ನಾನು ಬದುಕಿದ್ದೇನೆಂದು ಹೇಳುತ್ತಾ ಪೋಸ್ಟ್​ಮಾರ್ಟಮ್ ವೇಳೆ ಎದ್ದು ಕುಳಿತ ವ್ಯಕ್ತಿ

ಅಸಹಜ ಸಾವು ಎಂದೆನಿಸಿದಾಗ ಮರಣೋತ್ತರ ಪರೀಕ್ಷೆ ಮಾಡಿಸುವುದು ಸಾಮಾನ್ಯ. ಇಲ್ಲವೇ ಆಸ್ಪತ್ರೆಯಲ್ಲೇನಾದರೂ ಸಾವನ್ನಪ್ಪಿದ್ದರೆ ಪೋಸ್ಟ್​ಮಾರ್ಟಮ್​ ಮಾಡುತ್ತಾರೆ. ಆದರೆ ಪೋಸ್ಟ್​ಮಾರ್ಟಮ್​ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್​ ಮೇಲೆ ಹತ್ತಿ ನಿಂತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ.

ನಾನು ಬದುಕಿದ್ದೇನೆಂದು ಹೇಳುತ್ತಾ ಪೋಸ್ಟ್​ಮಾರ್ಟಮ್ ವೇಳೆ ಎದ್ದು ಕುಳಿತ ವ್ಯಕ್ತಿ
ರಾಕೇಶ್​
Image Credit source: DNA

Updated on: Sep 24, 2024 | 2:58 PM

ಅಸಹಜ ಸಾವು ಎಂದೆನಿಸಿದಾಗ ಮರಣೋತ್ತರ ಪರೀಕ್ಷೆ ಮಾಡಿಸುವುದು ಸಾಮಾನ್ಯ. ಇಲ್ಲವೇ ಆಸ್ಪತ್ರೆಯಲ್ಲೇನಾದರೂ ಸಾವನ್ನಪ್ಪಿದ್ದರೆ ಪೋಸ್ಟ್​ಮಾರ್ಟಮ್​ ಮಾಡುತ್ತಾರೆ. ಆದರೆ ಪೋಸ್ಟ್​ಮಾರ್ಟಮ್​ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್​ ಮೇಲೆ ಹತ್ತಿ ನಿಂತಿದ್ದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

ಆಸ್ಪತ್ರೆಗೆ ಬಂದಾಗ ರಾಕೇಶ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬರು ನೆಲದ ಮೇಲೆ ಬಿದ್ದಿರುವುದು ಕಂಡಿತ್ತು, ದೇಹದ ಚಲನೆ ಇರಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿತ್ತು ಎಂದು ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಯಾಸ್ ಪ್ರಸಾದ್ ಹೇಳಿದರು.

ನಾಡಿ ಮಿಡಿತವನ್ನೂ ನೋಡದೆ ವೈದ್ಯರು ಆತ ಸತ್ತಿದ್ದಾನೆಂದು ಘೋಷಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಆ ಸಮಯದಲ್ಲಿ ಆತ ಎಚ್ಚರಗೊಂಡಿದ್ದು, ಬಳಿಕ ವಿಚಾರಣೆಗೆಂದು ಕರೆದೊಯ್ದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾತ್​ ರೂಂ ಕ್ಲೀನ್ ಮಾಡಲು ಹೋದಾಗ ಈ ವ್ಯಕ್ತಿ ಕ್ಲೀನರ್​ಗೆ ಸಿಕ್ಕಿದ್ದರು, ನಾನು ಔಷಧಿ ಖರೀದಿಸಲು ಹೋಗಿದ್ದೆ, ಏನೂ ತಿಂದಿರಲಿಲ್ಲ ಹಾಗಾಗಿ ತಲೆತಿರುಗಿ ಬಿದ್ದಿದ್ದೆ ಎಂದು ರಾಕೇಶ್​ ಹೇಳಿದ್ದಾರೆ.

ಮತ್ತಷ್ಟು ಓದಿ: Viral: ಆಸ್ಪತ್ರೆಗೂ ಕಾಲಿಟ್ಟ ರೀಲ್ಸ್‌ ವೈರಸ್, ಕಫ್ತಾನ್ ತೊಟ್ಟು ರೋಗಿಗಳ ಮುಂದೆ ಸೊಂಟ ಬಳುಕಿಸಿದ ಯುವತಿ

ರಾಕೇಶ್ ಕುಮಾರ್ ಜೆರೋಯಿನ್ ಗ್ರಾಮದ ನಿವಾಸಿ. ಘಟನೆ ನಡೆದ ಬಳಿಕ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಸ್ಟ್ರೆಚರ್​ನಲ್ಲಿ ಕುಳಿತು ನಾನು ಸತ್ತಿಲ್ಲಪ್ಪ ಬದುಕಿದ್ದೇನೆ ಎಂದು ಹೇಳಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us