Delhi: ಸೊಳ್ಳೆ ಕಾಯಿಲ್‌ನಿಂದ ಉಸಿರುಗಟ್ಟಿ 6 ಮಂದಿ ಸಾವು

|

Updated on: Mar 31, 2023 | 11:36 AM

ಸೊಳ್ಳೆ ನಿವಾರಕ ಬತ್ತಿಯನ್ನು ಹಚ್ಚಿದ ಕಾರಣ ರಾತ್ರಿಯಿಡೀ ಬಿಡುಗಡೆಯಾದ ವಿಷಕಾರಿಕ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬ 6 ಜನ ಸಾವನ್ನಪ್ಪಿದ್ದಾರೆ.

Delhi: ಸೊಳ್ಳೆ ಕಾಯಿಲ್‌ನಿಂದ ಉಸಿರುಗಟ್ಟಿ 6 ಮಂದಿ ಸಾವು
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಸೊಳ್ಳೆ ನಿವಾರಕ ಬತ್ತಿಯನ್ನು ಹಚ್ಚಿದ ಕಾರಣ ರಾತ್ರಿಯಿಡೀ ಬಿಡುಗಡೆಯಾದ ವಿಷಕಾರಿಕ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬ 6 ಜನ ಸಾವನ್ನಪ್ಪಿರುವ ಘಟನೆ ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುಟುಂಬವು ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ವಾಸಿಸುತ್ತಿತ್ತು. ರಾತ್ರಿ ಮಲಗಿದ್ದಾಗ ಸೊಳ್ಳೆ ನಿವಾರಕ ಬತ್ತಿಯನ್ನು ಹಚ್ಚಿದ ಪರಿಣಾಮವಾಗಿ ಉತ್ಪತ್ತಿಯಾದ ಕಾರ್ಬನ್ ಮಾನಾಕ್ಸೈಡ್​ನಿಂದ ಉಸಿರಾಟ ಮಾಡಲು ಕಷ್ಟವಾದ ಕಾರಣ ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಎಎನ್‌ಐಗೆ ತಿಳಿಸಿದ್ದಾರೆ.

Published On - 11:34 am, Fri, 31 March 23