ಶೌಚಾಲಯದಲ್ಲಿ ಪ್ರತ್ಯಕ್ಷವಾಯ್ತು ಮೊಸಳೆ, ನಂತರ ನಡೆದದ್ದೇ ಬೇರೆ..!

|

Updated on: Jul 31, 2020 | 5:59 PM

ನಾವೆಲ್ಲ ಮೊಸಳೆಗಳನ್ನು ಹರಿಯುವ ನೀರಿನಲ್ಲಿ, ದೊಡ್ಡ ದೊಡ್ಡ ಹೊಂಡಗಳಲ್ಲಿ ಹಾಗೂ ನದಿಗಳಲ್ಲಿ ನೋಡಿರುತ್ತೇವೆ. ಆದರೆ ಮೊಸಳೆಯೊಂದು ಮನುಷ್ಯ ಉಪಯೋಗಿಸುವ ಶೌಚಾಲಯದಲ್ಲಿ ಕಂಡುಬಂದಿರುವ ವಿಚಿತ್ರ ಘಟನೆ ಫಿರೋಜ್ ಬಾದ್ ನಲ್ಲಿ ಕಂಡುಬಂದಿದೆ. ಉತ್ತರ ಪ್ರದೇಶದ ಫಿರೋಜ್ ಬಾದ್ ನ ಮೊಹಬ್ಬತ್ ಪುರ ಗ್ರಾಮದ ಶೌಚಾಲಯದಲ್ಲಿ ಮೊಸಳೆಯೊಂದು ಪತ್ತೆಯಾಗಿದ್ದು, ಸ್ವಲ್ಪ ಹೊತ್ತು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಕೂಡಲೇ ಸ್ಥಳೀಕರಿಂದ ಮಾಹಿತಿ ತಿಳಿದ NGO ಸಂಸ್ಥೆಯೊಂದು ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಶೌಚಾಲಯದಿಂದ ಹೊರತೆಗೆದಿದ್ದಾರೆ. ಜೊತೆಗೆ ಬೋನಿನ ಸಹಾಯದಿಂದ ಮೊಸಳೆಯನ್ನು ನದಿಗೆ ಬಿಡಲು […]

ಶೌಚಾಲಯದಲ್ಲಿ ಪ್ರತ್ಯಕ್ಷವಾಯ್ತು ಮೊಸಳೆ, ನಂತರ ನಡೆದದ್ದೇ ಬೇರೆ..!
Follow us on

ನಾವೆಲ್ಲ ಮೊಸಳೆಗಳನ್ನು ಹರಿಯುವ ನೀರಿನಲ್ಲಿ, ದೊಡ್ಡ ದೊಡ್ಡ ಹೊಂಡಗಳಲ್ಲಿ ಹಾಗೂ ನದಿಗಳಲ್ಲಿ ನೋಡಿರುತ್ತೇವೆ. ಆದರೆ ಮೊಸಳೆಯೊಂದು ಮನುಷ್ಯ ಉಪಯೋಗಿಸುವ ಶೌಚಾಲಯದಲ್ಲಿ ಕಂಡುಬಂದಿರುವ ವಿಚಿತ್ರ ಘಟನೆ ಫಿರೋಜ್ ಬಾದ್ ನಲ್ಲಿ ಕಂಡುಬಂದಿದೆ.

ಉತ್ತರ ಪ್ರದೇಶದ ಫಿರೋಜ್ ಬಾದ್ ನ ಮೊಹಬ್ಬತ್ ಪುರ ಗ್ರಾಮದ ಶೌಚಾಲಯದಲ್ಲಿ ಮೊಸಳೆಯೊಂದು ಪತ್ತೆಯಾಗಿದ್ದು, ಸ್ವಲ್ಪ ಹೊತ್ತು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಕೂಡಲೇ ಸ್ಥಳೀಕರಿಂದ ಮಾಹಿತಿ ತಿಳಿದ NGO ಸಂಸ್ಥೆಯೊಂದು ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಶೌಚಾಲಯದಿಂದ ಹೊರತೆಗೆದಿದ್ದಾರೆ.

ಜೊತೆಗೆ ಬೋನಿನ ಸಹಾಯದಿಂದ ಮೊಸಳೆಯನ್ನು ನದಿಗೆ ಬಿಡಲು ತೆಗೆದುಕೊಂಡು ಬಂದಿದ್ದಾರೆ. ಬೋನಿನ ಬಾಗಿಲು ತೆಗೆದ ಕೊಡಲೇ ಮೊಸಳೆ ಹಳ್ಳ ದಿಣ್ಣೆಗಳನ್ನು ಲೆಕ್ಕಿಸದೆ ಜೋರಾಗಿ ನೆಡೆದು ನದಿಯೊಳಗೆ ವಿಲೀನವಾಗಿದೆ.

Published On - 5:45 pm, Fri, 31 July 20