನೋಟಿಸ್​ ಜಾರಿಮಾಡಲಾಗಿದೆ. SIT ತನಿಖೆ ಆರಂಭವಾದ ದಿನದಿಂದ ನಾಪತ್ತೆಯಾಗಿರುವ ಸದ್ಯ ಅದೇ ಆರೋಪಿ, ಸಂತ್ರಸ್ತ ಯುವತಿ ಹಾಗೂ ಹ್ಯಾಕರ್​ಗಾಗಿ SIT ತಂಡ ಹುಡುಕಾಟ ನಡೆಸುತ್ತಿದೆ.

BNG SIT RAID 2

ಖಾಸಗಿ ಜಾಹೀರಾತು ಕಂಪನಿ ಮೇಲೆ SIT ತಂಡ ದಾಳಿ

ಖಾಸಗಿ ಜಾಹೀರಾತು ಕಂಪನಿ ಮೇಲೆ SIT ತಂಡ ದಾಳಿ ರಮೇಶ್ ಜಾರಕಿಹೊಳಿ CD ಪ್ರಕರಣದಲ್ಲಿ ಖಾಸಗಿ ಜಾಹೀರಾತು ಕಂಪನಿ ಮೇಲೆ SIT ತಂಡ ದಾಳಿ ನಡೆಸಿದೆ. ಕುಮಾರಕೃಪಾ ರಸ್ತೆಯಲ್ಲಿರುವ ಜಾಹೀರಾತು ಕಂಪನಿ ಮೇಲೆ ತಂಡ ದಾಳಿ ನಡೆಸಿದೆ. CD ಮತ್ತು ಫೋಟೋ ಎಡಿಟ್ ಮಾಡಿರಬಹುದಾದ ಶಂಕೆ ಹಿನ್ನೆಲೆಯಲ್ಲಿ ತಂಡ ದಾಳಿ ನಡೆಸಿದೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಎಸಿಪಿ ನಾಗರಾಜ್ ನೇತೃತ್ವದ SIT ತಂಡದಿಂದ ಶೋಧ ನಡೆದಿದೆ.

BNG SIT RAID 1

ದಾಳಿಯಲ್ಲಿ ವಶಪಡಿಸಿಕೊಂಡ ವಸ್ತುಗಳು

ಚಿಕ್ಕಮಗಳೂರು ಮೂಲದ ಆರೋಪಿ ಇದೇ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಎಡಿಟ್ ಮಾಡಲಾಗಿದೆ ಎನ್ನುತ್ತಿರುವ ಸಿ.ಡಿಗೆ ಧ್ವನಿ‌ ನೀಡಿರುವ ಆರೋಪ ಈತನ ಮೇಲಿದೆ. ಸದ್ಯ, ಅದೇ ಆರೋಪಿಯ ಧ್ವನಿ ಮಾದರಿಯನ್ನ FSL​ಗೆ ರವಾನಿಸಲಾಗಿದೆ.

ಕಚೇರಿಯಲ್ಲಿದ್ದ ಲ್ಯಾಪ್‌ಟಾಪ್​, ಸಿಡಿಗಳು, ಡಿವಿಡಿ, ಪೆನ್​ಡ್ರೈವ್ ವಶಕ್ಕೆ ಪಡೆಯಲಾಗಿದೆ. ಸಿಡಿ ವಾಯ್ಸ್ ಎಡಿಟ್ ಶಂಕೆ ಹಿನ್ನೆಲೆ‌ ದಾಳಿ ನಡೆಸಿದ್ದ SIT ಕಂಪನಿಯ ಮಾಲೀಕರಿಗೆ ನೋಟಿಸ್​​​​ ನೀಡಿದೆ. ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ರಮೇಶ್ ಜಾರಕಿಹೊಳಿ ಸಿಡಿ: ರಾಜಕೀಯ ಹೋರಾಟಕ್ಕೆ ಹೆಚ್ಚು ಆಸಕ್ತಿ ತೋರುತ್ತಿರುವ ಡಿಕೆಶಿ ಇತ್ತ, ರಮೇಶ್ ಜಾರಕಿಹೊಳಿ ಸಿಡಿ ಕುರಿತು ರಾಜಕೀಯ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಈ ಕಾರಣಕ್ಕೆ ಇಂದು ಹಿರಿಯ ಕಾಂಗ್ರೆಸ್ ನಾಯಕರ ಸಭೆ ಕರೆದ ಡಿ.ಕೆ.ಶಿವಕುಮಾರ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.

50 ಹಿರಿಯ ‘ಕೈ’ ನಾಯಕರೊಂದಿಗೆ ಡಿಕೆಶಿ ಸಭೆ ನಡೆಸಿದರು. ಈಗಾಗಲೇ ಶಾಸಕ ಸಂಗಮೇಶ್ ಪ್ರಕರಣ, ಜನಾಕ್ರೋಶ ಸಭೆ ಹಾಗೂ ಜನಧ್ವನಿ ಸಭೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಹೀಗಾಗಿ, ಸಿಡಿ ಪ್ರಕರಣವನ್ನೂ ಸರ್ಕಾರದ ವಿರುದ್ಧ ಬಳಸಿಕೊಳ್ಳಲು ಶಿವಕುಮಾರ್​ ಆಸಕ್ತಿ ತೋರಿದ್ದಾರೆ.

ಈ ಹಿನ್ನೆಲೆಯಲ್ಲಿ, ಇಂದು ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ‘ಕೈ’ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಸಿದ್ದರಾಮಯ್ಯ, ರಮೇಶ್ ಕುಮಾರ್, ರೆಹಮಾನ್ ಖಾನ್, ಕೆ.ಜೆ.ಜಾರ್ಜ್, ಎಸ್.ಆರ್.ಪಾಟೀಲ್, ಜಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ, ಖಂಡ್ರೆ ಮತ್ತು ಅಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ಭಾಗಿಯಾದರು.

ಇದನ್ನೂ ಓದಿ: ವ್ಯಾಕ್ಸಿನ್ ಹಾಕಿದ್ರಾ?.. ಗೊತ್ತೇ ಆಗ್ಲಿಲ್ಲ -ಕೊರೊನಾ ಲಸಿಕೆ ಪಡೆದ ಬಳಿಕ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

Published On - 7:19 pm, Mon, 15 March 21

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ