Statue of Unity: 50 ಲಕ್ಷದ ಗಡಿದಾಟಿದೆ ಏಕತಾ ಮೂರ್ತಿ ವೀಕ್ಷಣೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ; ಸ್ಥಳದಲ್ಲಿ ನಡೆದಿವೆ ಹಲವು ಅಭಿವೃದ್ಧಿ ಕಾರ್ಯಗಳು
ಕೆವಾಡಿಯಾಕ್ಕೆ ಹೆಚ್ಚಿನ ರೈಲು ಸೇವೆ ಒದಗಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಎಂಟು ರೈಲುಗಳು ಇಲ್ಲಿಗೆ ಸಂಚರಿಸುವಂತೆ ಇತ್ತೀಚೆಗಷ್ಟೇ ಯೋಜನೆ ರೂಪಿಸಲಾಗಿದೆ. ಹಾಗೇ ಅಹ್ಮದಾಬಾದ್ನ ಸಬರಮತಿ ನದಿ ಮತ್ತು ಏಕತಾ ಪ್ರತಿಮೆ ಇರುವ ಕೆವಾಡಿಯಾ ಮಧ್ಯೆ ಸೀ-ಪ್ಲೇನ್ (ಜಲವಿಮಾನ) ಸೇವೆಯನ್ನೂ ಕಲ್ಪಿಸಲಾಗಿದೆ.
ದೆಹಲಿ: ವಿಶ್ವದಲ್ಲೇ ಅತ್ಯಂತ ಎತ್ತರವಾದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಗುಜರಾತ್ನ ನರ್ಮದಾ ಜಿಲ್ಲೆಯ ಕೇವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಏಕತಾ ಮೂರ್ತಿ (Statue of Unity) ಇದೀಗ ಮೈಲಿಗಲ್ಲೊಂದನ್ನು ನಿರ್ಮಿಸಿದೆ. 2018ರ ಅಕ್ಟೋಬರ್ 31ರಂದು ಲೋಕಾರ್ಪಣೆಗೊಂಡ ಬಳಿಕ ಇದುವರೆಗೆ ಮೂರ್ತಿಯನ್ನು ನೋಡಲು 50 ಲಕ್ಷಕ್ಕೂ ಅಧಿಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಇಂದು ಗುಜರಾತ್ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ಗುಜರಾತ್ನ ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ ಟ್ವೀಟ್ ಕೂಡ ಮಾಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಮೂರ್ತಿಯ ಫೋಟೋವನ್ನು ಶೇರ್ ಮಾಡಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಿರ್ಮಿಸಲಾದ ಏಕತಾ ಮೂರ್ತಿ ಇಲ್ಲಿಯವರೆಗೆ 50 ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆದಿದೆ. ಇದೀಗ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿದ್ದು, ಎಲ್ಲ ವಯಸ್ಸಿನವರನ್ನೂ ಆಕರ್ಷಿಸುತ್ತಿದೆ ಎಂದು ಬರೆದಿದ್ದಾರೆ.
#StatueofUnity crosses five million visitors mark !!! Built under visionary leadership of Hon. @PMOIndia it has emerged as an international tourist destination, offering multiple attractions for all age groups. @narendramodi @tourismgoi @souindia pic.twitter.com/RSoCMEFB9m
— Dr Rajiv Kumar Gupta (@drrajivguptaias) March 15, 2021
ಗುಜರಾತ್ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿರುವ ಸರ್ದಾರ್ ಸರೋವರದ ಡ್ಯಾಮ್ನ ಸಾಧು ಬೆಟ್ ದ್ವೀಪದಲ್ಲಿ ನಿರ್ಮಿಸಲಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಮೂರ್ತಿ 2018ರಲ್ಲಿ ಉದ್ಘಾಟನೆಗೊಂಡಾಗಿನಿಂದ ದೇಶದ ಎಲ್ಲ ಕಡೆಯಿಂದ ಜನರು ಅದನ್ನು ನೋಡಲು ತೆರಳುತ್ತಿದ್ದಾರೆ. ಅಷ್ಟೇ ಅಲ್ಲ, ವಿದೇಶಿಗರೂ ಸಹ ಈ ಮೂರ್ತಿಯನ್ನು ವೀಕ್ಷಿಸಲು ಬರುತ್ತಿದ್ದಾರೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಲು ಪ್ರಾರಂಭಿಸಿದ್ದರಿಂದ ಗುಜರಾತ್ ಸರ್ಕಾರ ಕೂಡ ಹೆಚ್ಚಿನ ಆಸಕ್ತಿ ವಹಿಸಿ ಇಲ್ಲಿನ ಪ್ರದೇಶವನ್ನು ಅಭಿವೃದ್ಧಿಗೊಳಿಸಿದೆ.
ಕೆವಾಡಿಯಾಕ್ಕೆ ಹೆಚ್ಚಿನ ರೈಲು ಸೇವೆ ಒದಗಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಎಂಟು ರೈಲುಗಳು ಇಲ್ಲಿಗೆ ಸಂಚರಿಸುವಂತೆ ಇತ್ತೀಚೆಗಷ್ಟೇ ಯೋಜನೆ ರೂಪಿಸಲಾಗಿದೆ. ಹಾಗೇ ಅಹ್ಮದಾಬಾದ್ನ ಸಬರಮತಿ ನದಿ ಮತ್ತು ಏಕತಾ ಪ್ರತಿಮೆ ಇರುವ ಕೆವಾಡಿಯಾ ಮಧ್ಯೆ ಸೀ-ಪ್ಲೇನ್ (ಜಲವಿಮಾನ) ಸೇವೆಯನ್ನೂ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ರ ಜನ್ಮ ಶತಮಾನೋತ್ಸವದಂದು ಪ್ರಧಾನಿ ನರೇಂದ್ರ ಮೋದಿಯವರೇ ಉದ್ಘಾಟಿಸಿದ್ದರು. ಇದು ಕೂಡ ದೇಶದಲ್ಲೇ ಮೊದಲ ಜಲವಿಮಾನ ಯೋಜನೆಯಾಗಿದೆ. ಕೊವಿಡ್-19 ಸೋಂಕಿನ ಕಾರಣದಿಂದ ಕಳೆದ ವರ್ಷ ಏಕತಾ ಮೂರ್ತಿಯನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಇರಲಿಲ್ಲ. 2020ರ ಮಾರ್ಚ್ನಿಂದಲೇ ಬಂದ್ ಆಗಿದ್ದ ಈ ತಾಣವನ್ನು ಮತ್ತೆ ಪ್ರವಾಸಿಗರಿಗೆ ಮುಕ್ತ ಮಾಡಿಕೊಟ್ಟಿದ್ದು ಅಕ್ಟೋಬರ್ 17ರಂದು. ಆಗಿನಿಂದಲೂ ಭರ್ಜರಿ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಪಾಸಿಟಿವ್ ಆಗಿದ್ದರೂ ಊರೆಲ್ಲ ಸುತ್ತಾಡಿದ ಬಿಗ್ ಬಾಸ್ ಸ್ಪರ್ಧಿ! ಕೇಸ್ ಜಡಿದು ಬುದ್ಧಿ ಕಲಿಸಿದ ಅಧಿಕಾರಿಗಳು
ಧರ್ಮದ ಬಗ್ಗೆ ನಿಷ್ಠೆ ಇಲ್ಲ, ಕುಡಿತ ಹೆಚ್ಚಾಗಿದೆ, ನಾನು ಭ್ರಷ್ಟನಾಗಿದ್ದೇನೆ; ನಟ ಗೋವಿಂದ ಹೀಗಾಗಿದ್ದೇಕೆ?
Published On - 5:34 pm, Mon, 15 March 21