ಉದ್ಯೋಗಿಗಳಿಗೆ ಇಸ್ತ್ರಿ​ ಇಲ್ಲದ ಬಟ್ಟೆ ತೊಟ್ಟು ಬನ್ನಿ ಎಂದ ಕಂಪನಿ

|

Updated on: May 07, 2024 | 11:15 AM

ಇನ್ನುಮುಂದೆ ಪ್ರತಿ ಸೋಮವಾರ ಇಸ್ತ್ರಿ ಇಲ್ಲದ ಬಟ್ಟೆಯನ್ನು ಧರಿಸುವಂತೆ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಹೇಳಿದೆ. ಕಂಪನಿಯ ನಿರ್ಧಾರದ ಹಿಂದಿರುವ ಕಾರಣ ಹೀಗಿದೆ.

ಉದ್ಯೋಗಿಗಳಿಗೆ ಇಸ್ತ್ರಿ​ ಇಲ್ಲದ ಬಟ್ಟೆ ತೊಟ್ಟು ಬನ್ನಿ ಎಂದ ಕಂಪನಿ
Follow us on

ಬಟ್ಟೆಗೆ ಇಸ್ತ್ರಿ(Iron) ಇಲ್ಲದೆ ಮನೆಯಿಂದ ಹೊರಗೆ ಕಾಲಿಡದ ಜನರಿದ್ದಾರೆ, ಹಾಗೆಯೇ ವೀಕೆಂಡ್​ ಯಾವಾಗ ಬರುತ್ತೆ ಯಾವಾಗ ಟಿ-ಶರ್ಟ್​ ಜೀನ್ಸ್​ ಹಾಕಿಕೊಂಡು ಆರಾಮವಾಗಿ ಆಫೀಸಿಗೆ ಹೋಗಬಹುದು ಎಂದು ಕಾಯುವವರೂ ಇದ್ದಾರೆ. ಆದರೆ ವಾರದ ಆರಂಭದಲ್ಲೇ ಇಸ್ತ್ರಿ ಇಲ್ಲದ ಬಟ್ಟೆ ತೊಟ್ಟು ಆಫೀಸ್​ಗೆ ಬನ್ನಿ ಎಂದು ಈ ಕಂಪನಿ ಹೇಳಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಆದರೆ ಇದಕ್ಕೊಂದು ಕಾರಣವೂ ಇದೆ.

ಈ ಕಂಪನಿಯು ಪ್ರತಿ ಸೋಮವಾರ ಇಸ್ತ್ರಿ ಇಲ್ಲದ ಬಟ್ಟೆಯನ್ನು ತೊಟ್ಟು ಕಚೇರಿಗೆ ಬರುವಂತೆ ಹೇಳಿದೆ. ರಿಂಕಲ್ಸ್ ಅಚ್ಛೇ ಹೈ ಅಂದರೆ ರಿಂಕಲ್ಸ್ ಒಳ್ಳೆಯದು ಎನ್ನುವ ಅಭಿಯಾನ ಆರಂಭಿಸಲಾಗಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಮತ್ತು ಸಿಎಸ್‌ಐಆರ್‌ನ ಮೊದಲ ಮಹಿಳಾ ಮಹಾನಿರ್ದೇಶಕಿ ಡಾ ಎನ್ ಕಲೈಸೆಲ್ವಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಮತ್ತಷ್ಟು ಓದಿ: ಮಳೆಗಾಲದಲ್ಲಿ ಒದ್ದೆ ಬಟ್ಟೆಗಳನ್ನು ಸುಲಭವಾಗಿ ಒಣಗಿಸಲು ಕೆಲವು ಸಲಹೆಗಳು ಇಲ್ಲಿವೆ

ಪ್ರತಿಯೊಂದು ಬಟ್ಟೆಯನ್ನು ಇಸ್ತ್ರಿ ಮಾಡುವುದರಿಂದ 200 ಗ್ರಾಂ ಇಂಗಾಲದ ಡೈಆಕ್ಸೈಡ್ ಹೊರಸೂಸುತ್ತದೆ. ಆದ್ದರಿಂದ, ಇಸ್ತ್ರಿ ಮಾಡದ ಬಟ್ಟೆಗಳನ್ನು ಧರಿಸುವುದರಿಂದ, 200 ರಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಮೇ 1-15ರವರೆಗೆ ಸ್ವಚ್ಛತಾ ಪಕವಾಡದ ಅಂಗವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗದಿಎ. ಹವಾಮಾನ ಬದಲಾವಣೆ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಇವರು ಹೊಂದಿದ್ದಾರೆ.

ಹಾಗೆಯೇ ಕೆಲಸದ ಸ್ಥಳದಲ್ಲಿ ವಿದ್ಯುತ್ ಶುಲ್ಕವನ್ನು ಶೇಕಡಾ 10 ರಷ್ಟು ಕಡಿತಗೊಳಿಸುವ ಆರಂಭಿಕ ಗುರಿಯನ್ನು ಹೊಂದಿದೆ. ಎಸ್​ಒಪಿಯನ್ನು ಜೂನ್-ಆಗಸ್ಟ್ 2024 ರ ಅವಧಿಯಲ್ಲಿ ಪ್ರಾಯೋಗಿಕ ಪ್ರಯೋಗವಾಗಿ ಜಾರಿಗೊಳಿಸಲಾಗುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ