ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಮೌಂಟ್ ಅಬುದಲ್ಲಿ ಕರಡಿಗಳು ಮೋಜು ಮಸ್ತಿ ಮಾಡುತ್ತಾ, ಕಾಡಿನಿಂದ ರಸ್ತೆಗೆ ಬಂದಿರುವ ವಿಡಿಯೋವನ್ನು ಪ್ರವಾಸಿಗರು ಸೆರೆಹಿಡಿದಿದ್ದಾರೆ. ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಹಾರ್ನ್ ಮಾಡುತ್ತಾ ಕರಡಿಗಳನ್ನು ಓಡಿಸುತ್ತಿದ್ದರೂ ಕರಡಿಗಳು ರಸ್ತೆಯಲ್ಲಿ ನೆಮ್ಮದಿಯಿಂದ ಓಡಾಡಿಕೊಂಡಿದ್ದವು.
ರಾಜಸ್ಥಾನದ ಬಳಿ ಇರುವ ಮೌಂಟ್ ಅಬು ಅರಾವಳಿ ಬೆಟ್ಟಗಳಲ್ಲಿರುವ ಒಂದು ಗಿರಿಧಾಮವಾಗಿದೆ. ಮೌಂಟ್ ಅಬುವಿನಿಂದ ದೆಲ್ವಾರಾಕ್ಕೆ ಹೋಗುವ ರಸ್ತೆಯಲ್ಲಿ ಕರಡಿಗಳು ಎಂಜಾಯ್ ಮಾಡುತ್ತಾ ಕಾಡಿನಿಂದ ಹೊರಗೆ ಬಂದಿವೆ. ರಸ್ತೆಯ ಮಧ್ಯೆ 4 ಕರಡಿಗಳ ಗುಂಪು ಮೋಜು ಮಸ್ತಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ದೃಶ್ಯವನ್ನು ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ