ಈ ವಿದ್ಯಾರ್ಥಿಗಳು 150 ಅಡಿ ಎತ್ತರದ ವಾಟರ್ ಟ್ಯಾಂಕ್ ಹತ್ತುತ್ತಾರೆ! ಯಾಕೆ? ಎಲ್ಲಿ ಗೊತ್ತಾ?
ಒಡಿಶಾ:ಕೋವಿಡ್ -19 ನಿಂದಾಗಿ ದೇಶದಲ್ಲಿ ಏಕಾಏಕಿ ಶಾಲೆಗಳು ಮತ್ತು ಕಾಲೇಜುಗಳು ಆನ್‌ಲೈನ್ ತರಗತಿಗಳ ಮೂಲಕ ತಮ್ಮ ಪಠ್ಯಕ್ರಮವನ್ನು ಮುಂದುವರಿಸುವ ಅನಿವಾರ್ಯತೆಗೆ ಸಿಲುಕಿವೆ. ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಪಡೆಯಲು ಸಾಧ್ಯವಾಗದ ಕೆಲವು ವಿದ್ಯಾರ್ಥಿಗಳಿಗೆ ಇದು ನಿಜವಾಗಿಯೂ ಸಮಸ್ಯೆಯಾಗಿದೆ. ಜೊತೆಗೆ ವಿದ್ಯಾರ್ಥಿಗಳು ಇರುವ ಪ್ರದೇಶದಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆ ಸಿಗುತಿಲ್ಲ. ಒಡಿಶಾದ ಸಂಬಲ್ಪುರದಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದು, ದೇಬಗರ್ ಗ್ರಾಮದ ಸ್ವಾಮಿ ಶಿವಾನಂದ ಸಂಸ್ಕೃತ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ವೇಗದ ಇಂಟರ್ನೆಟ್ ಸೇವೆ ಸಿಗುತಿಲ್ಲ. […]
ಒಡಿಶಾ:ಕೋವಿಡ್ -19 ನಿಂದಾಗಿ ದೇಶದಲ್ಲಿ ಏಕಾಏಕಿ ಶಾಲೆಗಳು ಮತ್ತು ಕಾಲೇಜುಗಳು ಆನ್‌ಲೈನ್ ತರಗತಿಗಳ ಮೂಲಕ ತಮ್ಮ ಪಠ್ಯಕ್ರಮವನ್ನು ಮುಂದುವರಿಸುವ ಅನಿವಾರ್ಯತೆಗೆ ಸಿಲುಕಿವೆ. ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಪಡೆಯಲು ಸಾಧ್ಯವಾಗದ ಕೆಲವು ವಿದ್ಯಾರ್ಥಿಗಳಿಗೆ ಇದು ನಿಜವಾಗಿಯೂ ಸಮಸ್ಯೆಯಾಗಿದೆ. ಜೊತೆಗೆ ವಿದ್ಯಾರ್ಥಿಗಳು ಇರುವ ಪ್ರದೇಶದಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆ ಸಿಗುತಿಲ್ಲ.
ಒಡಿಶಾದ ಸಂಬಲ್ಪುರದಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದು, ದೇಬಗರ್ ಗ್ರಾಮದ ಸ್ವಾಮಿ ಶಿವಾನಂದ ಸಂಸ್ಕೃತ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ವೇಗದ ಇಂಟರ್ನೆಟ್ ಸೇವೆ ಸಿಗುತಿಲ್ಲ. ಜೊತೆಗೆ ಮೊಬೈಲ್ ನೆಟ್‌ವರ್ಕ್ ಮೂಲಕ ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಹಾಜರಾಗಲು 150 ಅಡಿಯ ವಾಟರ್ ಟ್ಯಾಂಕ್ ಹತ್ತಬೇಕಾದ ಪರಿಸ್ಥಿತಿ ಎದುರಾಗಿದೆ.
ಆನ್ ಲೈನ್ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದು, ವಾಟರ್ ಟ್ಯಾಂಕ್ ಹತ್ತುವುದರ ಜೊತೆಗೆ ಅವರು ಮೊಬೈಲ್ ಫೋನ್, ನೋಟ್ಬುಕ್, ಇಯರ್ ಫೋನ್ ಗಳನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ತೀವ್ರ ತ್ರಾಸದಾಯಕವಾಗಿದೆ. ಇನ್ನು ಕೆಲ ವಿದ್ಯಾರ್ಥಿಗಳ ಬಳಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ವ್ಯವಸ್ಥೆ ಸಹ ಇಲ್ಲ.
ಜೊತೆಗೆ ವಿದ್ಯಾರ್ಥಿಗಳು ಟ್ಯಾಂಕ್ ಮೇಲೆ ಹತ್ತಿದಾಗ ತಲೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸುತ್ತಿದ್ದಾರೆ. ಶೈಕ್ಷಣಿಕ ವೀಡಿಯೊಗಳನ್ನು ಆನ್‌ಲೈನ್ ಅಥವಾ ಲೈವ್ ತರಗತಿಗಳಿಗೆ ಸ್ಟ್ರೀಮ್ ಮಾಡಲು 4ಜಿ ಇಂಟರ್‌ನೆಟ್ ನ ಅವಶ್ಯಕತೆ ಆದರೆ ನೆಲದ ಮಟ್ಟದಲ್ಲಿ ಕೇವಲ 2ಜಿ ಇಂಟರ್‌ನೆಟ್ ಸೇವೆ ಮಾತ್ರ ಲಭ್ಯವಿದೆ. ಹೀಗಾಗಿ ನಾವು 150 ಅಡಿ ಎತ್ತರದ ನೀರಿನ ಟ್ಯಾಂಕ್ ಅನ್ನು ಹತ್ತಲೇ ಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ನಮ್ಮ ಹಳ್ಳಿಯಲ್ಲಿ 3ಜಿ ಅಥವಾ 4ಜಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ನಾವು ಮುಖ್ಯಮಂತ್ರಿ ಮತ್ತು ಸಂಗ್ರಾಹಕರಿಗೆ ಹಲವಾರು ಪತ್ರಗಳನ್ನು ಬರೆದಿದ್ದೇವೆ, ಆದರೆ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಆದ್ದರಿಂದ ಸರಿಯಾದ ನೆಟ್‌ವರ್ಕ್ ಪಡೆಯಲು ನಾವು ವಾಟರ್ ಟ್ಯಾಂಕ್‌ಗೆ ಹತ್ತಬೇಕಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.