ಸಾಲದ ಹೊರೆಯಿಂದಾಗಿ ಮನೆ ಮಾರಲು ಮುಂದಾಗಿದ್ದ ಕಾಸರಗೋಡಿನ ವ್ಯಕ್ತಿಗೆ ಒಲಿಯಿತು ₹1ಕೋಟಿ ಲಾಟರಿ ಬಹುಮಾನ

| Updated By: ರಶ್ಮಿ ಕಲ್ಲಕಟ್ಟ

Updated on: Jul 27, 2022 | 8:56 PM

ಮನೆ ಮಾರಾಟಕ್ಕೆ ಟೋಕನ್ ಮುಂಗಡ ಹಣ ಸ್ವೀಕರಿಸುವುದಕ್ಕಿಂತ ಮುನ್ನ ಅದೃಷ್ಟ ಬಂದು ಅವರ ಬಾಗಿಲು ತಟ್ಟಿದೆ. ಬಾವಾ ಅವರಿಗೆ ಒಲಿದದ್ದು ₹ 1 ಕೋಟಿ!. ಕೇರಳ ಲಾಟರಿ ಬಹುಮಾನವಾಗಿತ್ತು ಅದು.

ಸಾಲದ ಹೊರೆಯಿಂದಾಗಿ ಮನೆ ಮಾರಲು ಮುಂದಾಗಿದ್ದ ಕಾಸರಗೋಡಿನ ವ್ಯಕ್ತಿಗೆ ಒಲಿಯಿತು ₹1ಕೋಟಿ ಲಾಟರಿ ಬಹುಮಾನ
ಸಾಂದರ್ಭಿಕ ಚಿತ್ರ
Follow us on

ಕಾಸರಗೋಡು: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ಮೊಹಮ್ಮದ್ ಬಾವಾ(50) ಈ ಹೊತ್ತಲ್ಲಿ ಏನಾದರೂ ಪವಾಡ ಸಂಭವಿಸಲಿ ಎಂದು ಪ್ರಾರ್ಥಿಸಿದ್ದರು. ಅವರ ಪ್ರಾರ್ಥನೆಗೆ ಫಲವೂ ಸಿಕ್ಕಿತು. ಸಾಲದ ಹೊರೆಯಿಂದಾಗಿ ಅವರು ಇತ್ತೀಚೆಗೆ ನಿರ್ಮಿಸಿದ ಮನೆಯನ್ನು ಮಾರಾಟಕ್ಕಿಟ್ಟಿದ್ದರು. ಮನೆ ಮಾರಾಟಕ್ಕೆ ಟೋಕನ್ ಮುಂಗಡ ಹಣ ಸ್ವೀಕರಿಸುವುದಕ್ಕಿಂತ ಮುನ್ನ ಅದೃಷ್ಟ ಬಂದು ಅವರ ಬಾಗಿಲು ತಟ್ಟಿದೆ. ಬಾವಾ ಅವರಿಗೆ ಒಲಿದದ್ದು ₹ 1 ಕೋಟಿ!. ಕೇರಳ ಲಾಟರಿ (Kerala Lottery) ಬಹುಮಾನವಾಗಿತ್ತು ಅದು. ಕೇರಳದ ಕಾಸರಗೋಡು (Kasaragod) ಜಿಲ್ಲೆಯ ಮಂಜೇಶ್ವರದವರಾದ ಬಾವಾ ಅವರಿಗೆ ಸಂಬಂಧಿಕರಿಂದ ಪಡೆದ ಸುಮಾರು ₹ 50 ಲಕ್ಷ ಸಾಲ ಮತ್ತು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿಸಲು ಹಣದ ಅವಶ್ಯಕತೆ ಇತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಅವರು ಅಪಾರ ಪ್ರಮಾಣದ ಸಾಲ ಮಾಡಿದ್ದು ಬೇರೆ ದಾರಿಯಿಲ್ಲದೆ ಮನೆ ಮಾರಲು ನಿರ್ಧರಿಸಿದ್ದರು. ಈಗ, ಅವರ ಮನೆ ಸಂತೋಷ ಮತ್ತು ಅದೃಷ್ಟದಿಂದ ತುಂಬಿದೆ. “ನಾನು ಲಾಟರಿ ಗೆದ್ದಿದ್ದೇನೆ, ಆದ್ದರಿಂದ ಈ ಮನೆಯನ್ನು ಮಾರಾಟ ಮಾಡುವ ಅಗತ್ಯವಿಲ್ಲ ಈ ಹಣದಿಂದ ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಶ ಬಾವಾ ಸುದ್ದಿಗಾರರಿಗೆ ತಿಳಿಸಿದರು.

ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಆತಂಕದಲ್ಲಿದ್ದೆ. ಆದರೆ ಸರ್ವಶಕ್ತನು ಅಂತಿಮವಾಗಿ ನನಗೆ ಒಂದು ಮಾರ್ಗವನ್ನು ತೋರಿಸಿದ ಅಂತಾರೆ ಬಾವಾ. ಭಾನುವಾರ ಮಧ್ಯಾಹ್ನ 3.30 ರ ಹೊತ್ತಿಗೆ ಕೇರಳ ಸರ್ಕಾರದ ಫಿಫ್ಟಿ-ಫಿಫ್ಟಿ ಲಾಟರಿ ಲಾಟರಿ ಫಲಿತಾಂಶ ಪ್ರಕಟವಾಯಿತು. ಅದೃಷ್ಟವಶಾತ್ ನನಗೆ ಬಹುಮಾನ ಸಿಕ್ಕಿತು. ಹಿಂದಿನ ದಿನ, ಖರೀದಿದಾರರು ನಮ್ಮ ಮನೆಗೆ ಟೋಕನ್ ಮುಂಗಡವನ್ನು ನೀಡಲು ಸಂಜೆ 5.30 ಕ್ಕೆ ಬರುವುದಾಗಿ ನಮಗೆ ತಿಳಿಸಿದ್ದರು. ಆದರೆ ಅವರು ಬಂದಾಗ, ಈ ಮನೆಯಲ್ಲಿ ಜಾಕ್‌ಪಾಟ್ ಬಗ್ಗೆ ತಿಳಿದ ಜನರು ತುಂಬಿದ್ದರು. ಖರೀದಿದಾರರು ಕೂಡಾ ನಮ್ಮ ಅದೃಷ್ಟದ ಗೆಲುವಿನ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾರೆ ಎಂದ ಬಾವಾ  ಲಾಟರಿ ಟಿಕೆಟ್‌ಗಳನ್ನು ನಿಯಮಿತವಾಗಿ ನಾನು ಖರೀದಿಸುತ್ತಿಲ್ಲ ಎಂದಿದ್ದಾರೆ.

“ನಾನು ಆ ಲಾಟರಿ ಏಜೆಂಟ್ ಅನ್ನು ವೈಯಕ್ತಿಕವಾಗಿ ತಿಳಿದಿದ್ದೇನೆ ಆದ್ದರಿಂದ ಅವರು ನನ್ನ ಮನೆಯ ಮೂಲಕ ಹಾದುಹೋದಾಗ, ಅವರು ನನಗೆ ಕೆಲವು ಟಿಕೆಟ್ ನೀಡುತ್ತಿದ್ದರು. ನಾನು ಏನು ಮಾಡಬೇಕೆಂದು ತಿಳಿಯದೆ ಈ ಟಿಕೆಟ್ ಖರೀದಿಸಿದೆ. ಋಣ ತೀರಿಸಿದ ಬಳಿಕ ಉಳಿದ ಮೊತ್ತವನ್ನು ಬಡವರು ಹಾಗೂ ನಿರ್ಗತಿಕರಿಗೆ ವಿನಿಯೋಗಿಸಲು ಮುಂದಾಗುವುದಾಗಿ ತಿಳಿಸಿದರು. ತೆರಿಗೆ ಕಡಿತದ ನಂತರ  ಬಾವಾ  ಅವರಿಗೆ ₹ 63 ಲಕ್ಷ ಕೈಗೆ ಸಿಗಲಿದೆ.