Viral: ಕೈಗಳಿದ್ದರೂ ಇಲ್ಲದಂತೆ ನಟಿಸಿ ಭಿಕ್ಷೆ ಬೇಡಿದ ಕಿಲಾಡಿ ಭಿಕ್ಷುಕ; ವಿಡಿಯೋ ವೈರಲ್
ಅಂಗವೈಕಲ್ಯದ ಕಾರಣದಿಂದ ದುಡಿಯಲು ಸಾಧ್ಯವಾಗದೆ ಭಿಕ್ಷೆ ಬೇಡುತ್ತಾ ಜೀವನ ನಡೆಸುವವರನ್ನು ನಾವು ನೋಡಿರುತ್ತೇವೆ ಅಲ್ವಾ. ಆದ್ರೆ ಇಲ್ಲೊಬ್ಬ ಕಿಲಾಡಿ ಭಿಕ್ಷುಕ ಕೈ ಕಾಲು ಸರಿ ಇದ್ರೂ ಕೂಡಾ ಕೈಗಳಿಲ್ಲದಂತೆ ನಟಿಸಿ ಭಿಕ್ಷೆ ಬೇಡಿದ್ದಾನೆ. ಈ ಕಿಲಾಡಿ ಭಿಕ್ಷುಕನ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಪ್ರವಾಸಿ ಸ್ಥಳಗಳಲ್ಲಿ, ದೇವಾಲಯದ ಹೊರ ಭಾಗದಲ್ಲಿ, ಬಸ್‌ಸ್ಟಾಂಡ್ ಇತ್ಯಾದಿ ಜನಜಂಗುಳಿ ಪ್ರದೇಶಗಳಲ್ಲಿ ಭಿಕ್ಷುಕರು ಕೈಯಲ್ಲಿ ಒಂದು ತಟ್ಟೆ ಹಿಡಿದು ನನಗೆ ಕೈಯಿಲ್ಲ, ಒಂದು ಕಾಲಿಲ್ಲ, ಕಣ್ಣು ಕಾಣಿಸೊಲ್ಲ, ಊಟ ಮಾಡೋಕೆ ದುಡ್ಡು ಕೊಡಿ ಅಮ್ಮಾ ಎಂದು ಹೇಳಿ ಭಿಕ್ಷೆ ಬೇಡುತ್ತಿರುತ್ತಾರೆ. ಇನ್ನೂ ಕೆಲವರು ಕೈ ಕಾಲು ಸರಿ ಇದ್ರೂ ಕೂಡಾ ಮೈ ಬಗ್ಗಿಸಿ ದುಡಿಯಲು ಉದಾಸೀನತೆಯನ್ನು ತೋರಿ ಭಿಕ್ಷೆ ಬೇಡುವವರೂ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ಭಿಕ್ಷುಕ ಕೂಡಾ ಎರಡೂ ಕೈಗಳು ಸರಿ ಇದ್ರೂ ಕೂಡಾ ಕೈಗಳಿಲ್ಲದ ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡಿದ್ದಾನೆ. ಕ್ಯಾಮೆರಾ ಕಣ್ಣಲ್ಲಿ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಪ್ರವಾಸಿ ತಾಣವೊಂದರ ಬಳಿ ವ್ಯಕ್ತಿಯೊಬ್ಬ ಕೈಗಳೆರಡು ಇದ್ರೂ ಕೂಡಾ ತಾನೊಬ್ಬ ಅಂಗವಿಕಲನಂತೆ ನಟಿಸಿ ಭಿಕ್ಷೆ ಬೇಡುವುದನ್ನೇ ವೃತ್ತಿ ಮಾಡಿಕೊಂಡಿದ್ದಾನೆ. ತನ್ನ ಎರಡೂ ಕೈಗಳನ್ನು ಹರಕಲು ಶರ್ಟ್ ಒಳಗೆ ಬಚ್ಚಿಟ್ಟು ಕೈಗಳಿಲ್ಲದಿರುವಂತೆ ನಟಿಸಿ ಭಿಕ್ಷೆ ಬೇಡಿದ್ದು, ಹೀಗೆ ತಟ್ಟೆಗೆ ಬಂದ ಹಣವನ್ನು ಮೆಲ್ಲಗೆ ಕೈಯಲ್ಲಿ ತೆಗೆದು ಶರ್ಟ್ ಜೇಬಿಗೆ ತುಂಬಿಸುವ ಸಮಯದಲ್ಲಿ ಈತನ ಈ ಕಳ್ಳಾಟವನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಅಬ್ದುಲ್ ಸಲಾಮ್ (ca_abdul_salam) ಎಂಬವರು ಈ ಕುರಿತ ಫನ್ನಿ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಹರಕಲು ಬಟ್ಟೆಯೊಳಗೆ ಕೈಯನ್ನು ಬಚ್ಚಿಟ್ಟು ಭಿಕ್ಷೆ ಬೇಡುವ ದೃಶ್ಯವನ್ನು ಕಾಣಬಹುದು. ಹೀಗೆ ಭಿಕ್ಷೆ ಬೇಡುತ್ತಾ ಕುಳಿತಿರುವ ಸಂದರ್ಭದಲ್ಲಿ ಯಾರೋ ಈತನ ತಟ್ಟೆಗೆ ಹಣ ಹಾಕಿದ್ದು, ಈ ಹಣವನ್ನು ಮೆಲ್ಲಗೆ ಕೈಯಲ್ಲಿ ತೆಗೆದು ಜೇಬಿಗೆ ಹಾಕಿದ್ದಾನೆ.
ಇದನ್ನೂ ಓದಿ: ಆಸ್ಪತ್ರೆಗೂ ಕಾಲಿಟ್ಟ ರೀಲ್ಸ್ ವೈರಸ್, ಕಫ್ತಾನ್ ತೊಟ್ಟು ರೋಗಿಗಳ ಮುಂದೆ ಸೊಂಟ ಬಳುಕಿಸಿದ ಯುವತಿ
ಸೆಪ್ಟೆಂಬರ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಂಥಾ ಆಕ್ಟಿಂಗ್ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪಾಪ ಹಾಗೆಲ್ಲ ವಿಡಿಯೋ ತೆಗೆದು ಯಾಕೆ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತೀರಾʼ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನೀವು ವಿಡಿಯೋ ಮಾಡಿ ಆತನ ಊಟಕ್ಕೆ ಕಲ್ಲು ಹಾಕುತ್ತಿದ್ದೀರಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ