Viral Video: ತೆರೆದ ಮೊಟ್ಟೆಯಲ್ಲಿ ಕೋಳಿಮರಿಯನ್ನು ಬೆಳೆಸಿದ ಯುವಕ
ತೆರೆದ ಮೊಟ್ಟೆಯೊಂದರಲ್ಲಿ ಕೋಳಿಯ ಭ್ರೂಣವನ್ನಿಟ್ಟು ಅದಕ್ಕೆ ಕಾವು ಕೊಟ್ಟು ಕೃತಕ ವಿಧಾನದಲ್ಲಿ ಮರಿ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಿಜವಾಗಿಯೂ ಸಾಧ್ಯವೇ ಎಂಬುವುದು ಅನೇಕರ ಪ್ರಶ್ನೆ.
ತೆರೆದಿಟ್ಟ ಮೊಟ್ಟೆಯೊಳಗೆ ಅದರ ಹಳದಿ ಲೋಳೆಯ ಭ್ರೂಣವನ್ನಿಟ್ಟು ಜೀವಂತ ಮರಿಯನ್ನು ಕೃತಕ ವಿಧಾನದ ಮೂಲಕ ಅಭಿವೃದ್ಧಿಪಡಿಸುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಈ ವಿಡಿಯೋ ತುಣಕು ಹಳೆಯದು. ಮೂಲತಃ 2016ರಲ್ಲಿ ಇದನ್ನು ಹಂಚಿಕೊಳ್ಳಲಾಗಿತ್ತು. ಹಾಗೂ ಇತ್ತೀಚಿಗೆ ಮೆಡಿಕಲ್ ವಿಡಿಯೋಸ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಮರು ಪೋಸ್ಟ್ ಮಾಡಲಾಗಿದೆ. ಒಡೆದ ಮೊಟ್ಟೆಯಿಂದ ಕೋಳಿ ಮರಿ ಜೀವಂತವಾಗಿ ಬರುವವರೆಗೆ ಈ 21 ದಿನದ ಪ್ರಕ್ರಿಯೆಯನ್ನು ಕೆಲವೇ ನಿಮಿಷಗಳ ಈ ವೈರಲ್ ವೀಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಸುಮಾರು ೩ ಮಿಲಿಯಲ್ ವೀಕ್ಷಣೆಗಳನ್ನು ಮತ್ತು ಸುಮಾರು 32,000 ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವೀಡಿಯೋವನ್ನು ನೋಡಿದ ಅನೇಕ ಟ್ವಿಟರ್ ಬಳಕೆದಾರರಿಗೆ ಈ ಕೃತಕ ಪ್ರಕ್ರಿಯೆಯಲ್ಲಿ ಕೋಳಿಮರಿಯನ್ನು ಜೀವಂತವಾಗಿ ಬೆಳೆಸುವುದು ನಿಜವಾಗಿಯೂ ಸಾಧ್ಯನಾ ಎಂದು ನಂಬಲು ಕಷ್ಟಕರವಾಗಿತ್ತು. ಹಾಗೂ ಕಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಕ್ಲಿಪ್ನಲ್ಲಿ ವ್ಯಕ್ತಿಯೊರ್ವ ಮೊಟ್ಟೆಯನ್ನು ರೌಂಡ್ ಆಕಾರಕ್ಕೆ ಕಟ್ ಮಾಡಿ ಅದರಲ್ಲಿ ಮೊಟ್ಟೆಯ ಹಳದಿ ಲೋಳೆಯನ್ನು ಹಾಕಿ ಯಾವುದೋ ದ್ರವವೊಂದನ್ನು ಅದಕ್ಕೆ ಇಂಜೆಕ್ಟ್ ಮಾಡಿ ಪ್ಲಾಸ್ಟಿಕ್ ಚೀಲದಿಂದ ಮುಚ್ಚುತ್ತಾನೆ. ಈ ಪ್ರಕ್ರಿಯೆ ಹಲವು ಬಾರಿ ಮುಂದುವರೆದು, ಕಾವುಕೊಟ್ಟ ನಂತರ ಆ ಮೊಟ್ಟೆಯಿಂದ ಮರಿ ಹೊರಬರುವುದನ್ನು ತೋರಿಸುತ್ತದೆ.
Growing a chicken in the open egg ? pic.twitter.com/4RKi5M8KMl
— Medical Videos (@HowThingWork) March 29, 2023
ಇದನ್ನೂ ಓದಿ:Viral Video : ಈ ಪುಟ್ಟಿ ಅಪ್ಪನೆದುರು ಶಾಂತಮಯೀ, ಅಮ್ಮನೆದುರು ರುದ್ರಭಯಂಕರೀ
ಆ ವ್ಯಕ್ತಿ ಜಪಾನಿನ ವಿದ್ಯಾರ್ಥಿಯಾಗಿದ್ದು, ಕೆಲವು ಹಂತಗಳಲ್ಲಿ ಭ್ರೂಣಕ್ಕೆ ಜೀವ ತುಂಬಲು ಸಿರಿಂಜ್‌ನಿಂದ ಏನನ್ನೋ ಚುಚ್ಚುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಅನೇಕ ಬಳಕೆದಾರರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಅನೇಕರು ಇದು ಸುಳ್ಳು ಎಂದು ಹೇಳಿದ್ದಾರೆ. ಆದರೆ ಮಿಸ್ಸಿಸ್ಸಿಪ್ಪಿ ಸ್ಟೇಟ್ ಯೂನಿವರ್ಸಿಟಿಯ ಕೋಳಿ ವಿಜ್ಞಾನದ ಪ್ರಾಧ್ಯಾಪಕರಾದ ಇ ಡೇವಿಡ್ ಪೀಬಲ್ಸ್, ಈ ಪ್ರಕ್ರಿಯೆ ಸಾಧ್ಯ ಎಂದು ತಿಳಿಸಿದರು.
ಪ್ರೊಫೆಸರ್ ಪೀಬಲ್ಸ್ ಅವರು ಉತ್ತರ ಕೆರೊಲಿನಾ ಸ್ಟೇಟ್ ಯೂನಿವಸಿಟಿಯಲ್ಲಿ ಇದೇ ರೀತಿಯ ಮೊಟ್ಟೆಯಿಂದ ಮರಿ ಮಾಡುವ ಪ್ರಕ್ರಿಯೆಯನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ. ಹಾಗೂ ಈ ಪ್ರಕ್ರಿಯೆಯು ವಾಣಿಜ್ಯ ಕೋಳಿ ಸಾಕಾಣೆಯಲ್ಲಿ ಅಥವಾ ಆಹಾರಕ್ಕಾಗಿ ಕೋಳಿಗಳನ್ನು ಸಾಕಲು ಈ ವಿಧಾನವನ್ನು ಬಳಸಲಾಗುವುದಿಲ್ಲ ಎಂದು ಅವರು ಹೇಳಿದರು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Fri, 31 March 23