ಕೇಜ್ರಿವಾಲ್ ಕರಾಳ ಯೋಜನೆಗಳಿಗೆ ಸೋಲು, ದೆಹಲಿ ಸೇವಾ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ: ಧರ್ಮೇಂದ್ರ ಪ್ರಧಾನ್

|

Updated on: Aug 08, 2023 | 2:53 PM

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವ ದೆಹಲಿ ಸರ್ಕಾರದ ಕರಾಳ ಯೋಜನೆಗಳನ್ನು ಸದನದಲ್ಲಿ ಸೋಲಿಸಲಾಗಿದೆ. ದೆಹಲಿ ಸೇವಾ ಮಸೂದೆಯನ್ನು ರಾಜ್ಯಸಭೆಯಲ್ಲೂ ಅಂಗೀಕರಿಸಿದ ಕೇಂದ್ರ ಸರ್ಕಾರ.

ಕೇಜ್ರಿವಾಲ್ ಕರಾಳ ಯೋಜನೆಗಳಿಗೆ ಸೋಲು, ದೆಹಲಿ ಸೇವಾ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರ: ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Follow us on

ದೆಹಲಿ, ಆ.8: ಲೋಕಸಭೆಯಲ್ಲಿ ಅಂಗೀಕರವಾದ ದೆಹಲಿ ಸೇವಾ ಮಸೂದೆಯನ್ನು (Delhi Service Bill) ರಾಜ್ಯಸಭೆಯಲ್ಲೂ ಅಂಗೀಕರಿಸಿದ ಬಳಿಕ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ರಾಷ್ಟ್ರ ರಾಜಧಾನಿಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವ ದೆಹಲಿ ಸರ್ಕಾರದ ಕರಾಳ ಯೋಜನೆಗಳನ್ನು ಸದನದಲ್ಲಿ ಸೋಲಿಸಲಾಗಿದೆ ಎಂದು ಟ್ವೀಟ್​​ ಮೂಲಕ ತಿಳಿಸಿದ್ದಾರೆ.

ದೆಹಲಿ ಸೇವಾ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದ ಬಳಿಕ ರಾಜ್ಯಸಭೆಯಿಂದಲೂ ಅಂಗೀಕರಿಸಲಾಯಿತು. ಈ ಮಸೂದೆಯು ದೆಹಲಿಯ ಪ್ರಗತಿಯನ್ನು ಮತ್ತು ರಾಷ್ಟ್ರ ರಾಜಧಾನಿ ಜನರ ಶಕ್ತಿಯನ್ನು ಹೆಚ್ಚಿಸಿದೆ. ಹಗರಣಗಳಲ್ಲಿ ಮುಳುಗಿದ ದೆಹಲಿ ಸರ್ಕಾರ ಜನರ ಹಕ್ಕುಗಳನ್ನು ಕಿತ್ತುಕೊಂಡಿತ್ತು. ಲೂಟಿ ಮಾಡಿ ಕೋಟಿಗಟ್ಟಲೆ ಬೆಲೆಬಾಳುವ ಭವನವನ್ನು ಕಟ್ಟಿಕೊಂಡ ಕೇಜ್ರಿವಾಲ್ ಸರ್ಕಾರದ ಕರಾಳ ಯೋಜನೆಗಳಿಗೆ ಸದನದಲ್ಲಿ ಸೋಲಾಗಿದೆ. ದೆಹಲಿಯ ಜನತೆಗೆ ಅಭಿನಂದನೆಗಳು ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ದೇಶದ ಇತಿಹಾಸದಲ್ಲಿ ಕರಾಳ ದಿನ; ದೆಹಲಿ ಸೇವಾ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆಗೆ ಕೇಜ್ರಿವಾಲ್ ಆಕ್ರೋಶ

ಧರ್ಮೇಂದ್ರ ಪ್ರಧಾನ್ ಅವರ ಮತ್ತೊಂದು ಟ್ವೀಟ್‌ನಲ್ಲಿ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಮಿತ್​​ ಶಾ ಅವರ ಈ ಭಾಷಣದಲ್ಲಿ ದೆಹಲಿ ಸೇವಾ ಮಸೂದೆ ಬಗ್ಗೆ ಮಾತ್ರವಲ್ಲದೆ ಮಣಿಪುರ ವಿಷಯದಲ್ಲಿ ಪ್ರತಿಪಕ್ಷಗಳ ಸುಳ್ಳು ಮತ್ತು ವಂಚನೆಯನ್ನು ಬಹಿರಂಗಪಡಿಸಲಾಗಿದೆ ಎಂದು ಹೇಳಿದ್ದಾರೆ.

ದೆಹಲಿ ಸೇವಾ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ

ಲೋಕಸಭೆಯು ಬಹುಚರ್ಚಿತ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ 2023ನ್ನು ಅಂಗೀಕರಿಸಿದ ಒಂದು ವಾರದ ನಂತರ, ರಾಜ್ಯಸಭೆಯು ಶಾಸನಕ್ಕೆ ದಾರಿ ಮಾಡಿಕೊಟ್ಟಿತು. 131 ಮತಗಳು ಮಸೂದೆಗೆ ಒಪ್ಪಿಗೆ ನೀಡಿದರೆ, 102 ಸಂಸದರು ಶಾಸನದ ವಿರುದ್ಧ ಮತ ಚಲಾಯಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 10:02 am, Tue, 8 August 23