Chhota Rajan: ಗ್ಯಾಂಗ್​ಸ್ಟರ್​ ಛೋಟಾ ರಾಜನ್​ಗೆ ಜಾಮೀನು

ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್​ಸ್ಟರ್ ಛೋಟಾ ರಾಜನ್​ಗೆ ಜಾಮೀನು ಮಂಜೂರು ಮಾಡಲಾಗಿದೆ. 2001ರಲ್ಲಿ ಉದ್ಯಮಿ ಜಯ್​ಶೆಟ್ಟಿ ಕೊಲೆಯಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲವು ಕಳೆದ ಮೇ 30ರಂದು ಛೋಟಾ ರಾಜನ್​ಗೆ ಜೀವಾವಧಿ ಶಿಕ್ಷೆ ಘೋಷಿಸಿತ್ತು.

ಛೋಟಾ ರಾಜನ್Image Credit source: The Hindu
Follow us
ನಯನಾ ರಾಜೀವ್
|

Updated on: Oct 23, 2024 | 12:15 PM

ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್​ಸ್ಟರ್ ಛೋಟಾ ರಾಜನ್​ಗೆ ಜಾಮೀನು ಮಂಜೂರು ಮಾಡಲಾಗಿದೆ. 2001ರಲ್ಲಿ ಉದ್ಯಮಿ ಜಯ್​ಶೆಟ್ಟಿ ಕೊಲೆಯಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲವು ಕಳೆದ ಮೇ 30ರಂದು ಛೋಟಾ ರಾಜನ್​ಗೆ ಜೀವಾವಧಿ ಶಿಕ್ಷೆ ಘೋಷಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್​ಗೆ ಛೋಟಾ ರಾಜನ್ ಮೇಲ್ಮನವಿ ಸಲ್ಲಿಸಿದ್ದ, ಜಾಮೀನು ಮಂಜೂರು ಮಾಡಿ ಅಧೀನ ನ್ಯಾಯಾಲಯದ ಶಿಕ್ಷೆಯನ್ನು ರದ್ದುಪಡಿಸುವಂತೆ ಅರ್ಜಿಯಲ್ಲಿ ಛೋಟಾ ರಾಜನ್ ಕೋರಿದ್ದ. ಸಧ್ಯಕ್ಕೆ ಛೋಟಾ ರಾಜನ್​ಗೆ ಬಾಂಬೆ ಹೈಕೋರ್ಟ್​ನ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ. ಜಾಮೀನಿಗಾಗಿ ಒಂದು ಲಕ್ಷ ರೂ. ಭದ್ರತಾ ಬಾಂಡ್ ನೀಡಲು ಆದೇಶಿಸಲಾಗಿದೆ.

ಆದರೆ ಛೋಟಾ ರಾಜನ್ ಜೈಲಿನಿಂದ ಹೊರ ಬರಲು ಸಾಧ್ಯವಿಲ್ಲ. ಏಕೆಂದರೆ ಉಳಿದ ಪ್ರಕರಣಗಳಲ್ಲೂ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಜಯ್​ಶೆಟ್ಟಿ ಯಾರು? ಕೇಂದ್ರೀಯ ಮುಂಬೈನ ಗಾಂಧೇವಿಯಲ್ಲಿ ಗೋಲ್ಡನ್​ ಕ್ರೌನ್ ಎನ್ನುವ ಹೋಟೆಲ್​ನ್ನು ನಡೆಸುತ್ತಿದ್ದರು. 2001ರ ಮೇ 4 ರಂದು ಛೋಟಾ ರಾಜನ್ ಗ್ಯಾಂಗ್​ನ ಇಬ್ಬರು ಶೂಟರ್​ಗಳು ಜಯ್​ಶೆಟ್ಟಿಯನ್ನು ಕೊಲೆ ಮಾಡಿದ್ದರು ಎನ್ನುವ ಆರೋಪವಿದೆ. ಇದಕ್ಕೂ ಮುನ್ನ ಛೋಟಾ ರಾಜನ್ ಗ್ಯಾಂಗ್​ಗೆ ಸೇರಿದ ಹೇಮಂತ್ ಪೂಜಾರಿ ಎನ್ನುವ ವ್ಯಕ್ತಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಜಯ್​ಶೆಟ್ಟಿ ಹಣವನ್ನು ನೀಡದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎನ್ನುವುದು ಪೊಲೀಸರ ವಾದವಾಗಿದೆ. ಸಧ್ಯಕ್ಕೆ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ಖ್ಯಾತ ಪತ್ರಕರ್ತ ಜೇ ಡೇ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು

ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ