Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ಇಂದಿನಿಂದ ಮಾಸ್ಕ್ ಕಡ್ಡಾಯ, ಲಾಕ್ಡೌನ್ ಇಲ್ಲ: ಯಡಿಯೂರಪ್ಪ ಇನ್ನೆರೆಡು ದಿನಗಳಲ್ಲಿ ಅಂದರೆ ಮಾರ್ಚ್ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಅದಾದ ನಂತರ ಕೇಂದ್ರದ ನಿಲುವು ಸ್ಪಷ್ಟವಾಗಲಿದೆ. Link: ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್ಡೌನ್ ಇಲ್ಲ
2) ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಹಾಕಿದರೆ ಕಾನೂನು ಕ್ರಮ ವಿಧಾನಸಭೆಯಲ್ಲಿ ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ವಿಧೇಯಕ-2021 ಅಂಗೀಕಾರವಾಗಿದೆ. ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಹಾಕುವಂತಿಲ್ಲ. ಒಂದು ವೇಳೆ ಇಂತಹ ಕೃತ್ಯವನ್ನು ಎಸಗಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. Link: ಕರ್ನಾಟಕ ಲೇವಾದೇವಿದಾರರ ವಿಧೇಯಕ ಅಂಗೀಕಾರ
3) ವೈವಾಹಿಕ ಜೀವನಕ್ಕೆ ಕಾಲಿಟ್ಟ ಬುಮ್ರಾ- ಸಂಜನಾ ಗಣೇಶನ್ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಇಂದು ವರಿಸಿದ್ದಾರೆ. ಸಮಾರಂಭದ ಫೋಟೋಗಳನ್ನು ಮುಂಬೈ ಇಂಡಿಯನ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. Link: ವೈವಾಹಿಕ ಜೀವನಕ್ಕೆ ಕಾಲಿರಿಸಿದ ಕ್ರಿಕೆಟರ್ ಬುಮ್ರಾ- ಸಂಜನಾ ಗಣೇಶನ್
4) ಮಹಾರಾಷ್ಟ್ರದಲ್ಲಿ ಒಂದೇ ದಿನ 16,620 ಕೊರೊನಾ ಸೋಂಕಿತರು ಪತ್ತೆ ಕಳೆದ ವರ್ಷ ಇದೇ ಹೊತ್ತಿನಲ್ಲಿ ಆರಂಭವಾಗಿ ಹೆಮ್ಮಾರಿಯಾಗಿ ಕಾಡಿದ್ದ ಕೊರೊನಾ ಅಂತೂ ಇಂತೂ ನಿಯಂತ್ರಣವಾಯಿತು ಎನ್ನುವಷ್ಟರಲ್ಲಿ ಮತ್ತೆ ಭಯದ ಅಲೆ ಎಬ್ಬಿಸಲು ಶುರು ಮಾಡಿದೆ. Link: ಒಂದು ವರ್ಷ ಪೂರೈಸುವ ಹೊತ್ತಲ್ಲಿ ಮತ್ತೆ ಹಬ್ಬಲಿದೆಯಾ ಕೊರೊನಾ?
5) ಏಕತಾ ಮೂರ್ತಿ ವೀಕ್ಷಣೆಗೆ ಹೆಚ್ಚಿದ ಪ್ರವಾಸಿಗರ ಸಂಖ್ಯೆ ವಿಶ್ವದಲ್ಲೇ ಅತ್ಯಂತ ಎತ್ತರವಾದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಗುಜರಾತ್ನ ನರ್ಮದಾ ಜಿಲ್ಲೆಯ ಕೇವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಏಕತಾ ಮೂರ್ತಿ (Statue of Unity) ಇದೀಗ ಮೈಲಿಗಲ್ಲೊಂದನ್ನು ನಿರ್ಮಿಸಿದೆ. Link: 50 ಲಕ್ಷದ ಗಡಿದಾಟಿದೆ ಏಕತಾ ಮೂರ್ತಿ ವೀಕ್ಷಣೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ
6) ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದೇನೆ, ಆದರೆ ಪರಿಹಾರ ಸಿಕ್ಕಿಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಕುರಿಗಳು ಮೃತಪಟ್ಟರೆ ಪರಿಹಾರ ನೀಡುವ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ನನ್ನ ಕುರಿಗಳು ಮೃತಪಟ್ಟಿದ್ದಕ್ಕೆ ನಾನೇ ಅರ್ಜಿ ಸಲ್ಲಿಸಿದ್ದೇನೆ. ಆದರೆ ಈವರೆಗೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ಜನರನ್ನು ತಲುಪುತ್ತಿಲ್ಲ ಎಂದು ಸರ್ಕಾರವನ್ನು ದೂಷಿಸಿದ್ದಾರೆ. Link: ಕುರಿಗಳು ಸತ್ತಿದ್ದಕ್ಕೆ ಪರಿಹಾರ ಸಿಕ್ಕಿಲ್ಲ: ಸಿದ್ದರಾಮಯ್ಯ
7) ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾರ್ಚ್ 24ರಿಂದ 31ರವರೆಗೆ ಬೆಂಗಳೂರಲ್ಲಿ ನಡೆಸಬೇಕಿತ್ತು. ಆದರೆ, ಈಗ ಕೊರೊನಾ ಪ್ರಕರಣ ನಿಧಾನವಾಗಿ ಹೆಚ್ಚುತ್ತಿರುವುದರಿಂದ ಚಲನಚಿತ್ರೋತ್ಸವವನ್ನು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ. Link: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ
8) ಮ್ಯಾನ್ಮಾರ್: ಭುಗಿಲೆದ್ದ ಹಿಂಸೆಗೆ 40 ಬಲಿ ಕಳೆದ ಫೆಬ್ರವರಿ 1 ರಂದು ಆರಂಭವಾಗಿ ದಿನೇ ದಿನೆ ಮ್ಯಾನ್ಮಾರ್ನಲ್ಲಿ ಹಿಂಸಾಚಾರ ಎಲ್ಲೆಮೀರಿದೆ. ಅದೀಗ ಚೀನಾ ವಿರೋಧಿ ಆಕ್ರೋಶವಾಗಿ ಪರಿವರ್ತನೆಗೊಂಡಿದೆ. Link: ಮ್ಯಾನ್ಮಾರ್: ಭುಗಿಲೆದ್ದ ಹಿಂಸೆಗೆ 40 ಬಲಿ
9) ಟಿಎಂಸಿ ತೊರೆದು ಬಿಜೆಪಿ ಸೇರುತ್ತಿರುವ ನಾಯಕರು ಯಾರು? ಪಕ್ಷಾಂತರ ಪರ್ವದ ಬಿರುಸು ಕೋಲ್ಕತ್ತಾದಲ್ಲಿದೆ. ಸ್ಥಳೀಯ ರಾಜಕೀಯ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಇತರ ಎಲ್ಲ ಪಕ್ಷಗಳಿಗಿಂತ ಬಿಜೆಪಿಯೇ ಮುಂದಿದೆ. ಇಂದೂ ಸಹ ಟಿಎಂಸಿಯ ಹಲವು ನಾಯಕರು ಬಿಜೆಪಿ ಸೇರಿದ್ದಾರೆ. Link: ಚುನಾವಣೆ ಹೊಸ್ತಿಲಲ್ಲೇ ಟಿಎಂಸಿ ತೊರೆದು ಬಿಜೆಪಿ ಸೇರುತ್ತಿರುವ ನಾಯಕರು
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.