ಅಬ್ಬಬ್ಬಾ ! 8,428 ಪ್ಲೇಟ್‌ ಇಡ್ಲಿ ಆರ್ಡರ್ ಮಾಡಿದ ವ್ಯಕ್ತಿ, ಇದಕ್ಕಾಗಿ ಆತ ಪಾವತಿಸಿದ ಹಣ ಎಷ್ಟು ಗೊತ್ತಾ?

ಮಾರ್ಚ್​ 30 ರಂದು ವಿಶ್ವ ಇಡ್ಲಿ ದಿನ(World Idli Day) ದ ಅಂಗವಾಗಿ ಆನ್‌ಲೈನ್ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಒಂದು ವರ್ಷದಲ್ಲಿ ಆರ್ಡರ್​​​ ಮಾಡಲಾಗಿರುವ ಇಡ್ಲಿಯ ವಿವರದ ವರದಿಯನ್ನು  ಬಿಡುಗಡೆ ಮಾಡಿದೆ. ಸ್ವಿಗ್ಗಿ ಸಮೀಕ್ಷೆಯ ಪ್ರಕಾರ ವ್ಯಕ್ತಿಯೊಬ್ಬರು ಒಂದು ವರ್ಷದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಗಳನ್ನು ಆರ್ಡರ್ ಮಾಡಿರುವುದು ಗಮನಕ್ಕೆ ಬಂದಿದೆ.

ಅಬ್ಬಬ್ಬಾ ! 8,428 ಪ್ಲೇಟ್‌ ಇಡ್ಲಿ ಆರ್ಡರ್ ಮಾಡಿದ ವ್ಯಕ್ತಿ, ಇದಕ್ಕಾಗಿ ಆತ ಪಾವತಿಸಿದ ಹಣ ಎಷ್ಟು ಗೊತ್ತಾ?
1 ವರ್ಷದಲ್ಲಿ 8,428 ಪ್ಲೇಟ್‌ ಇಡ್ಲಿ ಆರ್ಡರ್ ಮಾಡಿದ ವ್ಯಕ್ತಿImage Credit source: Newslaundry
Follow us
ಅಕ್ಷತಾ ವರ್ಕಾಡಿ
| Updated By: Digi Tech Desk

Updated on:Mar 31, 2023 | 11:29 AM

ಹೈದರಾಬಾದ್: ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಇಡ್ಲಿ ಅಚ್ಚು ಮೆಚ್ಚಿನ ಉಪಹಾರ. ಆದರೆ ಅತಿಯಾದರೇ ಅಮೃತವೂ ವಿಷ ಎನ್ನುವ ಮಾತಿಗೆ. ಹೌದು ವಾರದಲ್ಲಿ ಒಂದು ಅಥವಾ ಎರಡು ದಿನ ಇಡ್ಲಿ ತಿನ್ನಬಹುದು. ಆದ್ರೆ ಇಲ್ಲೊಬ್ಬ ವರ್ಷದ 365 ದಿನದಲ್ಲಿ ಸುಮಾರೂ 8,428 ಪ್ಲೇಟ್‌ ಇಡ್ಲಿ ಆರ್ಡರ್ ಮಾಡಿರುವುದು ತಿಳಿದು ಬಂದಿದೆ. ಮಾರ್ಚ್​ 30 ರಂದು ವಿಶ್ವ ಇಡ್ಲಿ ದಿನ(World Idli Day) ದ ಅಂಗವಾಗಿ ಆನ್‌ಲೈನ್ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಒಂದು ವರ್ಷದಲ್ಲಿ ಆರ್ಡರ್​​​ ಮಾಡಲಾಗಿರುವ ಇಡ್ಲಿಯ ವಿವರದ ವರದಿಯನ್ನು  ಬಿಡುಗಡೆ ಮಾಡಿದೆ. ಸ್ವಿಗ್ಗಿ ಸಮೀಕ್ಷೆಯ ಪ್ರಕಾರ ವ್ಯಕ್ತಿಯೊಬ್ಬರು ಒಂದು ವರ್ಷದೊಳಗೆ ಎಂಟು ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಗಳನ್ನು ಆರ್ಡರ್ ಮಾಡಿರುವುದು ಗಮನಕ್ಕೆ ಬಂದಿದೆ. ಹೌದು ಹೈದರಾಬಾದ್ ನ ಈ ವ್ಯಕ್ತಿ ಒಂದು ವರ್ಷದಲ್ಲಿ ತನ್ನ ಗೆಳೆಯರು ಮತ್ತು ಕುಟುಂಬ ಸದಸ್ಯರಿಗಾಗಿ ಒಂದು ವರ್ಷದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದು, ಇದಕ್ಕಾಗಿ ಅವರು ಆರು ಲಕ್ಷ ರೂಪಾಯಿ ಪಾವತಿಸಿರುವುದಾಗಿ ಸ್ವಿಗ್ಗಿ ವಿವರಿಸಿದೆ. ಜೊತೆಗೆ ವರದಿಯ ಪ್ರಕಾರ ಇಡ್ಲಿಯನ್ನು ಹೆಚ್ಚಾಗಿ ಆರ್ಡರ್ ಮಾಡುವ ವಿಶ್ವದ ಮೂರು ಪ್ರಮುಖ ನಗರಗಳೆಂದರೆ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಎಂದು ತಿಳಿದುಬಂದಿದೆ.

2022ರ ವರ್ಷದ ಅಂತ್ಯದ ವೇಳೆಗೆ ಸ್ವಿಗ್ಗಿ ಬಿಡುಗಡೆಗೊಳಿಸಿದ ವರದಿಯ ಪ್ರಕಾರ ಈ ವರ್ಷ ಅತೀ ಹೆಚ್ಚು ಗ್ರಾಹಕರು ಆರ್ಡರ್​ ಮಾಡಿರುವ ಫುಡ್​​ಗಳ ವಿವರದಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿತ್ತು, ಆದರೆ ಬಿರಿಯಾನಿಯೂ ಮೊದಲ ಸ್ಥಾನದಲ್ಲಿ ಇರುವುದು ಆಶ್ಚರ್ಯದ ಮಾತೇನಲ್ಲಾ, ಯಾಕೆಂದರೆ ಬಿರಿಯಾನಿ ಹೆಚ್ಚಾಗಿ ಜನರು ಆಯ್ಕೆ ಮಾಡುವ ಜನಪ್ರಿಯ ಆಹಾರವಾಗಿದೆ.

ಇದನ್ನೂ ಓದಿ: ಹೆಣ್ಮಕ್ಕಳನ್ನು ಚುಡಾಯಿಸುವ ಹುಡುಗರಿಗೆ ಮುಟ್ಟಿನೋಡಿಕೊಳ್ಳುವಂತೆ ಪಾಠ ಮಾಡಿದ ಶಿಕ್ಷಕಿ

ಆದರೆ ಇದೀಗಾ ವ್ಯಕ್ತಿಯೊಬ್ಬ ಒಂದು ವರ್ಷದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದು ಭಾರೀ ವೈರಲ್​​​ ಆಗಿದೆ. ಕೇವಲ ಇಡ್ಲಿಗಾಗಿಯೇ ಈತ ಒಂದು ವರ್ಷದಲ್ಲಿ 6 ಲಕ್ಷದಷ್ಟು ಹಣವನ್ನು ಖರ್ಚು ಮಾಡಿದ್ದು, ಸ್ವಿಗ್ಗಿ ಬಿಡುಗಡೆ ಮಾಡಿದ ಸಮೀಕ್ಷೆಯ ಕೆಲ ಹೊತ್ತಿಗೆ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಕುತೂಹಲಕಾರಿ ಸಂಗತಿ ಎಂದರೆ ಮಸಾಲಾ ದೋಸೆಯ ನಂತರ ಇಡ್ಲಿ ಸ್ವಿಗ್ಗಿಯಲ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಹಾರವಾಗಿದೆ ಎಂದು ವರದಿ ಹೇಳಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:46 am, Fri, 31 March 23

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ