ಭಾರತೀಯ ಹವಾಮಾನ ಇಲಾಖೆ(Indian Meteorological Department) ಮೋಕಾ(Mocha) ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದೆ, ಮೋಕಾ ಚಂಡಮಾರುತ ಇಂದು ಗಂಭೀರ ಸ್ವರೂಪ ಪಡೆಯಲಿದೆ ಎನ್ನಲಾಗಿದೆ. ಅದು ಬಾಂಗ್ಲಾದೇಶ-ಮ್ಯಾನ್ಮಾರ್ ಕರಾವಳಿಯನ್ನು ತಲುಪುತ್ತಿದೆ. ಪೋರ್ಟ್ ಬ್ಲೇರ್‌ನಿಂದ 520 ಕಿಮೀ ದೂರದಲ್ಲಿದ್ದು ಮೇ 12 ರಂದು ಮಧ್ಯಾಹ್ನ 2.30 ಕ್ಕೆ ಎಸ್‌ಸಿಎಸ್ ಮೋಕಾ ಬಂಗಾಳಕೊಲ್ಲಿಯ ಮಧ್ಯಭಾಗವನ್ನು ತಲುಪಿದೆ ಎಂದು ಹವಾಮಾನ ಇಲಾಖೆಯಿಂದ ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ತ್ರಿಪುರಾ ಮತ್ತು ಮಿಜೋರಾಂನಲ್ಲಿ ಶನಿವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ನಾಗಾಲ್ಯಾಂಡ್, ಮಣಿಪುರ, ಅಸ್ಸಾಂನಲ್ಲಿ ಭಾನುವಾರ ಮಳೆಯಾಗಬಹುದು. ರಾಷ್ಟ್ರೀಯ ಪರಿಹಾರ ಮತ್ತು ವಿಪತ್ತಿನ 8 ತಂಡಗಳನ್ನು ಇಲ್ಲಿ ನಿಯೋಜಿಸಲಾಗಿದೆ. 200 ರಕ್ಷಣಾ ಸಿಬ್ಬಂದಿಯನ್ನು ನೆಲದ ಮೇಲೆ ಜಾಗರೂಕರಾಗಿರಲು ಕೇಳಲಾಗಿದೆ. 100 ರಕ್ಷಕರು ಸನ್ನದ್ಧ ಸ್ಥಿತಿಯಲ್ಲಿದ್ದಾರೆ.
ಮತ್ತಷ್ಟು ಓದಿ:Cyclone Mocha: ಕರ್ನಾಟಕದಲ್ಲಿ ಮೋಕಾ ಚಂಡಮಾರುತ ಎಫೆಕ್ಟ್, ಇನ್ನೂ ಮೂರು ದಿನ ಭಾರೀ ಮಳೆ
ಭಾನುವಾರದವರೆಗೆ ಬಂಗಾಳಕೊಲ್ಲಿ, ಉತ್ತರ ಅಂಡಮಾನ್ ಸಮುದ್ರಕ್ಕೆ ತೆರಳದಂತೆ ಮೀನುಗಾರಿಗೆ ಎಚ್ಚರಿಕೆ ನೀಡಲಾಗಿದೆ, ಮಧ್ಯ ಬಂಗಾಳಕೊಲ್ಲಿ ಅಥವಾ ಉತ್ತರ ಅಂಡಮಾನ್ ಸಮುದ್ರದಲ್ಲಿರುವವರು ಕರಾವಳಿಗೆ ಮರಳುವಂತೆ ಸಲಹೆ ನೀಡಲಾಗಿದೆ.
ಜನರಿಗೆ ಬೀಚ್‌ನಿಂದ ದೂರ ಇರುವಂತೆ ಜನರಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದ್ದು, ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕರಾವಳಿ ಪ್ರದೇಶದಲ್ಲಿ ಅಥವಾ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಅಗತ್ಯ ಬಂದರೆ ಸ್ಥಳಾಂತರಸಿಲಾಗುವುದು ಎಂದು ತಿಳಿಸಲಾಗಿದೆ.
ತುಂಬಾ ಗಾಳಿ ಬೀಸುತ್ತಿದ್ದರೆ ಮನೆಯಿಂದ ಹೊರಗೆ ಹೋಗಬೇಡಿ ಎಂದು ಸೂಚನೆ ನೀಡಲಾಗಿದೆ. ಮೋಕಾ ಚಂಡಮಾರುತವು ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಪಶ್ಚಿಮ ಬಂಗಾಳದ ದಿಘಾದಲ್ಲಿ 8 ತಂಡಗಳು ಮತ್ತು 200 ರಕ್ಷಕರನ್ನು ನಿಯೋಜಿಸಿದೆ.