ವ್ಯಾಕ್ಸಿನ್ ಹಾಕಿದ್ರಾ?.. ಗೊತ್ತೇ ಆಗ್ಲಿಲ್ಲ -ಕೊರೊನಾ ಲಸಿಕೆ ಪಡೆದ ಬಳಿಕ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ

ಲಸಿಕೆ ಪಡೆದ ಬಳಿಕ ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದ ಸಿದ್ದರಾಮಯ್ಯಗೆ ನರ್ಸ್​ ಸರ್​ ವ್ಯಾಕ್ಸಿನ್​ ಹಾಕಿ ಆಯ್ತು ಎಂದು ಹೇಳಿದರು. ಅದಕ್ಕೆ ಕೊಂಚ ಆಶ್ಚರ್ಯಗೊಂಡ ಸಿದ್ದರಾಮಯ್ಯ, ಹೌದಾ?  ಗೊತ್ತೇ ಆಗಲಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.

ವ್ಯಾಕ್ಸಿನ್ ಹಾಕಿದ್ರಾ?.. ಗೊತ್ತೇ ಆಗ್ಲಿಲ್ಲ -ಕೊರೊನಾ ಲಸಿಕೆ ಪಡೆದ ಬಳಿಕ ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ
ಕೊರೊನಾ ಲಸಿಕೆ ಪಡೆದ ಸಿದ್ದರಾಮಯ್ಯ
Follow us
KUSHAL V
|

Updated on:Mar 15, 2021 | 7:39 PM

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೊರೊನಾ ಲಸಿಕೆ ಪಡೆದರು. ನಗರದ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಸಿದ್ದರಾಮಯ್ಯ ಕೊವಿಡ್​ ಲಸಿಕೆ ಹಾಕಿಸಿಕೊಂಡರು. ಇದೇ ವೇಳೆ, ಶಾಸಕ ಜಮೀರ್​ ಅಹ್ಮದ್​ ಸಿದ್ದರಾಮಯ್ಯಗೆ ಸಾಥ್​ ಕೊಟ್ಟರು. BNG SIDDARAMAIAH VACCINE 1 BNG SIDDARAMAIAH VACCINE 2

ಲಸಿಕೆ ಪಡೆದ ಬಳಿಕ ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದ ಸಿದ್ದರಾಮಯ್ಯಗೆ ನರ್ಸ್​ ಸರ್​ ವ್ಯಾಕ್ಸಿನ್​ ಹಾಕಿ ಆಯ್ತು ಎಂದು ಹೇಳಿದರು. ಅದಕ್ಕೆ ಕೊಂಚ ಆಶ್ಚರ್ಯಗೊಂಡ ಸಿದ್ದರಾಮಯ್ಯ, ಹೌದಾ?  ಗೊತ್ತೇ ಆಗಲಿಲ್ಲ ಎಂದು ನಗೆ ಚಟಾಕಿ ಹಾರಿಸಿದರು.

ಇತ್ತ, ಕಂದಾಯ ಸಚಿವ ಆರ್​.ಅಶೋಕ್​ ಸಹ ಕೊರೊನಾ ಲಸಿಕೆ ಪಡೆದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಚಿವ ಅಶೋಕ್ ಲಸಿಕೆ ಪಡೆದರು. ಅಂದ ಹಾಗೆ, ಕಳೆದ ಕೆಲವು ದಿನಗಳ ಹಿಂದೆ ಸಿಎಂ ಬಿ.ಎಸ್​.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್​ ಸಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು.

ಇದನ್ನೂ ಓದಿ: ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಹಾಕುವಂತಿಲ್ಲ -ಕರ್ನಾಟಕ ಲೇವಾದೇವಿದಾರರ ವಿಧೇಯಕ ಅಂಗೀಕಾರ

Published On - 6:46 pm, Mon, 15 March 21