Viral: ನಡು ಬೀದಿಯಲ್ಲಿ ನಡೆಯಿತು ಕಾಳಿಂಗ ಸರ್ಪಗಳ ಕಾಳಗ, ಕೊನೆಗೆ ಗೆದ್ದಿದ್ದು ಯಾರು?

ಹಾವು ಮತ್ತು ಮುಂಗುಸಿಗಳು ಪರಸ್ಪರ ಜಗಳವಾಡುವುದನ್ನು ನೋಡಿರುತ್ತೀರಿ ಅಲ್ವಾ. ಇದಕ್ಕೆ ಸಂಬಂದಪಟ್ಟ ಫೋಟೋ ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಆದ್ರೆ ಇಲ್ಲೊಂದು ತದ್ವಿರುದ್ಧವಾದ ಘಟನೆ ನಡೆದಿದ್ದು, ಎರಡು ಹಾವುಗಳೇ ನಡು ಬೀದಿಯಲ್ಲಿ ಬದ್ಧ ವೈರಿಗಳಂತೆ ಕಾದಾಟ ನಡೆಸಿವೆ. ಇದಕ್ಕೆ ಸಂಬಂದಪಟ್ಟ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Viral: ನಡು ಬೀದಿಯಲ್ಲಿ ನಡೆಯಿತು ಕಾಳಿಂಗ ಸರ್ಪಗಳ ಕಾಳಗ, ಕೊನೆಗೆ ಗೆದ್ದಿದ್ದು ಯಾರು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 23, 2024 | 4:34 PM

ಹಾವು ಮುಂಗುಸಿಗಳು ಜಗಳವಾಡುವುದು ಕಾಮನ್.‌ ಹಾವು ಮುಂಗುಸಿಗಳ ಜಗಳದ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಆದ್ರೆ ಹಾವುಗಳು ಪರಸ್ಪರ ಬಡೆದಾಡಿಕೊಳ್ಳುವುದು ಕಾಣ ಸಿಗುವುದೇ ತೀರಾ ಅಪರೂಪ. ಆದ್ರೆ ಇಲ್ಲೊಂದು ಇಂತಹ ಘಟನೆ ನಡೆದಿದ್ದು, ಮಟ ಮಟ ಮಧ್ಯಾಹ್ನದ ವೇಳೆ ಬೀದಿಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪಗಳೆರಡು ಪರಸ್ಪರ ಕಾದಾಡಿವೆ. ಎರಡು ಕಾಳಿಂಗ ಸರ್ಪಗಳ ನಡುವೆ ನಡೆದ ಬಿಗ್‌ ಫೈಟ್‌ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಇದಕ್ಕೆ ಸಂಬಂದಪಟ್ಟ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಈ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಪಾರ್ವತಿಪುರಂ ಮಂಡಲದ ಚಿನ್ನ ವೂಟಗೆದ್ದ ಎಂಬಲ್ಲಿ ನಡೆದಿದ್ದು, ಎರಡು ಕಾಳಿಂಗ ಸರ್ಪಗಳ ನಡುವೆ ನಡೆದ ಬಿಗ್‌ ಫೈಟ್‌ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಗ್ರಾಮದ ಪಕ್ಕದಲ್ಲೇ ಇದ್ದ ಬೆಟ್ಟದ ಬಳಿಯಿಂದ 18 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮಟ ಮಟ ಮಧ್ಯಾಹ್ನ ಆಹಾರವನ್ನರಸುತ್ತಾ ಜನವಸತಿ ಪ್ರದೇಶಕ್ಕೆ ಬಂದಿದೆ. ಅದೇ ಸಮಯದಲ್ಲಿ ಇನ್ನೊಂದು ಸಣ್ಣ ಗಾತ್ರದ ಕಾಳಿಂದ ಸರ್ಪವೊಂದು ಎದುರಾಗಿದ್ದು, ಈ ಎರಡು ಹಾವುಗಳ ನಡುವೆ ಬೀದಿಯಲ್ಲಿಯೇ ಬಿಗ್‌ ಫೈಟ್‌ ನಡೆದಿದೆ. ಹಾವು ಬುಸುಗುಡುವ ಸದ್ದನ್ನು ಕೇಳಿ ಓಡಿ ಬಂದ ಗ್ರಾಮಸ್ಥರು ಹಾವುಗಳ ಕಾದಾಟ ನೋಡಿ ಬೆಚ್ಚಿ ಬಿದ್ದಿದ್ದಾರೆ. ದೈತ್ಯ ಕಾಳಿಂಗ ಸರ್ಪದ ಏಟಿಗೆ ಸಣ್ಣ ಗಾತ್ರದ ಕಾಳಿಂಗ ಸರ್ಪ ಸಾವನ್ನಪ್ಪಿದ್ದು, ಈ ದೈತ್ಯ ಹಾವನ್ನು ಹೀಗೆ ಬಿಟ್ಟರೆ ಅಪಾಯ ಎಂದು ನಂತರ ಗ್ರಾಮಸ್ಥರು ದೈತ್ಯ ಕಾಳಿಂಗ ಸರ್ಪವನ್ನು ಕೂಡಾ ಹೊಡೆದು ಸಾಯಿಸಿದ್ದಾರೆ.

ಕಳೆದ ಗುರುವಾರ ಅಂದರೆ ಸೆಪ್ಟೆಂಬರ್‌ 19 ರಂದು ಈ ಘಟನೆ ನಡೆದಿದ್ದು, ಈ ಕುರಿತ ಫೋಟೋವೊಂದು ವೈರಲ್‌ ಆಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್