ಸಂಸದ ಶಶಿ ತರೂರ್​ ವಿರುದ್ಧ ಐದು ರಾಜ್ಯಗಳಲ್ಲಿ ಎಫ್​ಐಆರ್​; ಕಾಂಗ್ರೆಸ್​ನಿಂದ ಆಕ್ಷೇಪ

|

Updated on: Jan 31, 2021 | 1:09 PM

ಶಶಿ ತರೂರ್​ ಹಾಗೂ ಉಳಿದ ಆರು ಪತ್ರಕರ್ತರ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ ಪೊಲೀಸರ ಕ್ರಮವನ್ನು ಕಾಂಗ್ರೆಸ್​ ಖಂಡಿಸಿದೆ. ಆಡಳಿತ ಪಕ್ಷವಾದ ಬಿಜೆಪಿ ಪ್ರಜಾಪ್ರಭುತ್ವದ ಘನತೆಯನ್ನು ಪೂರ್ತಿ ನಾಶ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಸಂಸದ ಶಶಿ ತರೂರ್​ ವಿರುದ್ಧ ಐದು ರಾಜ್ಯಗಳಲ್ಲಿ ಎಫ್​ಐಆರ್​; ಕಾಂಗ್ರೆಸ್​ನಿಂದ ಆಕ್ಷೇಪ
ಶಶಿ ತರೂರ್​
Follow us on

ದೆಹಲಿ: ರೈತರ ಟ್ರ್ಯಾಕ್ಟರ್​ ಡೇ ಪರೇಡ್​ನಂದು ನಡೆದ ಹಿಂಸಾಚಾರದ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್​ ಸಂಸದ ಶಶಿ ತರೂರ್​ ಹಾಗೂ ಆರು ಮಂದಿ ಪತ್ರಕರ್ತರ ವಿರುದ್ಧ ಒಟ್ಟು 5 ರಾಜ್ಯಗಳಲ್ಲಿ ಎಫ್​ಐಆರ್​ ದಾಖಲಾಗಿದೆ.

ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ಎಫ್ಐಆರ್​ ದಾಖಲಾಗಿತ್ತು. ಶನಿವಾರ ದೆಹಲಿಯ ಐಪಿ ಎಸ್ಟೇಟ್​ ಠಾಣೆ ಪೊಲೀಸರೂ ಸಹ ಶಶಿ ತರೂರ್​, ಹಿರಿಯ ಪತ್ರಕರ್ತ ರಾಜದೀಪ್​ ಸರ್​ದೇಸಾಯಿ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜನವರಿ 26ರಂದು ನಡೆದ ಹಿಂಸಾಚಾರದಂದು ಟ್ರ್ಯಾಕ್ಟರ್​ ಉರುಳಿ ರೈತನೊಬ್ಬ ಮೃತಪಟ್ಟ ಬೆನ್ನಲ್ಲೇ, ಇವರೆಲ್ಲ ತಮ್ಮ ಟ್ವೀಟ್​ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದರು.

ಇನ್ನು ಇದೇ ವಿಚಾರಕ್ಕೆ ಇವರೆಲ್ಲರ ವಿರುದ್ಧ ಉತ್ತರ ಪ್ರದೇಶ, ಬೆಂಗಳೂರು, ಮಧ್ಯಪ್ರದೇಶ ಮತ್ತು ಹರ್ಯಾಣದ ಗುರುಗ್ರಾಮದ ಠಾಣೆಗಳಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್​ನಿಂದ ಆಕ್ಷೇಪ
ಶಶಿ ತರೂರ್​ ಹಾಗೂ ಉಳಿದ ಆರು ಪತ್ರಕರ್ತರ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ ಪೊಲೀಸರ ಕ್ರಮವನ್ನು ಕಾಂಗ್ರೆಸ್​ ಖಂಡಿಸಿದೆ. ಆಡಳಿತ ಪಕ್ಷವಾದ ಬಿಜೆಪಿ ಪ್ರಜಾಪ್ರಭುತ್ವದ ಘನತೆಯನ್ನು ಪೂರ್ತಿ ನಾಶ ಮಾಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಬಗ್ಗೆ ವಿವಾದಾತ್ಮಕ ತೀರ್ಪು ನೀಡಿದ್ದ ಜಡ್ಜ್ ಬಡ್ತಿಗೆ ಬ್ರೇಕ್​​.. ಕೊಲಿಜಿಯಂ ನೀಡಿದ ಕಾರಣವೇನು ಗೊತ್ತಾ?

ಜುಲೈ 16 ಅನ್ನು ನ್ಯಾಷನಲ್ ಹಾಲಿಡೇ ಆಗಿ ಘೋಷಿಸಿ -ಪ್ರಧಾನಿ ಮೋದಿಗೆ ಯಶ್ ಅಭಿಮಾನಿಗಳ​ ಮನವಿ

Published On - 1:04 pm, Sun, 31 January 21