Viral: ಆಸ್ಪತ್ರೆಗೂ ಕಾಲಿಟ್ಟ ರೀಲ್ಸ್ ವೈರಸ್, ಕಫ್ತಾನ್ ತೊಟ್ಟು ರೋಗಿಗಳ ಮುಂದೆ ಸೊಂಟ ಬಳುಕಿಸಿದ ಯುವತಿ
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಕ್ರೇಜ್ ಬಹಳನೇ ಹೆಚ್ಚಾಗಿದೆ. ಅದರಲ್ಲೂ ಈ ಕೆಲವರು ತಾವು ಹೋದಲ್ಲಿ ಬಂದಲ್ಲಿ ರೀಲ್ಸ್ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಳು ಯುವತಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ರೂ ಕೂಡಾ ಆಸ್ಪತ್ರೆ ವಾರ್ಡ್‌ನಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದೆಲ್ಲಾ ಶೋಕಿ ಬೇಕಾ ಎಂದು ನೆಟ್ಟಿಗರು ಯುವತಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ದಿನದಿಂದ ದಿನಕ್ಕೆ ರೀಲ್ಸ್ ಮಾಡುವವರ ಹುಚ್ಚಾಟ ಹೆಚ್ಚಾಗುತ್ತಲೇ ಇದೆ. ಇಷ್ಟು ದಿನ ಕೆಲವೊಂದಿಷ್ಟು ರೀಲ್ಸ್ ಶೋಕಿಗಳು ಬಸ್, ರೈಲು, ಮೆಟ್ರೋ, ಬಸ್‌ಸ್ಟಾಂಡ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ವಿಡಿಯೋ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಇದೀಗ ಈ ರೀಲ್ಸ್ ವೈರಸ್ ಆಸ್ಪತ್ರೆಗೂ ಕಾಲಿಟ್ಟಿದೆ. ಹೌದು ರೀಲ್ಸ್ ಹುಚ್ಚು ಎಷ್ಟರ ಮಟ್ಟಿಗೆ ಇದೆ ಎಂದರೆ ಇಲ್ಲೊಬ್ಬಳು ಯುವತಿ ತಾನು ಆಸ್ಪತ್ರೆಯಲ್ಲಿ ಆಡ್ಮಿಟ್ ಆಗಿದ್ರೂ ಅಲ್ಲಿ ಕೂಡಾ ರೀಲ್ಸ್ ಮಾಡಿ ಹುಚ್ಚಾಟವನ್ನು ಮೆರೆದಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದೆಲ್ಲಾ ಶೋಕಿ ಬೇಕಾ ಎಂದು ನೆಟ್ಟಿಗರು ಯುವತಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು ದೇಸಿ ಮೊಜಿತೋ (desimojito) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಫ್ತಾನ್ ತೊಟ್ಟ ಯುವತಿಯೊಬ್ಬಳು ಆಸ್ಪತ್ರೆ ವಾರ್ಡ್‌ನಲ್ಲಿ ಇತರೆ ರೋಗಿಗಳ ಮುಂದೆ ರೀಲ್ಸ್ ಮಾಡುವ ದೃಶ್ಯವನ್ನು ಕಾಣಬಹುದು. ತಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ರೂ ಯುವತಿ ಬೆಡ್ ಮೇಲೆ ಮಲಗಿ ರೆಸ್ಟ್ ತೆಗೆದುಕೊಳ್ಳದೆ ಅಲ್ಲಿದ್ದ ಇತರೆ ರೋಗಿಗಳಿಗೂ ತೊಂದರೆ ಕೊಟ್ಟು ನಾಚಿಕೆಯಿಲ್ಲದೆ ಸೊಂಟ ಬಳುಕಿಸುತ್ತಾ ರೀಲ್ಸ್ ಮಾಡಿದ್ದಾಳೆ.
ಇದನ್ನೂ ಓದಿ: ನಡು ಬೀದಿಯಲ್ಲಿ ನಡೆಯಿತು ಕಾಳಿಂಗ ಸರ್ಪಗಳ ಕಾಳಗ, ಕೊನೆಗೆ ಗೆದ್ದಿದ್ದು ಯಾರು?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
The virus is not even sparing the hospitals 😭😭😭 pic.twitter.com/mKwN4Xxv2F
— desi mojito 🇮🇳 (@desimojito) September 21, 2024
ಸೆಪ್ಟೆಂಬರ್ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 13 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೊದ್ಲು ಈ ರೀಲ್ಸ್ ಅನ್ನು ಬ್ಯಾನ್ ಮಾಡ್ಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಲ್ಲರ ರೋಗವನ್ನು ಗುಣಮುಖ ಮಾಡುವ ಆಸ್ಪತ್ರೆಯೇ ಇಂದು ರೀಲ್ಸ್ ವೈರಸ್‌ಗೆ ಬಲಿಯಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಇತರೆ ರೋಗಿಗಳಿಗೆ ಉತ್ತಮ ಮನರಂಜನೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ