ಹಸಿದ ಮೊಸಳೆಯೂ ಮುಂದೆ ತರುಣಿಯೂ, ಮುಂದೇನಾಗುತ್ತದೆ?
Alligator : ನಿನಗೆ ಹಸಿವಾಗಿದೆಯಾ, ಹಸಿವಾಗಿದೆಯಾ? ಎಂದು ನಗುತ್ತಾ ಕಾಡಿಸುತ್ತಿದ್ದಾಳೆ ಈ ತರುಣಿ. ಬ್ರಹ್ಮಾಂಡ ಹಸಿವಿನಿಂದ ಕಂಗಾಲಾಗಿರುವ ಈ ದೈತ್ಯಮೊಸಳೆ ದೊಡ್ಡ ಬಾಯಿತೆಗೆದು ಹೂಂಕರಿಸುತ್ತಿದೆ.

Viral Video : ಸಿಕ್ಕಾಪಟ್ಟೆ ಹಸಿವಾಗಿದೆ ಈ ಮೊಸಳೆರಾಯನಿಗೆ. ಮೊದಲೇ ದೊಡ್ಡಬಾಯಿ, ಆಕೆಯನ್ನೇ ನುಂಗಿದರೆ? ಏನಾದರೂ ಕೊಟ್ಟರೆ ಸರಿ ಈಗ ಎಂದು ಹೂಂಕರಿಸ್ತಾ ಇದೆ. ಬೆಕ್ಕಿಗೆ ಚಿಣ್ಣಾಟ ಇಲಿಗೆ ಪ್ರಾಣಸಂಕಟ ಅನ್ನೋ ಹಾಗಿದೆ ಈ ದೃಶ್ಯ. ಹೌದಾ ಹೌದಾ… ನಿನಗೆ ಹಸಿವಾಗಿದೆಯಾ ಎಂದು ಜೋರಾಗಿ ನಗುತ್ತ ಅದರ ಸುತ್ತ ಓಡಾಡುತ್ತಿದ್ದಾಳೆ. ಅದು ಆಕೆಯನ್ನೇ ನುಂಗುವಂತೆ ಬಾಯಿ ತೆರೆಯುತ್ತಿದೆ. ಆಕೆಯ ನಗು ಅದನ್ನು ಇನ್ನಷ್ಟು ಕೆರಳಿಸುತ್ತಿದೆ. ಮುಂದೇನಾಗುತ್ತದೆ? ನೋಡಿ ವಿಡಿಯೋ.
ಅಂದುಕೊಂಡ ಹಾಗೆ ಏನೂ ಆಗಲಿಲ್ಲ ಅಲ್ವಾ? ಹೌದು, ಈಕೆಗೆ ಮೊಸಳೆಗಳನ್ನು ನೋಡಿಕೊಳ್ಳುವ ವಿಷಯದಲ್ಲಿ ಎರಡು ವರ್ಷದ ಅನುಭವ ಇದೆ. ಈಕೆ ಪ್ರಾಣಿಸಂಗ್ರಹಾಲಯದ ಪೋಷಕಿ. ಹಾಗಾಗಿ ಅದನ್ನು ಆಟವಾಡಿಸುತ್ತ ಸಮಾಧಾನಪಡಿಸಲು ನೋಡುತ್ತಿದ್ದಾಳೆ. ನಿನಗೆ ಊಟ ಕೊಡುವುದಿಲ್ಲ ಎಂದೂ ಕಾಡಿಸುತ್ತಿದ್ದಾಳೆ.
Thereptilezoo ಎಂಬ ಇನ್ಸ್ಟಾಗ್ರಾಂ ಪುಟವು ಸುಮಾರು 2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದೆ. ಈ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇದು 2 ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ತಲುಪಿದೆ. 16,000 ಜನ ಇದನ್ನು ಮೆಚ್ಚಿದ್ದಾರೆ. ಕ್ಯಾಲಿಫೋರ್ನಿಯಾದ ಫೌಂಟೇನ್ ವ್ಯಾಲಿಯಲ್ಲಿರುವ ದಿ ರೆಪ್ಟೈಲ್ ಝೂನಲ್ಲಿರುವ ಸರೀಸೃಪಗಳ ವಿಡಿಯೋ ಅನ್ನು ಆಗಾಗ ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಜೇ ಬ್ರೂವರ್ ಎನ್ನುವವರು ಈ ಪ್ರಾಣಿಸಂಗ್ರಹಾಲಯವನ್ನು ಸ್ಥಾಪಿಸಿದ್ದಾರೆ. ಇವರು ಹೆಬ್ಬಾವುಗಳ ಸಂತಾನೋತ್ಪತ್ತಿ ವಿಷಯದಲ್ಲಿ ಪರಿಣತರು. ಇವರಿಗೆ 6 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಇನ್ಸ್ಟಾಗ್ರಾಂನಲ್ಲಿದ್ದಾರೆ.
ನೆಟ್ಟಿಗರು ಈ ವಿಡಿಯೋ ನೋಡಿ, ರಿಯಾಲಿಟಿ ಶೋನಲ್ಲಿ ನೀವಿಬ್ಬರೂ ಭಾಗವಹಿಸಿ ಎಂದಿದ್ದಾರೆ ಒಬ್ಬರು. ನೀವು ಗಾಜನ್ನು ಸರಿದಾಗೆಲ್ಲ ನನಗೆ ಭಯವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಮ್ಮ ತೋಳುಗಳು ಮೊಸಳೆಗೆ ಕೋಳಿಗಳಂತೆ ಕಾಣುತ್ತಿರಬೇಕು ಎಂದಿದ್ದಾರೆ ಮಗದೊಬ್ಬರು.
ನಿಮಗೂ ಭಯವಾಯಿರಾ ಇವರಿಬ್ಬರ ಆಟ ನೋಡಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:32 pm, Fri, 14 October 22