ನಾಲ್ಕನೇ ತರಗತಿಯಲ್ಲಿದ್ದಾಗ ಹೊಡೆದಿದ್ದಕ್ಕೆ 50 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ವ್ಯಕ್ತಿ

ಚಿಕ್ಕವರಿದ್ದಾಗ ಹೊಡೆದಿದ್ದಕ್ಕೆ, 50 ವರ್ಷಗಳ ಬಳಿಕ ವ್ಯಜ್ತಿಯೊಬ್ಬರು ಸೇಡು ತೀರಿಸಿಕೊಂಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಚಿಕ್ಕವರಿದ್ದಾಗ ಛೇ ಹೇಗೆಲ್ಲಾ ನಡೆದುಕೊಳ್ಳುತ್ತಿದ್ದೆವು ಎಂದು ನಮ್ಮ ಕಾರ್ಯವನ್ನು ನೆನಸಿಕೊಂಡೇ ನಾವೇ ನಗುತ್ತೇವೆ. ಆದರೆ ವ್ಯಕ್ತಿಯೊಬ್ಬರು ತಾವು 4ನೇ ತರಗತಿಯಲ್ಲಿ ಪೆಟ್ಟು ತಿಂದಿದ್ದನ್ನು 50 ವರ್ಷ ಕಳೆದರೂ ಮರೆತಿರಲಿಲ್ಲ. ಶಾಲೆಯ ರೀ ಯೂನಿಯನ್ ಕಾರ್ಯಕ್ರಮದಲ್ಲಿ ಸರಿಯಾಗಿ ಸೇಡು ತೀರಿಸಿಕೊಂಡಿದ್ದಾರೆ.

ನಾಲ್ಕನೇ ತರಗತಿಯಲ್ಲಿದ್ದಾಗ ಹೊಡೆದಿದ್ದಕ್ಕೆ 50 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ವ್ಯಕ್ತಿ
ಕೇರಳದ ವ್ಯಕ್ತಿ
Image Credit source: India Today

Updated on: Jun 11, 2025 | 1:24 PM

ಕಾಸರಗೋಡು, ಜೂನ್ 11: ಚಿಕ್ಕವರಿದ್ದಾಗ ಹೊಡೆದಾಡಿಕೊಳ್ಳುವುದು, ಸಣ್ಣ ಪುಟ್ಟ ವಿಚಾರಕ್ಕೂ ಮುನಿಸಿಕೊಂಡು ಮಾತುಬಿಡುವುದು ಇವೆಲ್ಲವೂ ಸಾಮಾನ್ಯ. ದೊಡ್ಡವರಾಗುತ್ತಾ ನಾವು ಮಾಡಿದ ಕೆಲಸದ ಬಗ್ಗೆಯೇ ನಮಗೆ ನಾಚಿಕೆಯಾಗುತ್ತಾ ಹೋಗುತ್ತದೆ. ಚಿಕ್ಕವರಿದ್ದಾಗ ಛೇ ಹೇಗೆಲ್ಲಾ ನಡೆದುಕೊಳ್ಳುತ್ತಿದ್ದೆವು ಎಂದು ನಮ್ಮ ಕಾರ್ಯವನ್ನು ನೆನಸಿಕೊಂಡೇ ನಾವೇ ನಗುತ್ತೇವೆ. ಆದರೆ ವ್ಯಕ್ತಿಯೊಬ್ಬರು ತಾವು 4ನೇ ತರಗತಿಯಲ್ಲಿ ಪೆಟ್ಟು ತಿಂದಿದ್ದನ್ನು 50 ವರ್ಷ ಕಳೆದರೂ ಮರೆತಿರಲಿಲ್ಲ. ಶಾಲೆಯ ರೀ ಯೂನಿಯನ್ ಕಾರ್ಯಕ್ರಮದಲ್ಲಿ ಸರಿಯಾಗಿ ಸೇಡು ತೀರಿಸಿಕೊಂಡಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 62 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪೊಲೀಸರು ಇದು 50 ವರ್ಷದ ವ್ಯಕ್ತಿಯ ಬಾಲ್ಯದ ದ್ವೇಷದ ಪ್ರಕರಣ ಎಂದು ಹೇಳಿದ್ದಾರೆ .ಬಾಲಕೃಷ್ಣನ್ ಅವರ ಮಾಜಿ ಸಹಪಾಠಿ ವಿಜೆ ಬಾಬು ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಪ್ಲಕ್ಕಲ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್ 2ರಂದು ಹಲ್ಲೆ ನಡೆದಿದೆ.ಬಾಲಕೃಷ್ಣನ್ 4 ನೇ ತರಗತಿಯಲ್ಲಿದ್ದಾಗ ನಡೆದ ಹಲ್ಲೆಗೆ ಪ್ರತೀಕಾರವಾಗಿ ಬಾಬು ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ನಾಲ್ಕನೇ ತರಗತಿಯ ಘಟನೆಯ ಬಗ್ಗೆ ಬಾಬು ಮತ್ತು ಬಾಲಕೃಷ್ಣನ್ ನಡುವೆ ಮಾತಿನ ಚಕಮಕಿ ನಡೆದಿತ್ತು ಮತ್ತು ಆ ಸಮಯದಲ್ಲಿ ವಿಷಯ ಇತ್ಯರ್ಥವಾಗಿದ್ದರೂ, ಬಾಲಕೃಷ್ಣನ್, ಮ್ಯಾಥ್ಯೂ ಜೊತೆಗೆ ಜೂನ್ 2 ರಂದು ಮತ್ತೆ ಗಲಾಟೆ ನಡೆದಿದೆ.

ಮತ್ತಷ್ಟು ಓದಿ: ಅಪ್ರಾಪ್ತ ಹುಡುಗಿಗೆ ಅಶ್ಲೀಲ ಮೆಸೇಜ್ ಆರೋಪ: 60 ಸವರ್ಣೀಯರಿಂದ ಮೂವರು ದಲಿತ ಯುವಕರ ಮೇಲೆ ಹಲ್ಲೆ

ಬಾಲಕೃಷ್ಣನ್ ಬಾಬುವಿನ ಕಾಲರ್ ಹಿಡಿದುಕೊಂಡರು, ಆದರೆ ಮ್ಯಾಥ್ಯೂ ಕಲ್ಲಿನಿಂದ ಮುಖ ಮತ್ತು ಬೆನ್ನಿಗೆ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬು ಪ್ರಸ್ತುತ ಪರಿಯಾರಂನ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ