ಸಿಗರೇಟ್ ಸೇದಲು ಬ್ರೇಕ್ ತೆಗೆದುಕೊಂಡಿದ್ದಕ್ಕೆ $14,700 ಫೈನ್; ಜಪಾನಿನ ಉದ್ಯೋಗಿಗೆ ಶಾಕ್ ನೀಡಿದ ಕಂಪನಿ!

ಜಪಾನಿನ ವ್ಯಕ್ತಿಯೊಬ್ಬರು 14 ವರ್ಷಗಳಲ್ಲಿ 4,500 ಕ್ಕೂ ಹೆಚ್ಚು ಬಾರಿ ಧೂಮಪಾನಕ್ಕಾಗಿ ಕೆಲಸದ ಸಮಯದಲ್ಲಿ ಬ್ರೇಕ್ ತೆಗುಕೊಂಡಿದ್ದಾರೆ. ಇದೀಗ ಈ ವ್ಯಕ್ತಿಗೆ ಸುಮಾರು $14,700 ಮೌಲ್ಯದ ದಂಡವನ್ನು ಕಂಪನಿ ವಿಧಿಸಿದೆ.

ಸಿಗರೇಟ್ ಸೇದಲು ಬ್ರೇಕ್ ತೆಗೆದುಕೊಂಡಿದ್ದಕ್ಕೆ $14,700 ಫೈನ್; ಜಪಾನಿನ ಉದ್ಯೋಗಿಗೆ ಶಾಕ್ ನೀಡಿದ ಕಂಪನಿ!
Japanese man fined over $14.5k for taking smoke breaks during work hours
Follow us
ನಯನಾ ಎಸ್​ಪಿ
|

Updated on:Mar 30, 2023 | 5:24 PM

61 ವರ್ಷ ವಯಸ್ಸಿನ ಜಪಾನಿನ (Japan) ಸರ್ಕಾರಿ ಉದ್ಯೋಗಿ (Government employee) 14 ವರ್ಷಗಳಲ್ಲಿ 4,500 ಕ್ಕೂ ಹೆಚ್ಚು ಬಾರಿ ಕೆಲಸದ ಸಮಯದಲ್ಲಿ ಧೂಮಪಾನಕ್ಕೆ ವಿರಾಮ (Smoke break) ಪಡೆದುಕೊಂಡಿದ್ದಕ್ಕೆ ಈಗ ತೊಂದರೆಗೆ ಸಿಲುಕಿದ್ದಾರೆ. ಕಛೇರಿ ಸಮಯದಲ್ಲಿ ವಿರಾಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ಅವರಿಗೆ ಸುಮಾರು 1.44 ಮಿಲಿಯನ್ ಯೆನ್ (ಸುಮಾರು ರೂ.9 ಲಕ್ಷ) ಮೌಲ್ಯದ ದಂಡವನ್ನು ವಿಧಿಸಲಾಯಿತು ಎಂದು ಸ್ಟ್ರೈಟ್ಸ್ ಟೈಮ್ಸ್ (Straits Times) ವರದಿ ಮಾಡಿದೆ. ಸರ್ಕಾರಿ ಹಣಕಾಸು ವಿಭಾಗದ ಇಬ್ಬರು ಸಹೋದ್ಯೋಗಿಗಳೊಂದಿಗೆ ಸರ್ಕಾರಿ ನೌಕರನ ವಿರುದ್ಧ ಒಸಾಕಾ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ. ಅನೇಕ ಎಚ್ಚರಿಕೆಗಳ ಹೊರತಾಗಿಯೂ ಕೆಲಸದ ಸಮಯದಲ್ಲಿ ಪದೇ ಪದೇ ಧೂಮಪಾನ ಮಾಡಿದ್ದಕ್ಕಾಗಿ ಮುಂದಿನ 6 ತಿಂಗಳು ಶೇ.10 ರಷ್ಟು ವೇತನ ಕಡಿತವನ್ನು ವಿಧಿಸಿದರು.

2022 ರಲ್ಲಿ, ಮೂವರು ರಹಸ್ಯವಾಗಿ ತಂಬಾಕು ಸೇವಿಸುತ್ತಿದ್ದರೆ ಎಂದು ಮಾನವ ಸಂಪನ್ಮೂಲ ಕಚೇರಿಗೆ ಸುಳಿವು ಸಿಕ್ಕಿತು. ನಂತರ ನೌಕರರನ್ನು ಅವರ ಮೇಲ್ವಿಚಾರಕರು ಕರೆಸಿದರು ಮತ್ತು ಅವರು ಮತ್ತೆ ಧೂಮಪಾನ ಮಾಡಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಆದಾಗ್ಯೂ, ಮೂವರು ಧೂಮಪಾನವನ್ನು ಮುಂದುವರೆಸಿದರು ಮತ್ತು ಡಿಸೆಂಬರ್ 2022 ರಲ್ಲಿ ಸಂದರ್ಶನ ಮಾಡಿದಾಗ ಅದರ ಬಗ್ಗೆ ಸುಳ್ಳು ಹೇಳಿದರು.

ಮೂವರಲ್ಲಿ 61 ವರ್ಷದ ನಿರ್ದೇಶಕ ಮಟ್ಟದ ಉದ್ಯೋಗಿಯೊಬ್ಬರು ಸ್ಥಳೀಯ ಸಾರ್ವಜನಿಕ ಸೇವಾ ಕಾಯಿದೆಯಡಿಯಲ್ಲಿ “ಡ್ಯೂಟಿ ಆಫ್ ಡಿವೋಷನ್ ” ಅನ್ನು ಉಲ್ಲಂಘಿಸಿದ್ದಾರೆ ಎಂದು ವರದಿ ಹೇಳಿದೆ. ಶಿಸ್ತಿನ ವೇತನ ಕಡಿತದ ಜೊತೆಗೆ ತನ್ನ ಸಂಬಳದ 1.44 ಮಿಲಿಯನ್ ಯೆನ್ ಅನ್ನು ಹಿಂದಿರುಗಿಸಲು ಹೇಳಲಾಯಿತು.

ಆ ವ್ಯಕ್ತಿ ಕರ್ತವ್ಯದಲ್ಲಿ 355 ಗಂಟೆ 19 ನಿಮಿಷಗಳ ಕಾಲ ಧೂಮಪಾನ ಮಾಡಿದ್ದಾನೆ ಎಂದು ಪ್ರಿಫೆಕ್ಚರಲ್ ಸರ್ಕಾರ ಬಹಿರಂಗಪಡಿಸಿದೆ. ಒಸಾಕಾವು ಪ್ರಪಂಚದಲ್ಲಿ ಕೆಲವು ಕಠಿಣವಾದ ಧೂಮಪಾನ ಕಾನೂನುಗಳನ್ನು ಹೊಂದಿದೆ. 2008 ರಲ್ಲಿ, ಇದು ಕಚೇರಿಗಳು ಮತ್ತು ಸಾರ್ವಜನಿಕ ಶಾಲೆಗಳಂತಹ ಸರ್ಕಾರಿ ಆವರಣದಲ್ಲಿ ಸಂಪೂರ್ಣ ಧೂಪನವನ್ನು ನಿಷೇದಿಸಿತ್ತು. 2019 ರಿಂದ ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ಸ್ ಇಂಡೋರ್ ಚಾಂಪಿಯನ್‌ಶಿಪ್ 2023; 95 ವರ್ಷದ ಭಗವಾನಿ ದೇವಿಗೆ 3 ಚಿನ್ನದ ಪದಕ

2019 ರಲ್ಲಿ, ಒಸಾಕಾದ ಪ್ರೌಢಶಾಲಾ ಶಿಕ್ಷಕರೊಬ್ಬರು ಸುಮಾರು 3,400 ಅಕ್ರಮ ಧೂಮಪ್ಪನ ಮಾಡಲು ವಿರಾಮಗಳನ್ನು ತೆಗೆದುಕೊಂಡಿರುವುದು ಕಂಡುಬಂದ ನಂತರ ತಾತ್ಕಾಲಿಕ ವೇತನ ಕಡಿತದೊಂದಿಗೆ ಶಿಸ್ತುಬದ್ಧಗೊಳಿಸಲಾಯಿತು. ಅವರ ಸಂಬಳದ ಒಂದು ಮಿಲಿಯನ್ ಯೆನ್ ಅನ್ನು ಶಿಕ್ಷಣ ಸಚಿವಾಲಯಕ್ಕೆ ಹಿಂತಿರುಗಿಸುವಂತೆ ಕೇಳಲಾಗಿತ್ತು.

Published On - 5:17 pm, Thu, 30 March 23

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್