ಮುಂಬೈ: ಕೊರೊನಾ ಲಸಿಕೆ ಬರುವ ಮುನ್ನ.. ಅಯ್ಯೋ ಅದಿನ್ನೂ ಬಂದಿಲ್ಲವಲ್ಲ ಎನ್ನುವ ತಲೆಬಿಸಿ ಮಾತ್ರ ಇತ್ತು. ಆದರೆ, ಈಗ ಪ್ರಯೋಗಾಲದಯಲ್ಲಿ ಲಸಿಕೆಗೆ ಅನೊಮೋದನೆ ದೊರೆತಿದ್ದೇ ದೊರೆತಿದ್ದು ಒಂದರ ಮೇಲೊಂದು ಸಮಸ್ಯೆ, ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಸೆರಮ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳ ನಡುವಿನ ಶೀತಲ ಸಮರ ಅಂತ್ಯವಾಯಿತು ಎನ್ನುವಷ್ಟರಲ್ಲಿ ಹೊಸ ಸಮಸ್ಯೆಯೊಂದು ಉದ್ಭವವಾಗಿದೆ. ಸೆರಮ್ ಸಂಸ್ಥೆಯ ಕೊವಿಶೀಲ್ಡ್ ಲಸಿಕೆಯ ಹೆಸರಿನ ಕುರಿತಾಗಿ ಜಗಳ ಹುಟ್ಟಿಕೊಂಡಿದೆ.ಸೆ
ಸೆರಮ್ಗೂ ಮುಂಚೆಯೇ ತಾನು ಅರ್ಜಿ ಸಲ್ಲಿಸಿದ್ದೆ-ಕ್ಯೂಟಿಸ್ ಬಯೋಟೆಕ್ ತಕರಾರು
ಕ್ಯೂಟಿಸ್ ಬಯೋಟೆಕ್ ಎಂಬ ಮಹಾರಾಷ್ಟ್ರದ ನಾಂದೆಡ್ ಮೂಲದ ಔಷಧ ಉತ್ಪನ್ನಗಳ ಮಾರಾಟ ಸಂಸ್ಥೆಯೊಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಲಸಿಕೆ ವಿರುದ್ಧ ವಾಣಿಜ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಕೊವಿಶೀಲ್ಡ್ ಎನ್ನುವ ಹೆಸರಿನ ಬಳಕೆಗೆ ಸಂಬಂಧಿಸಿದಂತೆ ಸೆಸೆರುಮ
ಸೆರಮ್ಗೂ ಮುನ್ನವೇ ತಾನು ಅರ್ಜಿ ಸಲ್ಲಿಸಿದ್ದಾಗಿ ಕ್ಯೂಟಿಸ್ ಬಯೋಟೆಕ್ ತಕರಾರು ತೆಗೆದಿದೆ.
ತನ್ನ ಸ್ಯಾನಿಟೈಸೇಶನ್ ಉತ್ಪನ್ನಗಳಿಗೆ ಕೊವಿಶೀಲ್ಡ್ ಎಂಬ ಹೆಸರನ್ನು ಬಳಸಲು ನಿರ್ಧರಿಸಲಾಗಿತ್ತು. ಈ ವಿಚಾರವಾಗಿ ಸೆರಮ್ಗೂ ಮುನ್ನವೇ ನಾವು ಅನುಮತಿ ಕೇಳಿದ್ದೆವು ಎನ್ನುವುದು ಕ್ಯೂಟಿಸ್ ಬಯೋಟೆಕ್ ವಾದ. ಕಳೆದ ವರ್ಷ ಡಿಸೆಂಬರ್ 11ರಂದು ಕ್ಯೂಟಿಸ್ ಇಂತಹದ್ದೇ ಇನ್ನೊಂದು ವಿಚಾರವಾಗಿ ನ್ಯಾಯಾಲಯದ ಮಟ್ಟಿಲೇರಿತ್ತು. ಆ ಪ್ರಕರಣ ಇನ್ನೂ ಬಾಕಿ ಇರುವಾಗಲೇ ಈಗ ಸೆರಮ್ ವಿರುದ್ಧ ಹೊಸದಾಗಿ ದಾವೆ ಹೂಡಿದೆ.