ರಾಮಮಂದಿರ ನಿರ್ಮಾಣ ಸಮಿತಿ ರಚನೆ ವಿಳಂಬ, ಮಸೀದಿಗೆ ಇನ್ನೂ ಹಂಚಿಕೆ ಆಗದ ಭೂಮಿ

|

Updated on: Jan 01, 2020 | 12:42 PM

ದೆಹಲಿ: ಸುಪ್ರೀಂಕೋರ್ಟ್ ಆದೇಶದಂತೆ ಮಸೀದಿ ನಿರ್ಮಾಣ ಮಾಡಲು ಸುನ್ನಿ ವಕ್ಫ್ ಬೋರ್ಡ್​ಗೆ ಜಾಗ ನೀಡಲು ಉತ್ತರಪ್ರದೇಶ ಸರಕಾರ ಮುಂದಾಗಿದೆ. ಸೂಕ್ತ ಐದು ಸ್ಥಳಗಳನ್ನು ಯೋಗಿ ಸರಕಾರ ಗುರುತಿಸಿದ್ದು , ಯಾವ ಜಾಗ ಬೇಕು ಆಯ್ಕೆ ಮಾಡಿಕೊಳ್ಳುಬಂತೆ ಸುನ್ನಿ ವಕ್ಪ್ ಬೋರ್ಡ್​ಗೆ ಸೂಚಿಸಿದೆ. ಅಯೋಧ್ಯೆ ರಾಮಜನ್ಮಭೂಮಿ. ಹಲವು ದಶಕಗಳಿಂದ ದೇಶದ ಕಾನೂನಿನ ಇತಿಹಾಸದಲ್ಲಿ ದೊಡ್ಡ ಕಗ್ಗಂಟಾಗಿ ಉಳಿದಿದ್ದ ವಿವಾದ. ರಾಜಕೀಯ ನಾಯಕರಿಗೆ ಚುನಾವಣೆಗಳಲ್ಲಿ ಸರಕಾಗಿದ್ದ ವಿಚಾರ. ಆದ್ರೆ, ವಿವಾದಿತ ಪ್ರದೇಶದಲ್ಲೇ ರಾಮಮಂದಿರ ನಿರ್ಮಾಣ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್ […]

ರಾಮಮಂದಿರ ನಿರ್ಮಾಣ ಸಮಿತಿ ರಚನೆ ವಿಳಂಬ, ಮಸೀದಿಗೆ ಇನ್ನೂ ಹಂಚಿಕೆ ಆಗದ ಭೂಮಿ
Follow us on

ದೆಹಲಿ: ಸುಪ್ರೀಂಕೋರ್ಟ್ ಆದೇಶದಂತೆ ಮಸೀದಿ ನಿರ್ಮಾಣ ಮಾಡಲು ಸುನ್ನಿ ವಕ್ಫ್ ಬೋರ್ಡ್​ಗೆ ಜಾಗ ನೀಡಲು ಉತ್ತರಪ್ರದೇಶ ಸರಕಾರ ಮುಂದಾಗಿದೆ. ಸೂಕ್ತ ಐದು ಸ್ಥಳಗಳನ್ನು ಯೋಗಿ ಸರಕಾರ ಗುರುತಿಸಿದ್ದು , ಯಾವ ಜಾಗ ಬೇಕು ಆಯ್ಕೆ ಮಾಡಿಕೊಳ್ಳುಬಂತೆ ಸುನ್ನಿ ವಕ್ಪ್ ಬೋರ್ಡ್​ಗೆ ಸೂಚಿಸಿದೆ.

ಅಯೋಧ್ಯೆ ರಾಮಜನ್ಮಭೂಮಿ. ಹಲವು ದಶಕಗಳಿಂದ ದೇಶದ ಕಾನೂನಿನ ಇತಿಹಾಸದಲ್ಲಿ ದೊಡ್ಡ ಕಗ್ಗಂಟಾಗಿ ಉಳಿದಿದ್ದ ವಿವಾದ. ರಾಜಕೀಯ ನಾಯಕರಿಗೆ ಚುನಾವಣೆಗಳಲ್ಲಿ ಸರಕಾಗಿದ್ದ ವಿಚಾರ. ಆದ್ರೆ, ವಿವಾದಿತ ಪ್ರದೇಶದಲ್ಲೇ ರಾಮಮಂದಿರ ನಿರ್ಮಾಣ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್ ಆದೇಶ ನೀಡಿ ಎರಡು ತಿಂಗಳು ಕಳೆಯುತ್ತಾ ಬರ್ತಿದೆ. ಆದ್ರೂ ಅಗತ್ಯ ಕೆಲಸಗಳೇ ಆಗ್ತಿಲ್ಲ. ರಾಮಮಂದಿರ ನಿರ್ಮಾಣ ಸಮಿತಿ ರಚನೆ ಮಾಡೋಕೆ ಕೇಂದ್ರ ಸರ್ಕಾರಕ್ಕೆ ಇದ್ದಂತಿಲ್ಲ.

ರಾಮಮಂದಿರ ನಿರ್ಮಾಣ ಸಮಿತಿ ರಚನೆ ವಿಳಂಬ!
ಅಯೋಧ್ಯೆಯ ಸಮೀಪವೇ ಮುಸ್ಲಿಂ‌ಂ ಸಮುದಾಯಕ್ಕೆ ಮಸೀದಿ ನಿರ್ಮಿಸಲು ಐದು ಎಕರೆ ಜಮೀನು ನೀಡಬೇಕು ಅಂತಾ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಆದೇಶ ನೀಡಿತ್ತು. ಹೀಗಾಗಿ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಸೂಕ್ತ ಐದು ಸ್ಥಳಗಳನ್ನ ಉತ್ತರಪ್ರದೇಶ ಸರ್ಕಾರ ಗುರುತಿಸಿದೆ.

ಸುನ್ನಿ ವಕ್ಫ್ ಬೋರ್ಡ್​ಗೆ ನೀಡಲು ಉತ್ತರಪ್ರದೇಶ ಸರ್ಕಾರ ಸದ್ಯ ಮಿರ್ಜಾಪುರ್, ಶಂಶುದ್ದೀನ್ ಪುರ್ ಮತ್ತು ಚಾಂದ್ ಪುರ್ ನಲ್ಲಿ ಐದು ಸೂಕ್ತ ನಿವೇಶನಗಳನ್ನ ಗುರುತಿಸಿದೆ. ಈ ಐದು ಪ್ರದೇಶಗಳು ಪವಿತ್ರ ಸ್ಥಳ ಪಂಚ್ ಕೋಶಿ ಪರಿಕ್ರಮದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.

ಉತ್ತರಪ್ರದೇಶ ಸರ್ಕಾರ ಗುರುತಿಸಿರುವ ಐದು ಪ್ರದೇಶಗಳು ಪ್ರತಿಯೊಂದು ಜಮೀನು ಕೂಡ ಐದು ಎಕರೆ ಹೊಂದಿವೆ. ಯಾವ ಸ್ಥಳ ಮಸೀದಿ ನಿರ್ಮಿಸಲು ಸೂಕ್ತ ಎಂಬುದನ್ನು ಸುನ್ನಿ ವಕ್ಫ್ ಬೋರ್ಡ್ ಟ್ರಸ್ಟಿಗಳು ತಿಳಿಸಬೇಕು ಅಂತಾ ಉತ್ತರಪ್ರದೇಶ ಕೋರಿದೆ. ಸುನ್ನಿ ಬೋರ್ಡ್ ಸೂಚಿಸುವ ಸ್ಥಳವನ್ನ ಉತ್ತರಪ್ರದೇಶ ನೀಡಲಿದೆ.

ಮಂದಿರ ನಿರ್ಮಾಣಕ್ಕೆ ಸಮಿತಿ ರಚನೆ ಮಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದ್ದು. ಸದ್ಯದಲ್ಲೇ ಮಂದಿರ ನಿರ್ಮಾಣಕ್ಕೆ ಸಮಿತಿ ರಚಿಸಬೇಕಿದೆ. ಗೃಹ ಸಚಿವ ಅಮಿತ್ ಶಾ ಹೇಳಿರುವಂತೆ ಆಕಾಶದೆತ್ತರದ ಭವ್ಯ ಮಂದಿರ ನಿರ್ಮಾಣಕ್ಕೆ ಇನ್ನೂ ನಾಲ್ಕು ತಿಂಗಳಲ್ಲಿ ಅಡಿಗಲ್ಲು ಹಾಕಲಾಗುವುದು ಅಂತಾ ಹೇಳಿದ್ದಾರೆ.