Cyber Fraud ಮೂಲಕ ಭಾರಿ ಹಣ ಕಳೆದುಕೊಂಡ ಡಿಎಂಕೆ ಸಂಸದ, ಮಾಜಿ ಕೇಂದ್ರ ಮಂತ್ರಿ ದಯಾನಿಧಿ ಮಾರನ್ #DigitalIndia ಸೇಫ್​ ಅಲ್ಲ ಅಂದರು!

|

Updated on: Oct 11, 2023 | 11:45 AM

ಡಿಎಂಕೆ ಸಂಸದ ದಯಾನಿಧಿ ಮಾರನ್ ಸೈಬರ್ ವಂಚನೆಗೆ ತುತ್ತಾಗಿದ್ದಾರೆ. 99,999 ರೂ. ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಆಶ್ಚರ್ಯವೆಂದರೆ ಅವರು OTP ಯನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಅಥವಾ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಿಲ್ಲ. ಆದಾಗ್ಯೂ ಅವರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಸಂಸದ ದಯಾನಿಧಿ ಮಾರನ್ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮಾಜಿ ಅಧ್ಯಕ್ಷ ಎಂ ಕರುಣಾನಿಧಿ ಅವರ ಮೊಮ್ಮಗ.

Cyber Fraud ಮೂಲಕ ಭಾರಿ ಹಣ ಕಳೆದುಕೊಂಡ ಡಿಎಂಕೆ ಸಂಸದ,  ಮಾಜಿ ಕೇಂದ್ರ ಮಂತ್ರಿ ದಯಾನಿಧಿ ಮಾರನ್ #DigitalIndia ಸೇಫ್​ ಅಲ್ಲ ಅಂದರು!
Cyber Fraud ಮೂಲಕ ಭಾರಿ ಹಣ ಕಳೆದುಕೊಂಡ ದಯಾನಿಧಿ ಮಾರನ್ #DigitalIndia ಸೇಫ್​ ಅಲ್ಲ ಅಂದ್ರು
Follow us on

ಸೈಬರ್ ಅಪರಾಧಿಗಳು ತಮ್ಮ ಕಾರ್ಯಸಾಧನೆಗಾಗಿ ಎಲ್ಲಾ ರೀತಿಯ ತಂತ್ರಗಳನ್ನು ಹೂಡುತ್ತಿರುತ್ತಾರೆ. ಗಿಫ್ಟ್, ಕೆವೈಸಿ, ಲಾಟರಿ ಹೆಸರಿನಲ್ಲಿ ಮೋಸ ಮಾಡುವ ವಂಚಕರು.. ಈಗ ಹೊಸ ಟ್ರೆಂಡ್ ಅನುಸರಿಸಿ ವಂಚನೆ ಮಾಡುತ್ತಿದ್ದಾರೆ. ಸೈಬರ್ ವಂಚನೆಯ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಡಿಎಂಕೆ ಸಂಸದ ದಯಾನಿಧಿ ಮಾರನ್ ಸೈಬರ್ ವಂಚನೆಗೆ ತುತ್ತಾಗಿದ್ದಾರೆ. ಆಶ್ಚರ್ಯಕರವಾಗಿ, ಅವರು ತಮ್ಮ OTP ಅನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಅಥವಾ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಿಲ್ಲ. ಆದಾಗ್ಯೂ ಅವರು ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಸಂಸದ ದಯಾನಿಧಿ ಮಾರನ್ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮಾಜಿ ಅಧ್ಯಕ್ಷ ಎಂ ಕರುಣಾನಿಧಿ ಅವರ ಮೊಮ್ಮಗ. ಈ ವೇಳೆ ಸಂಸದ ದಯಾನಿಧಿ ಮಾರನ್ ಪೊಲೀಸರಿಗೆ ದೂರು ನೀಡಿದ್ದು 99,999 ರೂ. ಕಳೆದುಕೊಮಡಿರುವುದಾಗಿ ಹೇಳಿದ್ದಾರೆ.

ಪೊಲೀಸ್ ದೂರಿನಲ್ಲಿ ತಮ್ಮ ಪತ್ನಿಗೆ ಮೂರು ವಿಭಿನ್ನ ಸಂಖ್ಯೆಗಳಿಂದ ಕರೆಗಳು ಬಂದಿವೆ ಎಂದು ಸಂಸದರು ತಿಳಿಸಿದ್ದಾರೆ. ತಮ್ಮ ಪತ್ನಿ ಪ್ರಿಯಾ ಮಾರನ್ ಅವರೇನೂ ಒಟಿಪಿ ಶೇರ್ ಮಾಡಿಲ್ಲ ಎಂದು ಹೇಳಿದ್ದಾರೆ. ದಯಾನಿಧಿ ಮಾರನ್ ಅವರು ತಮ್ಮ ಪತ್ನಿಯೊಂದಿಗೆ ಆಕ್ಸಿಸ್ ಬ್ಯಾಂಕ್‌ನಲ್ಲಿ ಜಂಟಿ ಖಾತೆಯನ್ನು ಹೊಂದಿದ್ದಾರೆ. ಆದರೆ ಅವರ ಪತ್ನಿಯ ಫೋನ್​​ ಸಂಖ್ಯೆಯನ್ನು ಆ ಖಾತೆಯೊಂದಿಗೆ ಲಿಂಕ್ ಮಾಡಿಲ್ಲ.

ಇದನ್ನೂ ಓದಿ: ತುಮಕೂರಿನ ಹೋಟೆಲ್​​ ಮಾಲೀಕ KYC ನೆಪದಲ್ಲಿ ಕೇಳಿದ ತಕ್ಷಣ OTP ಕೊಟ್ಟುಬಿಟ್ಟರು – 90000 ರೂ ಉಂಡೆನಾಮ ಹಾಕಿಸಿಕೊಂಡರು!

ಮೊದಲು ಕರೆ ಮಾಡಿದವರು ಹಿಂದಿಯಲ್ಲಿ ಮಾತನಾಡುತ್ತಿದ್ದರು, ಹಾಗಾಗಿ ಅವರ ಪತ್ನಿ ಅವರ ಜೊತೆ ಮಾತ್ರ ಮಾತನಾಡಿದ್ದರು ಎಂದು ದಯಾನಿಧಿ ಮಾರನ್ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ನಂತರ, ಸ್ವಲ್ಪ ಸಮಯದ ನಂತರ ಅವರ ಹೆಂಡತಿಗೆ ಎರಡು ವಿಭಿನ್ನ ಸಂಖ್ಯೆಗಳಿಂದ ಕರೆ ಬಂದಿತು. ಮೂರನೇ ಕರೆ ಸಂಪರ್ಕ ಕಡಿತಗೊಂಡ ಸ್ವಲ್ಪ ಸಮಯದಲ್ಲೇ ತಮ್ಮ ಉಳಿತಾಯ ಖಾತೆಯಿಂದ ರೂ. 99,999 ಕಡಿತಗೊಂಡಿದೆ ಎಂಬ ಸಂದೇಶ ಬಂದಿದೆ ಎಂದು ಸಂಸದ ದಯಾನಿಧಿ ಮಾರನ್ ಹೇಳಿದ್ದಾರೆ. ಈ ಮೊತ್ತವನ್ನು ಒಂದೇ ವಹಿವಾಟಿನಲ್ಲಿ ಡೆಬಿಟ್ ಮಾಡಲಾಗಿದೆ ಎಂದು ವಿವರಿಸಲಾಗಿದೆ.

ನಡೆದಿದ್ದೇನು?
ದಯಾನಿಧಿ ಮಾರನ್ ಅವರ ಪತ್ನಿಗೆ ಸಂಜೆ 4.15ರ ಸುಮಾರಿಗೆ ಮತ್ತೊಂದು ಮೊಬೈಲ್ ಸಂಖ್ಯೆಯಿಂದ (+916295812314) ಎಂಟು ಕರೆಗಳು ಬಂದಿದ್ದವು. ನಂತರ ಅವರಿಗೆ ಮೊಬೈಲ್ ಸಂಖ್ಯೆ +916215549621 ನಿಂದ ಮತ್ತೊಂದು ಕರೆ ಬಂತು. ತಕ್ಷಣ.. ದಯಾನಿಧಿ ಮಾರನ್ ಅವರ ಮೊಬೈಲಿಗೆ ತಮ್ಮ ಉಳಿತಾಯ ಖಾತೆಯಿಂದ 99,999 ರೂ. ಡೆಬಿಟ್ ಆಗಿದೆ ಎಂಬ ಮೇಲ್ ಮತ್ತು ಸಂದೇಶ ಬಂದಿದೆ.

ಸೈಬರ್​ ಪೊಲೀಸರು ಸಂಸದ ದಯಾನಿಧಿ ಮಾರನ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ವಂಚಕರು ತಮ್ಮ ಖಾಸಗಿ ಮಾಹಿತಿಯನ್ನು ಹೇಗೆ ಪಡೆದರು ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್​​ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಭದ್ರತಾ ಪ್ರೋಟೋಕಾಲ್‌ಗಳನ್ನು ತುಂಬಾ ಸುಲಭವಾಗಿ ಉಲ್ಲಂಘಿಸಿರುವುದು ನನಗೆ ಆಘಾತ ತಂದಿದೆ ಎಂದೂ ಮಾರನ್ ಹೇಳಿದ್ದಾರೆ. ಸಂಸದ ದಯಾನಿಧಿ ಮಾರನ್ ಅವರು ಕೇಂದ್ರ ಸರ್ಕಾರದಿಂದ ಉತ್ತರದಾಯಿತ್ವ ಮತ್ತು ನ್ಯಾಯವನ್ನು ಕೋರಿದ್ದಾರೆ.

ಈ ಸೈಬರ್ ವಂಚನೆಯ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಸೈಬರ್ ಅಪರಾಧಗಳ ಕಣ್ಗಾವಲು ಹೆಚ್ಚಿದ್ದರೂ ಸೈಬರ್ ವಂಚಕರು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ತಪ್ಪಿಸಲು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಿ. ಯಾವುದೇ ವಂಚನೆ ಕಂಡುಬಂದಲ್ಲಿ ತಕ್ಷಣವೇ ಸೈಬರ್ ಪೊಲೀಸರನ್ನು ಸಂಪರ್ಕಿಸಿ.

ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ