ಡಾನಾ ಚಂಡಮಾರುತ: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್​ನ ಸೂರ್ಯ ದೇವಸ್ಥಾನ ಬಂದ್

|

Updated on: Oct 23, 2024 | 3:33 PM

ಡಾನಾ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಪುರಿ ಜಗನ್ನಾಥ ದೇವಾಲಯ ಹಾಗೂ ಕೊನಾರ್ಕ್​ನ ಸೂರ್ಯ ದೇವಾಲಯವನ್ನು ಮುಚ್ಚಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ. ಮುಂಬರುವ ಚಂಡಮಾರುತದಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಡಾನಾ ಚಂಡಮಾರುತ: ಒಡಿಶಾದ ಜಗನ್ನಾಥ ದೇವಾಲಯ, ಕೋನಾರ್ಕ್​ನ ಸೂರ್ಯ ದೇವಸ್ಥಾನ ಬಂದ್
ಜಗನ್ನಾಥ ದೇವಾಲಯ
Image Credit source: Puri Tour Packages
Follow us on

ಡಾನಾ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಪುರಿ ಜಗನ್ನಾಥ ದೇವಾಲಯ ಹಾಗೂ ಕೋನಾರ್ಕ್​ನ ಸೂರ್ಯ ದೇವಾಲಯವನ್ನು ಮುಚ್ಚಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ. ಮುಂಬರುವ ಚಂಡಮಾರುತದಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ದೇವಸ್ಥಾನಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಅಕ್ಟೋಬರ್ 24 ರ ರಾತ್ರಿಯಿಂದ ಅಕ್ಟೋಬರ್ 25 ರ ಬೆಳಗ್ಗೆ ವರೆಗೆ ಚಂಡಮಾರುತವು ಒಡಿಶಾದ ಭಿತರ್ಕಾನಿಕಾ ಪಾರ್ಕ್ ಮತ್ತು ಧಮ್ರಾ ಬಂದರಿನ ನಡುವೆ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.

ಚಂಡಮಾರುತದ ಭೂಕುಸಿತದ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 100-110 ಕಿಮೀ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಸಂಸ್ಥೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಪರಿಣಾಮವಾಗಿ, ಸ್ಮಾರಕಗಳು, ದೇವಾಲಯಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಮುಚ್ಚುವಂತೆ ಕೇಳಲಾಗಿದೆ.

ಮತ್ತಷ್ಟು ಓದಿ: ಬಂಗಾಳ, ಒಡಿಶಾಗೆ ಅಪ್ಪಳಿಸಲಿದೆ ಡಾನಾ ಚಂಡಮಾರುತ; ಹವಾಮಾನ ಇಲಾಖೆಯಿಂದ ಹೈ ಅಲರ್ಟ್

ಇದಲ್ಲದೆ, ಗಂಜಾಂ, ಪುರಿ, ಜಗತ್‌ಸಿಂಗ್‌ಪುರ, ಕೇಂದ್ರಪಾರಾ, ಭದ್ರಕ್, ಬಾಲಸೋರ್, ಮಯೂರ್‌ಭಂಜ್, ಕಿಯೋಂಜಾರ್, ಧೆಂಕನಲ್, ಜಾಜ್‌ಪುರ್, ಅಂಗುಲ್, ಖೋರ್ಧಾ, ನಯಾಗಢ ಮತ್ತು ಕಟಕ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಒಡಿಶಾ ಸರ್ಕಾರವು ಮಂಗಳವಾರ ಮಯೂರ್‌ಭಂಜ್ ಜಿಲ್ಲೆಯ ಸಿಮಿಲಿಪಾಲ್ ಟೈಗರ್ ರಿಸರ್ವ್ ಮತ್ತು ಕೇಂದ್ರಪಾರ ಜಿಲ್ಲೆಯ ಭಿತರ್ಕಾನಿಕಾ ರಾಷ್ಟ್ರೀಯ ಉದ್ಯಾನವನ್ನು ಮುಚ್ಚುವುದಾಗಿ ತಿಳಿಸಿದೆ. ಡಾನಾ ಚಂಡಮಾರುತದ ಹಿನ್ನೆಲೆಯಲ್ಲಿ ಆಗ್ನೇಯ ರೈಲ್ವೆ ವ್ಯಾಪ್ತಿಯ ಮೂಲಕ ಚಲಿಸುವ 150 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್‌ಪ್ರೆಸ್, ಕಾಮಾಖ್ಯ-ಯಶವಂತಪುರ ಎಸಿ ಎಕ್ಸ್‌ಪ್ರೆಸ್, ಹೌರಾ-ಪುರಿ ಶತಾಬ್ದಿ ಎಕ್ಸ್‌ಪ್ರೆಸ್, ಹೌರಾ-ಭುವನೇಶ್ವರ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಹೌರಾ-ಯಶವಂತಪುರ ಎಕ್ಸ್‌ಪ್ರೆಸ್ ಸೇರಿವೆ ಎಂದು ಪಿಟಿಐ ವರದಿ ಮಾಡಿದೆ.

ಒಡಿಶಾದಲ್ಲಿ ಒಟ್ಟು 20 ಎನ್‌ಡಿಆರ್‌ಎಫ್ ತಂಡಗಳು ಮತ್ತು ಪಶ್ಚಿಮ ಬಂಗಾಳದಲ್ಲಿ 14 ತಂಡಗಳು ಸೈಕ್ಲೋನ್‌ಗೆ ಮುಂಚಿತವಾಗಿ ಸ್ಟ್ಯಾಂಡ್‌ಬೈನಲ್ಲಿವೆ. ಸೇನೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನ ಹೆಚ್ಚುವರಿ ರಕ್ಷಣಾ ಮತ್ತು ಪರಿಹಾರ ತಂಡಗಳು ಹಡಗುಗಳು ಮತ್ತು ವಿಮಾನಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ.

ಒಡಿಶಾ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಮಾತನಾಡಿ, 5,000 ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಮಕ್ಕಳಿಗೆ ನೀರು, ಆಹಾರ ಮತ್ತು ಹಾಲು ಮತ್ತು ಗಾಯಾಳುಗಳಿಗೆ ಔಷಧಿಗಳನ್ನು ಒದಗಿಸಲು ಸ್ಥಾಪಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ