ಸಿಎಂ ಸಭೆಯಲ್ಲಿ ತಜ್ಞರು ಕೊಟ್ಟ ಸಲಹೆಗಳು.. ಸೀಲ್​ಡೌನ್​, ನೈಟ್​ ಕರ್ಫ್ಯೂ ಯಾವುದೂ ಬೇಡ; ಮಕ್ಕಳು ಶಾಲೆಗಳಿಗೆ ಬರುವುದು ಬೇಡ

No lockdown in karnataka: ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯಿಂದಲೂ ಸಲಹೆಗಳು ಕೇಳಿಬಂದಿದ್ದು, ಸೀಲ್​ಡೌನ್​ ಮತ್ತು ನೈಟ್​ ಕರ್ಫ್ಯೂ ಯಾವುದೂ ಬೇಡ ಎಂಬ ಸಲಹೆ ಮೂಡಿಬಂದಿದೆ ಎಂದು ತಿಳಿದುಬಂದಿದೆ.

ಸಿಎಂ ಸಭೆಯಲ್ಲಿ ತಜ್ಞರು ಕೊಟ್ಟ ಸಲಹೆಗಳು..  ಸೀಲ್​ಡೌನ್​, ನೈಟ್​ ಕರ್ಫ್ಯೂ ಯಾವುದೂ ಬೇಡ; ಮಕ್ಕಳು ಶಾಲೆಗಳಿಗೆ ಬರುವುದು ಬೇಡ
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ
Follow us
ಸಾಧು ಶ್ರೀನಾಥ್​
|

Updated on:Mar 15, 2021 | 6:27 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಮತ್ತೆ ಹೆಚ್ಚಾಗುವ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ಉನ್ನತ ಮಟ್ಟದ ಅಧಿಕಾರಿಗಳು, ತಜ್ಞರ ಸಭೆಗಳನ್ನು ನಡೆಸಿದ್ದು, ಕೊರೊನಾಗೆ ಕಡಿವಾಣ ಹಾಕಲು ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.

ಈ ಸಲಹೆಗಳ ಪೈಕಿ ಮುಖ್ಯವಾಗಿ 6 ರಿಂದ 9 ನೇ ತರಗತಿಯವರಿಗೆ ಆನ್ ಲೈನ್ ಕ್ಲಾಸ್ ಮಾತ್ರ ಮಾಡಿ, ತರಗತಿಗಳನ್ನು ರದ್ದುಗೊಳಿಸಿ ಎಂದು ತಜ್ಞರ ತಂಡದಿಂದ ಸಲಹೆ ಕೇಳಿಬಂದಿದೆ. ಆದರೆ ಬಹುತೇಕ ಕಡೆ ಈಗ 9 ನೇ ತರಗತಿಗೆ ಪರೀಕ್ಷಾ ಸಮಯ. ಹಾಗಾಗಿ ತಜ್ಞರ ಸಲಹೆ ಅಂಗೀಕಾರವಾದರೆ 9 ನೇ ತರಗತಿ ಪರೀಕ್ಷೆಗಳು ರದ್ದಾಗುವ ಸಾಧ್ಯತೆಯಿರುತ್ತದೆ. ಜೊತೆಗೆ, ಈ ಬಾರಿ 1 ರಿಂದ ನೇ ತರಗತಿಯವರಿಗೆ ಪರೀಕ್ಷೆಗಳೆ ಇಲ್ಲದೆ ತೇರ್ಗಡೆಗೊಳ್ಳುವ ಸಾಧ್ಯತೆಯಿರುತ್ತದೆ.

ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿರುವ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯಿಂದಲೂ ಸಲಹೆಗಳು ಕೇಳಿಬಂದಿದ್ದು, ಸೀಲ್​ಡೌನ್​ ಮತ್ತು ನೈಟ್​ ಕರ್ಫ್ಯೂ ಯಾವುದೂ ಬೇಡ ಎಂಬ ಸಲಹೆ ಮೂಡಿಬಂದಿದೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ತಜ್ಞರಿಂದ ರಾಜ್ಯ ಸರ್ಕಾರಕ್ಕೆ ಒಂದಷ್ಟು ಸಲಹೆಗಳು ಬಂದಿದ್ದು, ಅವು ಹೀಗಿವೆ: 1) 1 – 6 ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಲಾಸ್ ಆರಂಭ ಬೇಡ 2) 6 ರಿಂದ 9 ನೇ ತರಗತಿಯವರಿಗೆ ಆನ್ ಲೈನ್ ಕ್ಲಾಸ್ ಮಾತ್ರ ಮಾಡಿ ತರಗತಿ ರದ್ದುಗೊಳಿಸಿ 3) ಅಪಾರ್ಟ್ ಮೆಂಟ್ ಗಳಲ್ಲೂ ವ್ಯಾಕ್ಸಿನೇಷನ್ ಗೆ ವ್ಯವಸ್ಥೆ ಮಾಡಬೇಕು 4) 60 ವರ್ಷದ ಒಳಗಿನವರಿಗೂ ವ್ಯಾಕ್ಸಿನೇಷನ್ ಗೆ ಸಲಹೆ 5) ಮಾಸ್ಕ್ ಕಡ್ಡಾಯಗೊಳಿಸಿ, ಜಾಗೃತಿ ಮೂಡಿಸುವುದು 6) ಅಂತಾರಾಜ್ಯ ಪ್ರಯಾಣಿಕರಿಗೆ ಟೆಸ್ಟ್ ರಿಪೋರ್ಟ್ ಕಡ್ಡಾಯ

Published On - 6:21 pm, Mon, 15 March 21