ಅಪ್ರಾಪ್ತ ಹುಡುಗಿಗೆ ಅಶ್ಲೀಲ ಮೆಸೇಜ್ ಆರೋಪ: 60 ಸವರ್ಣೀಯರಿಂದ ಮೂವರು ದಲಿತ ಯುವಕರ ಮೇಲೆ ಹಲ್ಲೆ
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಅಪ್ರಾಪ್ತ ದಲಿತ ಯುವಕರ ಮೇಲೆ ಭೀಕರವಾಗಿ ಹಲ್ಲೆ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ. ಸವರ್ಣೀಯರಿಂದ ಮೂವರು ಅಪ್ರಾಪ್ತ ಬಾಲಕರನ್ನು ಧ್ವಜದ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ. ಈ ಘಟನೆಯಿಂದ ಅವಮಾನ ತಾಳದೆ ಓರ್ವ ಬಾಲಕ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಾನೆ.

ಗದಗ, ಜೂನ್ 06: ಮೂವರು ಅಪ್ರಾಪ್ತ ದಲಿತ ಯುವಕರನ್ನು (Dalit boys) ಗ್ರಾಮ ಪಂಚಾಯತಿಯ ಧ್ವಜದ ಕಂಬಕ್ಕೆ ಕಟ್ಟಿಹಾಕಿ (Attack) ಸುಮಾರು 60 ಸವರ್ಣೀಯರಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಹುಡುಗಿಗೆ ಅಶ್ಲೀಲ ಮೆಸೇಜ್ ಮತ್ತು ಚುಡಾಯಿಸಿದ್ದಕ್ಕೆ ಕಟ್ಟಿಹಾಕಿ ಹಗ್ಗ, ದೊಣ್ಣೆ, ಚಪ್ಪಲಿಯಿಂದ ಮೈ ತುಂಬಾ ಬಾಸುಂಡೆ ಬರುವಂತೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಪೋಷಕರಿಗೂ ಧಮ್ಕಿ ಆರೋಪ
ಯುವಕರನ್ನು ಕಾಪಾಡಲು ಬಂದ ಪೋಷಕರಿಗೆ ಸವರ್ಣೀಯರು ಧಮ್ಕಿ ಹಾಕಿ ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಮ್ಮೂರಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ ಸೇರಿ ನಾಲ್ವರ ಬಂಧನ
ಪ್ರಕರಣ ದಾಖಲಾಗುವ ಮುನ್ನ ಎರಡು ಕಡೆಯಿಂದ ರಾಜಿ ಮಾಡಿಕೊಂಡಿರು ಬಗ್ಗೆ ಹಿಂಬರಹ ನೀಡಲಾಗಿತ್ತಂತೆ. ಆದರೆ ಹಲ್ಲೆಗೊಳಗಾದ ಬಾಲಕನೊಬ್ಬ ಅವಮಾನ ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲ ಅಂತ ದಲಿತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು ಸವರ್ಣೀಯರಿಂದಲೂ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.
150 ರೂ ಆಸೆಗಾಗಿ 1.50 ಲಕ್ಷ ರೂ ಹಣ ಕಳೆದುಕೊಂಡ ಯುವಕ
ಓರ್ವ ಯುವಕ 150 ರೂ ಆಸೆಗಾಗಿ 1.50 ಲಕ್ಷ ರೂ ಹಣ ಕಳೆದುಕೊಂಡಿರುವಂತಹ ಘಟನೆ ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ. ಚಿತ್ತಾಪುರ ಪಟ್ಟಣದ ನಿವಾಸಿ ಮಂಜುನಾಥ್ ಕಾಶಿ ಹಣ ಕಳೆದುಕೊಂಡ ಯುವಕ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಗೂಂಡಾ ಕಾಯ್ದೆಯಡಿ ಪ್ರಕರಣ, ಗಡೀಪಾರು: ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಹುಬ್ಬಳ್ಳಿ ಪೊಲೀಸರಿಂದ ಖಡಕ್ ಕ್ರಮ
ಯುವಕ ಬ್ಯಾಂಕಿಂದ 1.50 ಲಕ್ಷ ರೂ ಹಣ ಡ್ರಾ ಮಾಡಿ ಬೈಕ್ ಕವರ್ದಲ್ಲಿಟ್ಟು ಹೊರಟ್ಟಿದ್ದರು. ಈ ವೇಳೆ ರಸ್ತೆಯಲ್ಲಿ ನಿಮ್ಮ ಹಣ ಬಿದ್ದಿದೆ ನೋಡಿ ತೆಗೆದುಕೊಳ್ಳಿ ಅಂತ ಕಳ್ಳರು ಹೇಳಿದ್ದಾರೆ. ಹೀಗಾಗಿ ಯುವಕ ಬೈಕ್ನಿಲ್ಲಿಸಿ 150 ರೂ ಎತ್ತಿಕೊಳ್ಳಲು ಹೋಗಿ ಯಾಮಾರಿದ್ದು, ಯುವಕ ವಾಪಾಸ್ ಬರುವಷ್ಟರಲ್ಲಿ ಬೈಕ್ ಕವರ್ ದಲ್ಲಿದ್ದ 1.50 ಲಕ್ಷ ರೂ ಎಗರಿಸಿ ಖದೀಮರು ಪರಾರಿ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:36 am, Fri, 6 June 25