AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಇಡ್ಲಿ-ಸಾಂಬಾರ್​​ನಿಂದ ದೀರ್ಘಾಯುಷ್ಯ, ತಜ್ಞರ ಅಭಿಪ್ರಾಯ ಇಲ್ಲಿದೆ

ನಿಮ್ಮಲ್ಲಿ ಸಾಕಷ್ಟು ಜನರಿಗೆ ಬೆಳಗಿನ ಉಪಹಾರಗಳಲ್ಲಿ ಇಡ್ಲಿ-ಸಾಂಬಾರ್ ನೆಚ್ಚಿನ ಆಹಾರವಾಗಿದೆ. ತೆಂಗಿನಕಾಯಿ ಚಟ್ನಿ, ಸಂಬಾರು ಇದರಂತೂ ಇಡ್ಲಿಯ ರುಚಿಯಂತೂ ಅದ್ಭುತ.

Health Tips: ಇಡ್ಲಿ-ಸಾಂಬಾರ್​​ನಿಂದ ದೀರ್ಘಾಯುಷ್ಯ, ತಜ್ಞರ ಅಭಿಪ್ರಾಯ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: NDTV FOOD
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Dec 03, 2022 | 7:25 PM

ನಿಮ್ಮಲ್ಲಿ ಸಾಕಷ್ಟು ಜನರಿಗೆ ಬೆಳಗಿನ ಉಪಹಾರಗಳಲ್ಲಿ ಇಡ್ಲಿ-ಸಾಂಬಾರ್ (Idli Sambar) ನೆಚ್ಚಿನ ಆಹಾರವಾಗಿದೆ. ತೆಂಗಿನಕಾಯಿ ಚಟ್ನಿ, ಸಾಂಬಾರ್  ಇದರಂತೂ ಇಡ್ಲಿಯ ರುಚಿ ಅದ್ಭುತವಾಗಿರುತ್ತದೆ. ಇಡ್ಲಿ-ಸಾಂಬಾರ್ ಇದು ನಿಮ್ಮ ತೂಕ ಇಳಿಸುವಲ್ಲಿ ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ನೀವು ಪ್ರತಿ ದಿನ ಇಡ್ಲಿ-ಸಾಂಬಾರ್ ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಹೆಚ್ಚಿನ ಕೊಬ್ಬಿನ ಅಂಶವನ್ನು ಕರಗಿಸುವ ಶಕ್ತಿ ಇದಕ್ಕಿದೆ. ಇಡ್ಲಿ ಸಾಂಬಾರ್ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಸಹಾಯ ಮಾಡುತ್ತದೆ ಎಂದು ಪೌಷ್ಟಿಕತಜ್ಞ ಶಿಲ್ಪಾ ಅರೋರಾ ಸಲಹೆ ನೀಡುತ್ತಾರೆ.

ಸಾಮಾನ್ಯವಾಗಿ ಇಡ್ಲಿ ತಯಾರಿಸುವಾಗ ಅದರ ಹಿಟ್ಟನ್ನು ಹಿಂದಿನ ದಿನವೇ ಸಿದ್ಧಪಡಿಸಿ ಇಡಲಾಗುತ್ತದೆ. ಇಂತಹ ಹುದುಗಿಸಿದ ಆಹಾರಗಳಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದ್ದರಿಂದ ನೀವು ಇಡ್ಲಿ ಸೇವಿಸುವುದ್ದರಿಂದ ನಿಮ್ಮ ದೇಹವನ್ನು ಆರೋಗ್ಯವಾಗಿ ಇಡಬಹುದಾಗಿದೆ. ಮುಂದಿನ ದಿನ ರಾತ್ರಿಯೇ ಹಿಟ್ಟು ತಯಾರಿಸಿ ಇಡುವುದರಿಂದ ಮಾರನೇ ದಿನ ಹಿಟ್ಟು ಹುಬ್ಬಿಕೊಂಡು ಇರುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇಡ್ಲಿಯಂತಹ ಹುದುಗಿದ ಆಹಾರಗಳು ನಿಮ್ಮ ದೇಹದಲ್ಲಿನ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ವಿಭಜನೆಯನ್ನು ಮಾಡಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಹೊರತಾಗಿ, ಹುದುಗಿಸಿದ ಆಹಾರಗಳಲ್ಲಿ ಇರುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಇದು ನಿಮಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡುತ್ತದೆ ಎಂದು ಶಿಲ್ಪಾ ಅರೋರಾ ಹೇಳುತ್ತಾರೆ.

ಇದನ್ನು ಓದಿ: ನುಗ್ಗೆ ಸೊಪ್ಪು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಿ

ಕೇವಲ ಇಡ್ಲಿ ಮಾತ್ರವಲ್ಲದೇ ಇಡ್ಲಿಯೊಂದಿಗೆ ಸವಿಯುವ ಸಾಂಬಾರಿನಿಂದಲೂ ಕೂಡ ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನಗಳಿವೆ. ಸಾಮಾನ್ಯವಾಗಿ ಇಡ್ಲಿಯೊಂದಿನ ಸಾಂಬಾರಿನಲ್ಲಿ ಸಾಕಷ್ಟು ತರಕಾರಿಗಳನ್ನು ಬಳಸಲಾಗುತ್ತದೆ. ಇಂತಹ ತರಕಾರಿಗಳು ನಿಮ್ಮ ಆರೋಗ್ಯವನ್ನು ವೃದ್ದಿಸುವಲ್ಲಿ ಸಹಕಾರಿಯಾಗಿದೆ. ಸಾಂಬಾರ್ ವಿಷಯಕ್ಕೆ ಬಂದರೆ, ಇದರಲ್ಲಿ ಫೈಬರ್, ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಹೆಚ್ಚಾಗಿದ್ದು, ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುವ ಶಕ್ತಿಯನ್ನು ಹೊಂದಿದೆ. ಉತ್ತಮವಾದ ಜೀರ್ಣಕ್ರಿಯೆಯು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉಳಿಯದಂತೆ ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ದೇಹದಲ್ಲಿನ ಹೆಚ್ಚಿನ ತೂಕವನ್ನು ಇಳಿಸಲು ಪ್ರಚೋದನೆ ನೀಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:55 pm, Sat, 3 December 22

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್