ಇಡ್ಲಿ ವೆಂಡಿಂಗ್ ಮಶೀನ್; ಬೆಂಗಳೂರಿಗರಿಗೆ ಇನ್ನು ‘ಆಲ್​ ಟೈಮ್​ ಇಡ್ಲಿ’ ಲಭ್ಯ, ವಿಡಿಯೋ ವೈರಲ್

Idli Vending Machine : ಎಟಿಎಂ ನಂತೆ ಇನ್ನು 24 ಗಂಟೆಗಳ ಕಾಲವೂ ಬಿಸಿಬಿಸಿ ಇಡ್ಲಿ ಚಟ್ನಿ ಪಡೆಯಬಹುದಾದ ಮಶೀನ್ ಬೆಂಗಳೂರಿಗೆ ಕಾಲಿಟ್ಟಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ಇಂಥ ಯಂತ್ರಗಳನ್ನು ಸ್ಥಾಪಿಸಿ ಎನ್ನುತ್ತಿದ್ದಾರೆ ನೆಟ್ಟಿಗರು.

ಇಡ್ಲಿ ವೆಂಡಿಂಗ್ ಮಶೀನ್; ಬೆಂಗಳೂರಿಗರಿಗೆ ಇನ್ನು ‘ಆಲ್​ ಟೈಮ್​ ಇಡ್ಲಿ’ ಲಭ್ಯ, ವಿಡಿಯೋ ವೈರಲ್
Idli Vending Machine From Bengaluru Has Surprised Foodies
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 14, 2022 | 4:18 PM

Viral Video : ಕೊವಿಡ್​ ಎರಗುತ್ತಿದ್ದಂತೆ ತಂತ್ರಜ್ಞಾನ ಕ್ಷೇತ್ರದ ಮೇಲೆ ಅತಿವೇಗದಲ್ಲಿ ನಾವು ಅವಲಂಬಿತರಾದೆವು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಡಿಜಿಟಲ್​ ಜಗತ್ತಿನ ಮೂಲಕ ಬದುಕುವುದನ್ನು ಕಲಿತುಬಿಟ್ಟೆವು. ಎಲ್ಲಕ್ಕಿಂತ ಮುಖ್ಯವಾಗಿ ತಂತ್ರಜ್ಞಾನದ ಮೂಲಕ ನಮ್ಮನ್ನು ತನ್ನೆಡೆ ಸೆಳೆದುಕೊಂಡಿದ್ದು ಹೋಟೆಲ್ ಉದ್ಯಮ. ಅದಕ್ಕೆ ಪೂರಕವಾಗಿ ಆನ್​ಲೈನ್​ ಡೆಲಿವರಿ ವ್ಯವಸ್ಥೆ ಕ್ಷಿಪ್ರಗತಿಯಲ್ಲಿ ವ್ಯಾಪಿಸಿಕೊಂಡಿತು. ಇನ್ನು ದೊಡ್ಡ ದೊಡ್ಡ ರೆಸ್ಟೋರೆಂಟ್​ಗಳಲ್ಲಿ ಸರ್ವರ್​ ಮತ್ತು ಅಡುಗೆಭಟ್ಟರ ಬದಲಾಗಿ ರೋಬೋಟ್​ಗಳು ಕಾಣಿಸಿಕೊಂಡವು. ಕ್ರಮೇಣ ಹೋಟೆಲ್​ಗಳಲ್ಲಿಯೂ ರೋಬೋಟ್​ಗಳು ಕಾಲಿಟ್ಟರೆ ಅಚ್ಚರಿ ಪಡಬೇಕಿಲ್ಲ. ಅಷ್ಟೇ ಏಕೆ ಎಟಿಎಂ ಮಶೀನ್​ಗಳಂತೆ ತಿಂಡಿ ಮಶೀನ್​ಗಳು ಅಲ್ಲಲ್ಲಿ ಸ್ಥಾಪಿಸಲ್ಪಡುವ ದಿನಗಳು ದೂರವೇನಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಅದಿತಿ ಅಹುಜಾ ಕಂಪೆನಿಯು ಆವಿಷ್ಕರಿಸಿದ ಇಡ್ಲಿ ವೆಂಡಿಂಗ್ ಮಶೀನಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನ FreshHot ಹೊಸ ಮಾದರಿಯ ಈ ಇಡ್ಲಿ ವೆಂಡಿಂಗ್ ಮಶೀನ್ ಅನ್ನು ಸ್ಥಾಪಿಸಿದೆ. ಮೊಬೈಲ್​ನಲ್ಲಿ ಮೆನು ಸೆಲೆಕ್ಟ್ ಮಾಡಿಕೊಂಡು ಮಶೀನಿಗೆ ಸ್ವೈಪ್ ಮಾಡಿದರೆ ಕೆಲ ನಿಮಿಷಗಳಲ್ಲಿಯೇ ಈ ಮಶೀನ್​ನಿಂದ ಬಿಸಿಬಿಸಿ ಇಡ್ಲಿ ಮತ್ತು ಚಟ್ನಿಯ ಪೊಟ್ಟಣ ಕೈಗೆ ಬರುತ್ತದೆ. ಹೋಟೆಲ್ ಮುಚ್ಚಿತು ಎಂದೋ, ಆನ್​ಲೈನ್​ ಸರ್ವೀಸ್ ಇಲ್ಲವೆಂದೋ ಬೇಸರಿಸಬೇಕಿಲ್ಲ. 24 ಗಂಟೆಗಳ ಕಾಲವೂ ಇಲ್ಲಿ ಇಡ್ಲಿ ಚಟ್ನಿ ಲಭ್ಯ. ಇಡ್ಲಿ ಅಷ್ಟೇ ಅಲ್ಲ ವಡಾ, ಉಪ್ಪಿಟ್ಟು ಮುಂತಾದ ಖಾದ್ಯಗಳೂ ಲಭ್ಯ. ಬೆಂಗಳೂರು ಮೂಲದ ಫುಡ್​ ಬ್ಲಾಗರ್ ಒಬ್ಬರು ಇದನ್ನು ವಿಡಿಯೋ ಮಾಡಿದ್ದಾರೆ. ಪಿ. ಪದ್ಮನಾಭನ್​ ಎನ್ನುವವರು ಟ್ವಿಟರ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋ 2 ಮಿಲಿಯನ್​ ಜನರನ್ನು ತಲುಪಿದೆ.

ಈ ವಿಡಿಯೋ ನೆಟ್ಟಿಗರನ್ನು ಬಹುವಾಗಿ ಆಕರ್ಷಿಸಿದೆ ಮತ್ತು ಹಲವಾರು ರೀತಿಯಲ್ಲಿ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚಿಸುವಂತೆಯೂ ಮಾಡಿದೆ. ಇದು ಬಹಳ ಆಕರ್ಷಕವಾಗಿದೆ, ಅತ್ಯುತ್ತಮವಾದ ತಾಂತ್ರಿಕತೆಯಿಂದ ಕೂಡಿದೆ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ. ಬಹಳಷ್ಟು ಜನಕ್ಕೆ ಆಹಾರದ ಅವಶ್ಯಕತೆ ಇದೆ, ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಮಶೀನುಗಳನ್ನು ಸ್ಥಾಪಿಸಿ. ಅವರು ಉಚಿತವಾಗಿ ತಿಂಡಿ ಪಡೆಯಲಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಮನೆಯಲ್ಲಿ ಇಡ್ಲಿ ಮಾಡಿಕೊಂಡು ತಿನ್ನುವುದು ಸುಲಭ ಮತ್ತು ಆರೋಗ್ಯಕರ. ನಾನು ಇಂಥ ಮಶೀನ್ ಇಡ್ಲಿಗಳನ್ನು ತಿಂದು ಅನಾರೋಗ್ಯಕ್ಕೆ ಈಡಾಗಿದ್ದಿದೆ ಎಂದಿದ್ದಾರೆ ಮಗದೊಬ್ಬರು. ಶುಚಿ ರುಚಿ ಬಿಸಿ ಎಲ್ಲವೂ ಸರಿ ಆದರೆ ಬೆಲೆ? ಎಂದು ಕಳವಳಕ್ಕೀಡಾಗಿದ್ದಾರೆ ಇನ್ನೂ ಒಬ್ಬರು. ಈ ಕುರಿತು ಸಾಕಷ್ಟು ತಮಾಷೆಯುಕ್ತ ಮೀಮ್​ಗಳನ್ನು ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.

ನಿಮಗೇನು ಅನ್ನಿಸುತ್ತೆ ಈ ಇಡ್ಲಿ ವೆಂಡಿಂಗ್ ಮಶೀನ್​ ಬಗ್ಗೆ?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 4:07 pm, Fri, 14 October 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ