Air India: ಕಳೆದ 10 ವರ್ಷಗಳಲ್ಲಿ ನೀವು ಏರ್​ ಇಂಡಿಯಾಗೆ ಖಾಸಗಿ ವಿವರ ನೀಡಿದ್ದರೆ, ಆ ಮಾಹಿತಿ ಸೋರಿಕೆಯಾಗಿದೆ ಎಚ್ಚರಾ!

|

Updated on: May 22, 2021 | 9:55 AM

Air India Data Breach: ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದೇನೋ ನಿಜ. ಆದ್ರೆ ಕ್ರೆಡಿಟ್​ ಕಾರ್ಡ್​, ಡೆಬಿಟ್​ ಕಾರ್ಡ್​ ಮಾಹಿತಿಗೆ ಸಂಬಂಧಿಸಿದ ಸಿವಿವಿ, ಸಿವಿಸಿ ನಂಬರ್​ಗಳು ದಾಳಿಗೆ ಒಳಗಾದ ಸರ್ವರ್​​ನಲ್ಲಿ ಇರಲಿಲ್ಲ. ಹಾಗಾಗಿ ಬಳಕೆದಾರರಿಗೆ ಯಾವುದೇ ತೊಂದರೆ ಆಗಿಲ್ಲ ಎಂಬ ಸಮಾಧಾನಕರ ಸಂಗತಿಯನ್ನೂ ಏರ್​ ಇಂಡಿಯಾ ಹೊರಹಾಕಿದೆ.

Air India: ಕಳೆದ 10 ವರ್ಷಗಳಲ್ಲಿ ನೀವು ಏರ್​ ಇಂಡಿಯಾಗೆ ಖಾಸಗಿ ವಿವರ ನೀಡಿದ್ದರೆ, ಆ ಮಾಹಿತಿ ಸೋರಿಕೆಯಾಗಿದೆ ಎಚ್ಚರಾ!
ಕಳೆದ 10 ವರ್ಷಗಳಲ್ಲಿ ನೀವು ಏರ್​ ಇಂಡಿಯಾಗೆ ಖಾಸಗಿ ವಿವರ ನೀಡಿದ್ದರೆ... ಆ ಮಾಹಿತಿ ಸೋರಿಕೆಯಾಗಿದೆ ಎಚ್ಚರಾ!
Follow us on

ನವದೆಹಲಿ: ಹೌದು ನೀವು ಮೇಲೆ ಓದಿದ್ದು ಸರಿಯಾಗಿದೆ. ಕಳೆದ 10 ವರ್ಷಗಳಲ್ಲಿ ನೀವು ಏರ್​ ಇಂಡಿಯಾಗೆ ನಿಮ್ಮ ಪ್ರಯಾಣ ಅನುಕೂಲಕ್ಕಾಗಿ ನಿಮ್ಮ ಖಾಸಗಿ ವಿವರ ನೀಡಿದ್ದರೆ… ಆ ಮಾಹಿತಿ ಸೋರಿಕೆಯಾಗಿದೆ ಎಚ್ಚರಾ! ಈ ಬಗ್ಗೆ ಖುದ್ದು ಏರ್​ ಇಂಡಿಯಾ ಸಂಸ್ಥೆಯೇ ಸ್ಪಷ್ಟಪಡಿಸಿದ್ದು, ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸಂಗ್ರಹಿಸಿಡುವ ಎಸ್​ಐಟಿಎ ಪಿಎಸ್ಎಸ್​ (SITA PSS) ಸರ್ವರ್​ ಸೈಬರ್​ ದಾಳಿಗೆ ತುತ್ತಾಗಿದೆ. 2011ರ ಆಗಸ್​ 26ರಿಂದ 2021ರ ಫೆಬ್ರವರಿ 20ರ ವರೆಗೆ ಈ ಸರ್ವರ್​​ನಲ್ಲಿದ್ದ ಮಾಹಿತಿ ಕಳ್ಳತನವಾಗಿದೆ.

ಹೀಗೆ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವುದೇನೋ ನಿಜ. ಆದ್ರೆ ಕ್ರೆಡಿಟ್​ ಕಾರ್ಡ್​, ಡೆಬಿಟ್​ ಕಾರ್ಡ್​ ಮಾಹಿತಿಗೆ ಸಂಬಂಧಿಸಿದ ಸಿವಿವಿ, ಸಿವಿಸಿ ನಂಬರ್​ಗಳು ದಾಳಿಗೆ ಒಳಗಾದ ಸರ್ವರ್​​ನಲ್ಲಿ ಇರಲಿಲ್ಲ. ಹಾಗಾಗಿ ಬಳಕೆದಾರರಿಗೆ ಯಾವುದೇ ತೊಂದರೆ ಆಗಿಲ್ಲ ಎಂಬ ಸಮಾಧಾನಕರ ಸಂಗತಿಯನ್ನೂ ಏರ್​ ಇಂಡಿಯಾ ಹೊರಹಾಕಿದೆ.

ಶುಕ್ರವಾರ ಈ ಮಾಹಿತಿ ಸೋರಿಕೆ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಏರ್​ ಇಂಡಿಯಾ ಸಂಸ್ಥೆಯು ಕೆಲವು ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಸೋರಿಕೆಗೊಂಡಿವೆ. ಆದರೆ ಅದಕ್ಕೆ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಹಾಗಾಗಿ ಯಾವುದೇ ಅನಾಹುತವಾಗಿಲ್ಲ. ವೈಯಕ್ತಿಕ ಮಾಹಿತಿ ದುರ್ಬಳಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದು ಏರ್​ ಇಂಡಿಯಾ ಸಂಸ್ಥೆಯಲ್ಲಿ ಕಂಡುಬಂದ ದೋಷವಷ್ಟೇ ಅಲ್ಲ; ಜಾಗತುಕ ವಿಮಾನಯಾನ ಸಂಸ್ಥೆಗಳ ಮೇಲೂ ಇಂತಹ ದಾಳಿ ನಡೆದಿದೆ. ಅಂದಾಜು 45 ಲಕ್ಷ ಮಂದಿ ಪ್ರಯಾಣಿಕರ ಖಾಸಗಿ ಮಾಹಿತಿ ಸೋರಿಕೆಯಾಗಿದೆ. ಕ್ರೆಡಿಟ್​ ಕಾರ್ಡ್​, ಡೆಬಿಟ್​ ಕಾರ್ಡ್​ ಮಾಹಿತಿ, ಮೊಬೈಲ್​ ನಂಬರ್​, ಪಾಸ್​ಪೋರ್ಟ್​ ಮಾಹಿತಿ, ಪ್ರಯಾಣಿಕರ ಹೆಸರು, ವಿಮಾನ ಪ್ರಯಾಣ ಟಿಕೆಟ್​ ಸಂಖ್ಯೆ ಹೀಗೆ ಪ್ರಯಾಣ ಸಂಬಂಧಿ ಹಂಚಿಕೊಂಡಿದ್ದ ಮಾಹಿತಿಗಳೆಲ್ಲವೂ ಸೋರಿಕೆಯಾಗಿವೆ ಎಂದು ತಿಳಿದುಬಂದಿದೆ.

(cyber attack Air India hit by data breach personal details of passengers accessed between August 2011 and February 2021)

‘ಮೇ ತಿಂಗಳ ಅಂತ್ಯದೊಳಗೆ ಏರ್​ ಇಂಡಿಯಾ ಖಾಸಗೀಕರಣ ನಿಶ್ಚಿತ.. ಇಲ್ಲದಿದ್ದರೆ ಮುಚ್ಚಬೇಕಾಗುತ್ತದೆ’-ಸಚಿವ ಹರ್ದೀಪ್​ ಸಿಂಗ್ ಪುರಿ

Published On - 9:45 am, Sat, 22 May 21