Robert Downey Jr: ರಾಬರ್ಟ್ ಡೌನಿ ಜೂನಿಯರ್ ತಿಂದ ಚೂಯಿಂಗ್ ಗಮ್ ಹರಾಜಿಗಿಡಲಾಗಿದೆ, $40,000 ನಿಂದ ಹರಾಜು ಪ್ರಾರಂಭ!
ಜಾನ್ ಫಾವ್ರೊ ಅವರ ಹಾಲಿವುಡ್ ವಾಕ್ ಆಫ್ ಫೇಮ್ ಸಮಾರಂಭದಲ್ಲಿ ಮಾರ್ವೆಲ್ ಸ್ಟಾರ್ ರಾಬರ್ಟ್ ಡೌನಿ ಜೂನಿಯರ್ ತಿಂದೆಸೆದ ಚೂಯಿಂಗ್ ಗಮ್ ತನ್ನ ಬಳಿ ಇದೆ ಎಂದು ಇಬೇ ಬಳಕೆದಾರನೊಬ್ಬ ಹೇಳಿಕೊಂಡಿದ್ದಾನೆ. ಈಗ ಇದೆ ಚೂಯಿಂಗ್ ಗಮ್ ಅನ್ನು ಹರಾಜಿಗೆ ಇರಿಸಿದ್ದಾನೆ.
ಹಾಲಿವುಡ್ನ ನಟ (Hollywood Actor) ರಾಬರ್ಟ್ ಡೌನಿ ಜೂನಿಯರ್ (Robert Downey Jr) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ, ಮಾರ್ವೆಲ್ (Marvel) ಚಲನಚಿತ್ರಗಳಲ್ಲಿ ಟೋನಿ ಸ್ಟಾರ್ಕ್ (Tony Stark) ಅಥವಾ ಐರನ್ ಮ್ಯಾನ್ (Iron Man) ಪಾತ್ರದಿಂದ ಇವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಈಗ, ಸೆಲೆಬ್ರಿಟಿಗಳ ಅಭಿಮಾನವನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ, ವ್ಯಕ್ತಿಯೊಬ್ಬರು ಡೌನಿ ಜೂನಿಯರ್ ಅಗೆದು ಉಗುಳಿದ್ದರೆ ಎಂಬ ಚೂಯಿಂಗ್ ಗಮ್ ಅನ್ನು ಹರಾಜಿಗಿಟ್ಟಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಜಾನ್ ಫಾವ್ರೂ ಅವರ ಹಾಲಿವುಡ್ ವಾಕ್ ಆಫ್ ಫೇಮ್ ಸಮಾರಂಭದಲ್ಲಿ ಮಾರ್ವೆಲ್ ಸ್ಟಾರ್ ಕಾಣಿಸಿಕೊಂಡಾಗ, ಇಬೇ ಬಳಕೆದಾರರು ಡೌನಿ ಉಗುಳಿದ ಚೂಯಿಂಗ್ ಗಮ್ ಅನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ‘ಐರನ್ ಮ್ಯಾನ್’ ನಿರ್ದೇಶಕ ಜಾನ್ ಫಾವ್ರೊ ಅವರಿಗೆ ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಅವಾರ್ಡ್ ನೀಡಿ ಗೌರವಿಸಿದಾಗ, ಡೌನಿ ತಮ್ಮ ಚೂಯಿಂಗ್ ಗಮ್ ಅನ್ನು ನೇರವಾಗಿ ಅವಾರ್ಡ್ ಮೇಲೆ ತಮಾಷೆಯಾಗಿ ಇರಿಸಿದರು. ನಟ ಅದನ್ನು ಉಗುಳಿದ ಸ್ಥಳದಿಂದ ಮಾರಾಟಗಾರನು ಆ ಚೂಯಿಂಗ್ ಗಮ್ ಅನ್ನು ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾನೆ.
ಗಮ್ ಅನ್ನು ದೃಢೀಕರಿಸಲು ಯಾವುದೇ ಮಾರ್ಗವಿಲ್ಲದಿದ್ದರೂ, ಅದರ ಮೇಲೆ ಡೌನಿಯವರ DNA ಇದೆಯೇ ಎಂದು ಪರೀಕ್ಷಿಸಬಹುದು ಎಂದು ಎಬಾಯ್ ಬಳಕೆದಾರ ಹೇಳಿದ್ದಾನೆ.
“ಹಲೋ! ಹಾಲಿವುಡ್ ವಾಕ್ ಆಫ್ ಫೇಮ್‌ಗೆ ಪಟ್ಟಿಗೆ ಪ್ರಸಿದ್ಧ ನಟ ಮತ್ತು ನಿರ್ಮಾಪಕ ಜಾನ್ ಫಾವ್ರೊ ಅವರನ್ನು ಸೇರಿಸುವ ಕಾರ್ಯಕ್ರಮದಲ್ಲಿ ನಾನು ಬಾಗಿಯಾಗಿದ್ದೆ. ಈ ಘಟನೆಯ ಸಮಯದಲ್ಲಿ, ರಾಬರ್ಟ್ ಡೌನಿ ಜೂನಿಯರ್ ಸ್ವತಃ ತಮ್ಮ ಗಮ್ ಅನ್ನು ಅವಾರ್ಡ್ ಮೇಲೆ ತಮಾಷೆಗೆ ಇಟ್ಟಿದ್ದರು ನಂತರ ಅದನ್ನು ಅಲ್ಲಿಯೇ ಬಿಟ್ಟರು, ಆ ಗಮ್ ಅನ್ನು ನಾನು ತೆಗೆದುಕೊಂಡೆ. ಈಗ ನಾನು ಡೌನಿ ಅಗೆದ ಗಮ್ ಅನ್ನು ಅದೇ ಸ್ಥಿತಿಯಲ್ಲಿ ಮಾರಾಟ ಮಾಡುತ್ತಿದ್ದೇನೆ. ಇದನ್ನು ಬೇಕಿದ್ದರೆ DNA ಪರೀಕ್ಷೆ ಮಾಡಿ ಖಚಿತಪಡಿಸಿಕೊಳ್ಳಬಹುದು. ”ಎಂದು ಇಬೇಯಲ್ಲಿನ ಹರಾಜಿಗಿಟ್ಟಿದ್ದಾರೆ.
ಈ ಗಮ್ eBay ಪಹರಾಜಿನಲ್ಲಿ ಈಗ $40,000 (Rs 32,56,227) ಕ್ಕಿಂತ ಹೆಚ್ಚು ಆರಂಭಿಕ ಬಿಡ್‌ನಲ್ಲಿದೆ. ಏಪ್ರಿಲ್ 1 ರಂದು ಹರಾಜು ಕೊನೆಗೊಳ್ಳಲಿದೆ.
ಇದನ್ನೂ ಓದಿ: ತೆರೆದ ಮೊಟ್ಟೆಯಲ್ಲಿ ಕೋಳಿಮರಿಯನ್ನು ಬೆಳೆಸಿದ ಯುವಕ
ABC7.com ಪ್ರಕಾರ, ಗಮ್ ಅನ್ನು ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಅದೃಷ್ಟದ ಬಿಡ್ಡರ್‌ಗೆ ರವಾನಿಸಲಾಗುತ್ತದೆ.
ಈ ವಿಚಿತ್ರ ಸುದ್ದಿ ಕೆಲವು ಇಂಟರ್ನೆಟ್ ಬಳಕೆದಾರರಿಗೆ ಅಸಹ್ಯ ಹುಟ್ಟಿಸಿದೆ. ಟ್ವಿಟ್ಟರ್‌ನಲ್ಲಿ ಒಬ್ಬ ಬಳಕೆದಾರ, ”ಎಂತಹ ವ್ಯಕ್ತಿಯೇ ಆಗಿರಲಿ, ನಾನು ಕೇರ್ ಮಾಡುವುದಿಲ್ಲ. ಒಬ್ಬ ವ್ಯಕ್ತಿ ಅಗೆದು, ಉಗುಳಿದ ಗಮ್ ಅನ್ನು ನಾನು ಇಂದಿಗೂ ಖರೀದಿ ಮಾಡುವುದಿಲ್ಲ, ಚೀ” ಎಂದು ಬರೆದಿದ್ದಾರೆ. ಮತ್ತೊಬ್ಬರು, ”ಇದೊಂದು ಅಸಯ್ಯ ಸಂಗತಿ” ಎಂದರು.