Idli History: ಇಡ್ಲಿ ಬಗ್ಗೆ ನಿಮಗೆಷ್ಟು ಗೊತ್ತು?; ದಕ್ಷಿಣ ಭಾರತೀಯರ ಅಚ್ಚುಮೆಚ್ಚಿನ ಈ ತಿಂಡಿ ಭಾರತದ್ದೇ ಅಲ್ಲ!

Interesting Facts about Idli-Sambar: ಇಂಡೋನೇಷಿಯನ್ ಭಕ್ಷ್ಯಗಳಾದ ಕೆಡ್ಲಿ ಮತ್ತು ಬುರಾಸ್ ತಿಂಡಿಗೂ ಇಡ್ಲಿಗೂ ಸಾಕಷ್ಟು ಹೋಲಿಕೆಯಿದೆ ಎಂದು ಇತಿಹಾಸ ಸೂಚಿಸುತ್ತದೆ.

Idli History: ಇಡ್ಲಿ ಬಗ್ಗೆ ನಿಮಗೆಷ್ಟು ಗೊತ್ತು?; ದಕ್ಷಿಣ ಭಾರತೀಯರ ಅಚ್ಚುಮೆಚ್ಚಿನ ಈ ತಿಂಡಿ ಭಾರತದ್ದೇ ಅಲ್ಲ!
ಇಡ್ಲಿ
Follow us
ಸುಷ್ಮಾ ಚಕ್ರೆ
|

Updated on: Feb 07, 2023 | 6:14 PM

ಬೆಳಗ್ಗೆ ಬಿಸಿಬಿಸಿಯಾದ ಇಡ್ಲಿಯೊಂದು (Idli) ಇದ್ದುಬಿಟ್ಟರೆ ಬಹುತೇಕರಿಗೆ ಹೋಟೆಲ್​ನಲ್ಲಿ ಬೇರಾವ ತಿಂಡಿಯೂ ಕಾಣುವುದಿಲ್ಲ. ಅನೇಕರ ಮನೆಯಲ್ಲೂ ಬೆಳಗ್ಗೆ ತಿಂಡಿಗೆ ಇಡ್ಲಿ, ದೋಸೆಗಳದ್ದೇ (Dosa) ದರ್ಬಾರು. ಈಗಂತೂ ಮಸಾಲ ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ರವಾ ಇಡ್ಲಿ, ಮಿನಿ ಇಡ್ಲಿ ಹೀಗೆ ನಾನಾ ಹೆಸರುಗಳಲ್ಲಿ ಇಡ್ಲಿ ಎಲ್ಲರ ಮನ ಗೆದ್ದಿದೆ. ಬೆಳಗಿನ ಉಪಾಹಾರಕ್ಕೆ ದಕ್ಷಿಣ ಭಾರತದಲ್ಲಿ ಹೆಚ್ಚು ಬಳಸುವ ಇಡ್ಲಿ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ…

ಇಡ್ಲಿ ಭಾರತ ಮೂಲದ ತಿಂಡಿಯೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಇಂಡೋನೇಷಿಯನ್ ಭಕ್ಷ್ಯಗಳಾದ ಕೆಡ್ಲಿ ಮತ್ತು ಬುರಾಸ್ ತಿಂಡಿಗೂ ಇಡ್ಲಿಗೂ ಸಾಕಷ್ಟು ಹೋಲಿಕೆಯಿದೆ ಎಂದು ಇತಿಹಾಸ ಸೂಚಿಸುತ್ತದೆ. ಕೆಲವರು ಇಡ್ಲಿಯನ್ನು ಸಾಂಬಾರ್​ನಲ್ಲಿ ಡಿಪ್ ಮಾಡಿ ತಿಂದರೆ ಇನ್ನು ಕೆಲವರು ಚಟ್ನಿಯೊಂದಿಗೆ ತಿನ್ನಲು ಹೆಚ್ಚು ಇಷ್ಟಪಡುತ್ತಾರೆ. ತಮಿಳುನಾಡಿನ ಹೋಟೆಲ್​ಗಳಲ್ಲಿ ರಸಂ ಜೊತೆಯೂ ಇಡ್ಲಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Health Tips: ಇಡ್ಲಿ-ಸಾಂಬಾರ್​​ನಿಂದ ದೀರ್ಘಾಯುಷ್ಯ, ತಜ್ಞರ ಅಭಿಪ್ರಾಯ ಇಲ್ಲಿದೆ

ನಮ್ಮದೇ ದೇಸಿ ತಿಂಡಿ ಎಂದು ನಾವು ಭಾವಿಸಿರುವ ಇಡ್ಲಿ ಇಂಡೋನೇಷ್ಯಾ ಮೂಲದ್ದು ಎಂದು ಇತಿಹಾಸ ಹೇಳುತ್ತದೆ. ಇಡ್ಲಿಗಳು ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಉತ್ತಮ ಮೂಲವಾಗಿದೆ. ಅವುಗಳನ್ನು ತಯಾರಿಸುವಲ್ಲಿ ಒಳಗೊಂಡಿರುವ ಹುದುಗುವಿಕೆ ಪ್ರಕ್ರಿಯೆಯು ಪ್ರೋಟೀನ್‌ಗಳ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ. ಇದನ್ನು ಹಬೆಯಲ್ಲಿ ಬೇಯಿಸುವುದರಿಂದ ಇಡ್ಲಿಯಲ್ಲಿ ಕೊಬ್ಬಿನಂಶ ಕಡಿಮೆಯಿರುತ್ತದೆ. ಇಡ್ಲಿಗಳು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ.

ಭಾರತದ ಆಹಾರ ಇತಿಹಾಸಕಾರರ ಪ್ರಕಾರ, ಕೆ.ಟಿ. ಅಚಾಯಾ ಇಡ್ಲಿಯು ಇಂಡೋನೇಷ್ಯಾದಲ್ಲಿ ತನ್ನ ಮೂಲವನ್ನು ಹೊಂದಿದೆ ಎನ್ನಲಾಗಿದೆ. ಇಡ್ಲಿಯು ಇಂದಿನ ಇಂಡೋನೇಷ್ಯಾದಿಂದ ಭಾರತಕ್ಕೆ ಬಂದ ತಿನಿಸಾಗಿದೆ. ಎ ಹಿಸ್ಟಾರಿಕಲ್ ಡಿಕ್ಷನರಿ ಆಫ್ ಇಂಡಿಯನ್ ಫುಡ್ ಎಂಬ ಪುಸ್ತಕದಲ್ಲಿ, 7ನೇ ಶತಮಾನದಲ್ಲಿ ಭಾರತದಲ್ಲಿ ಹಬೆಯಾಡುವ ಪಾತ್ರೆ ಇರಲಿಲ್ಲ ಎಂದು ಹೇಳಲಾಗಿದೆ. ಇಂಡೋನೇಷ್ಯಾದ “ಕೆಡ್ಲಿ” ಇಡ್ಲಿಯ ರೀತಿಯ ಹಬೆಯಿಂದ ಬೇಯಿಸಿದ ಕೇಕ್ ರೀತಿಯ ತಿನಿಸಾಗಿದ್ದು, ಭಾರತೀಯ ಇಡ್ಲಿ ಇದೇ ರೀತಿಯಲ್ಲಿ ಮಾಡಲಾಗುವ ತಿಂಡಿಯಾಗಿದೆ.

ಇದನ್ನೂ ಓದಿ: Beetroot Idli: ಆರೋಗ್ಯಕರ ಬೀಟ್ರೂಟ್ ಇಡ್ಲಿ ತಯಾರಿಸಿ ಸವಿಯಿರಿ

ಇದೇ ರೀತಿಯ ಮತ್ತೊಂದು ಇಂಡೋನೇಷಿಯನ್ ಖಾದ್ಯ “ಬುರಾಸ್” ಬಗ್ಗೆ ಉಲ್ಲೇಖವಿದೆ. ಇದು ಮೂಲಭೂತವಾಗಿ ತೆಂಗಿನ ಹಾಲಿನಲ್ಲಿ ಬೇಯಿಸಿದ ಆಯತಾಕಾರದ ಅಕ್ಕಿಯ ಕೇಕ್ ಆಗಿದೆ. ಇದನ್ನು ಮಸಾಲೆಯುಕ್ತ ತೆಂಗಿನಕಾಯಿ ಪುಡಿಯೊಂದಿಗೆ ನೀಡಲಾಗುತ್ತದೆ. ಕ್ರಿ.ಶ 800-1200ರ ನಡುವೆ ಇಂಡೋನೇಷ್ಯಾದ ಹಿಂದೂ ರಾಜರ ಜೊತೆಯಲ್ಲಿದ್ದ ಅಡುಗೆಯವರು ಇಡ್ಲಿ ಮಾದರಿಯ ತಿಂಡಿಯನ್ನು ತಯಾರಿಸಿದರು. ಇದನ್ನು ದಕ್ಷಿಣ ಭಾರತಕ್ಕೆ ತಂದರು ಎಂದು ಹೇಳಲಾಗುತ್ತದೆ.

ಕೆಲವು ಇತಿಹಾಸಕಾರರು ಇಡ್ಲಿ ಎಂಬ ಪದವು ಇಡ್ಡಲಿಗೆ ಎಂಬ ಪದದಿಂದ ಬಂದಿದೆ ಎನ್ನುತ್ತಾರೆ. ಹೀಗೆ, ನಾವೆಲ್ಲರೂ ಇಷ್ಟಪಟ್ಟು ತಿನ್ನುವ ಇಡ್ಲಿಯ ಬಗ್ಗೆ ಹಲವಾರು ಬೇರೆ ಬೇರೆ ರೀತಿಯ ಕತೆಗಳಿವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ