AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ಮಾಸ್ಟರ್ ಮೇಕಪ್ ಕಾರ್ಯಗಾರ: ಸೌಂದರ್ಯ ಲೋಕವನ್ನೇ ಸೃಷ್ಟಿಸಿದ ಕಲಾವಿದರು

ಅಪ್ಸರೆಯಂತೆ ಕಾಣುವುದಕ್ಕೆ ಮುಖ್ಯ ಕಾರಣ ಮಂಗಳೂರಿನ ಗೆಸ್ ಅಕಾಡೆಮಿ ಎನ್ನುವ ಸಂಸ್ಥೆ ಆಯೋಜಿಸಿದ್ದ ಮಾಸ್ಟರ್ ಮೇಕಪ್ ಎನ್ನುವ ಕಾರ್ಯಕ್ರಮ. ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮಹಿಳೆಯರಿಗೆ ಸಹಜವಾಗಿಯೇ ಬೇಸಿಕ್ ಮೇಕಪ್​ನ ಜ್ಞಾನವಿರುತ್ತದೆ.

ಮಂಗಳೂರಿನಲ್ಲಿ ಮಾಸ್ಟರ್ ಮೇಕಪ್ ಕಾರ್ಯಗಾರ: ಸೌಂದರ್ಯ ಲೋಕವನ್ನೇ ಸೃಷ್ಟಿಸಿದ ಕಲಾವಿದರು
ಕಣ್ಣಿಗೆ ಕಾಡಿಗೆ ಹಚ್ಚುತ್ತಿರುವ ಬ್ಯುಟಿಷಿಯನ್
Follow us
sandhya thejappa
|

Updated on: Mar 15, 2021 | 7:07 PM

ಮಂಗಳೂರು: ಹೆಣ್ಣಿನ ಸೌಂದರ್ಯಕ್ಕೆ ಮಾರು ಹೋಗದವರು ಯಾರಿದ್ದಾರೆ ಹೇಳಿ? ಅದರಲ್ಲೂ ಈ ಆಧುನಿಕ ಯುಗದಲ್ಲಿ ಬಣ್ಣ ಹಚ್ಚಿಕೊಂಡು ಸೌಂದರ್ಯ ವರ್ಧಕಗಳ ಸ್ಪರ್ಶಕ್ಕೆ ಸಿಕ್ಕರಂತೂ ಹೆಣ್ಣು ಅಪ್ಪಟ ಅಪ್ಸರೆ ಎನ್ನುವುದರಲ್ಲಿ ಬೇರೆ ಮಾತಿಲ್ಲ. ಹೆಣ್ಣಿನ ಮೊಗದಲ್ಲಿ ಸೌಂದರ್ಯ ಲೋಕವನ್ನೇ ಸೃಷ್ಟಿಸುವ ಕಲೆಯಿರುವುದು ಮೇಕಪ್ ಅರ್ಟಿಸ್ಟ್​ಗಳಿಗೆ ಮಾತ್ರ. ಹೀಗಾಗಿಯೇ ಮಂಗಳೂರಿನ ನಂತೂರು ಬಳಿಯ ಸಂದೇಶ ಸಭಾಂಗಣ ಅಕ್ಷರಶಃ ಬಣ್ಣ ಹಚ್ಚಿ ಅಪ್ಸರೆಯರನ್ನ ಸೃಷ್ಟಿಸುವ ವೇದಿಕೆಯಾಗಿ ಬದಲಾಗಿತ್ತು. ಹತ್ತಾರು ಮಾಡೆಲ್​ಗಳು ಮತ್ತು ವಿವಾಹಿತ ಮಹಿಳೆಯರು ಮದುಮಗಳಂತೆ ತಯಾರಾಗಿದ್ದರು. ಒಬ್ಬರನ್ನೊಬ್ಬರು ಮೀರಿಸುವಂತೆ, ಸೌಂದರ್ಯಕ್ಕೇ ಪೈಪೋಟಿ ಒಡ್ಡುವಂತೆ ಸೌಂದರ್ಯ ವರ್ಧಕಗಳ ಸ್ಪರ್ಶಕ್ಕೆ ಸಿಕ್ಕಿ ಆ ಕ್ಷಣ ಚೆಂದುಳ್ಳಿ ಚೆಲುವೆಯರಾಗಿ ಬದಲಾಗಿದ್ದರು.

ಗ್ರಾಮೀಣ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ ಕಾರ್ಯಗಾರ ಅಪ್ಸರೆಯಂತೆ ಕಾಣುವುದಕ್ಕೆ ಮುಖ್ಯ ಕಾರಣ ಮಂಗಳೂರಿನ ಗೆಸ್ ಅಕಾಡೆಮಿ ಎನ್ನುವ ಸಂಸ್ಥೆ ಆಯೋಜಿಸಿದ್ದ ಮಾಸ್ಟರ್ ಮೇಕಪ್ ಎನ್ನುವ ಕಾರ್ಯಕ್ರಮ. ಗ್ರಾಮೀಣ ಭಾಗದಲ್ಲಿ ಹಲವು ವರ್ಷಗಳಿಂದ ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಮಹಿಳೆಯರಿಗೆ ಸಹಜವಾಗಿಯೇ ಬೇಸಿಕ್ ಮೇಕಪ್​ನ ಜ್ಞಾನವಿರುತ್ತದೆ. ಆದರೆ ಓಡುತ್ತಿರುವ ಜಗತ್ತಿನಲ್ಲಿ ಮೇಕಪ್ ಕೂಡ ಅಪ್​ಡೇಟ್​ ಆಗುತ್ತಿದೆ. ಬರುವ ಗ್ರಾಹಕರು ಕೂಡ ಹೊಸ ರೀತಿಯ ಮೇಕಪ್ ಕಾನ್ಸಟಪ್ಟ್​​ಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಹೊಸತನಕ್ಕೆ ತೆರೆದುಕೊಂಡು ಹೊಸತನದ ಮೇಕಪ್ ಬಗ್ಗೆ ಕಲಿಯುವುದು ಗ್ರಾಮೀಣ ಭಾಗದ ಬ್ಯುಟಿಷಿಯನ್ಗಳಿಗೆ ಅನಿವಾರ್ಯವಾಗಿದೆ. ಹೀಗಾಗಿ ಬೆಂಗಳೂರಿನ ಮೇಕಪ್ ಆರ್ಟಿಸ್ಟ್ ಸುಮಲತಾ ಅವರ ನೇತೃತ್ವದಲ್ಲಿ ಸುಮಾಸ್ ಅಕಾಡೆಮಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಮಿಷನ್ ಕರ್ನಾಟಕ ಎನ್ನುವ ಕಲ್ಪನೆಯಲ್ಲಿ ಗ್ರಾಮೀಣ ಬ್ಯುಟಿಷಿಯನ್​ಗಳಿಗಾಗಿಯೇ ಮೇಕಪ್ ಕಲಿಕಾ ಕಾರ್ಯಾಗಾರ ಹಮ್ಮಿಕೊಂಡಿದೆ. ಅದರ ಭಾಗವಾಗಿ ಮಂಗಳೂರಿನಲ್ಲೂ ಸುಮಲತಾ ಅವರು 40ಕ್ಕೂ ಅಧಿಕ ಗ್ರಾಮೀಣ ಭಾಗದ ಬ್ಯುಟಿಷಿಯನ್ಗಳಿಗೆ ಬ್ರೈಡಲ್ ಸೇರಿ ಬೇರೆ ಬೇರೆ ವಿಭಾಗಗಳಲ್ಲಿ ಮೇಕಪ್​ನ ಲೇಟೆಸ್ಟ್ ಎನಿಸುವ ಅಪಡೇಟ್ ಶಿಕ್ಷಣವನ್ನ ಕಲಿಸಿಕೊಟ್ಡಿದ್ದಾರೆ. ಹಲವು ವರ್ಷಗಳಿಂದ ಬ್ಯುಟಿಷಿಯನ್​ಳಾಗಿದ್ದರೂ ಅಪ್​ಡೇಟ್​ ಆಗದ ಗ್ರಾಮೀಣ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿ ಮೇಕಪ್​ನ ಹೊಸ ವಿಧಾನ ಹೇಳಿ ಕೊಟ್ಟಿದ್ದಾರೆ.

ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತಿರುವ ಬ್ಯುಟಿಷಿಯನ್

ಕಾರ್ಯಕ್ರಮದ ಕೊನೆಗೆ ಪದವಿ ಪ್ರಧಾನದ ಮಾದರಿಯಲ್ಲಿ ಎಲ್ಲಾ ಮೇಕಪ್ ಅರ್ಟಿಸ್ಟ್​ಗಳಿಗೆ ಸರ್ಟಿಫಿಕೇಟ್ ನೀಡಲಾಯಿತು

ಎಲ್ಲಾ ಮೇಕಪ್ ಆರ್ಟಿಸ್ಟ್​ಗಳು ಮಾಡೆಲ್​ಗಳಿಗೆ ಮೇಕಪ್ ಮಾಡಿದರು

ಬೆಸ್ಟ್ ಮೇಕಪ್ ಆರ್ಟಿಸ್ಟ್ ಅವಾರ್ಡ್ ಗಳಿಸಿದ ಸುಮಲತಾ ಬೆಂಗಳೂರಿನ ಸುಮಲತಾ ಅವರು ಲಂಡನ್ ಅಂಗೀಕೃತ ಸಂಸ್ಥೆಯೊಂದರ ಪ್ರಾಮಾಣಿಕೃತ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಮಾಸ್ಟರ್ ಮೇಕಪ್ ಮತ್ತು ಹೇರ್ ಆರ್ಟಿಸ್ಟ್ ಪರಿಣಿತೆ ಆಗಿರುವ ಸುಮಲತಾ ಲಂಡನ್ ಸೇರಿ ಭಾರತದ ಹಲವೆಡೆ ಮೇಕಪ್ ಕಾರ್ಯಾಗಾರ ನಡೆಸಿದ್ದಾರೆ. ಸೌತ್ ಇಂಡಿಯನ್ ಬೆಸ್ಟ್ ಮೇಕಪ್ ಆರ್ಟಿಸ್ಟ್ ಅವಾರ್ಡ್ 2019 ಮತ್ತು 2020ರ ಮಿಸ್ ಇಂಡಿಯಾ ಮಿಲಿಯನ್ ಕರ್ನಾಟಕ ಪ್ರಶಸ್ತಿ, ಗ್ರ್ಯಾನಿ ಕೇರ್ ರನ್ನರ್ ಅಪ್ ಅವಾರ್ಡ್ ಕೂಡ ಇವರಿಗೆ ಲಭಿಸಿದೆ. ಹೀಗಾಗಿ ಮಂಗಳೂರಿನ ಗೆಸ್ ಅಕಾಡೆಮಿಯ ಭಾವನಾ ಅವರ ಕೋರಿಕೆ ಮೇರೆಗೆ ಮಂಗಳೂರಿನಲ್ಲೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೂ ಮಾಸ್ಟರ್ ಮೇಕಪ್ ಕಲಿಸಿ ಕೊಟ್ಟಿದ್ದಾರೆ.

ಕಾರ್ಯಾಗಾರದ ಕೊನೆಯಲ್ಲಿ ಎಲ್ಲಾ ಮೇಕಪ್ ಆರ್ಟಿಸ್ಟ್​ಗಳು ಮಾಡೆಲ್​ಗಳಿಗೆ ಮೇಕಪ್ ಮಾಡಿದರು. ಮುಂಬೈ ಮತ್ತು ಸ್ಥಳೀಯ ಮಾಡೆಲ್​ಗಳಿಗೆ ಬಣ್ಣ ಹಚ್ಚಿ ತಾವು ಕಲಿತದ್ದನ್ನ ಪ್ರಯೋಗ ಮಾಡಿದರು. ಕಾರ್ಯಕ್ರಮದ ಕೊನೆಗೆ ಪದವಿ ಪ್ರಧಾನದ ಮಾದರಿಯಲ್ಲಿ ಎಲ್ಲಾ ಮೇಕಪ್ ಅರ್ಟಿಸ್ಟ್​ಗಳಿಗೆ ಸರ್ಟಿಫಿಕೇಟ್ ಕೊಟ್ಟು ಧೈರ್ಯ ತುಂಬುವ ಕೆಲಸವೂ ನಡೆಯಿತು. ಈ ಮೂಲಕ ಗ್ರಾಮೀಣ ಬ್ಯೂಟಿಷಿನ್​ಗಳು ತಮ್ಮದೇ ಆದ ಸ್ವಂತ ಬ್ಯೂಟಿ ಸೆಲೂನ್ ತೆರೆಯುವುದಕ್ಕೆ ಮತ್ತು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವುದಕ್ಕೆ ಈ ಕಾರ್ಯಾಗಾರ ನೆರವಾಯಿತು.

ಇದನ್ನೂ ಓದಿ

ಮಂಡ್ಯದಲ್ಲಿ ರಾಜ್ಯ ಮಟ್ಟದ ಜೋಡಿ ಹಸುಗಳ ಗಾಡಿ ಓಟದ ಸ್ಪರ್ಧೆ: ಭಾಗವಹಿಸಿದವು 80 ಜೋಡಿ ಹಸುಗಳು

KGF Chapter 2: ಹಾಲಿವುಡ್​ ಸಿನಿಮಾದಲ್ಲಿ ಕೆಜಿಎಫ್​-2 ಡೈಲಾಗ್? ಏನಿದರ ಹಿಂದಿನ ರಹಸ್ಯ

ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್